Scientific Name: Morinda citrifolia
ನೋನಿ ಎಂಬ ಪದ ಕೇಳದವರು ಇರಲಿಕ್ಕಿಲ್ಲ. ಉಪ್ಪು ಸಾಸಿವೆ ಇಲ್ಲದ ಮನೆ ಹುಡಿಕಿ ಬಾ ಎಂದು ಹೇಳಿದರೆ ಹುಡಿಕಿದವನಿಗೆ ಒಂದು ಮನೆಯೂ ಸಿಗಲಾರದು. ಹಾಗೆಯೇ ನೋನಿ ಎಂಬ ಟಾನಿಕ್ ಬಾಟ್ಲಿ ಇಲ್ಲದ ಮನೆಯೂ ಸಿಗಲಾರದೇನೋ ಎನ್ನುವಷ್ಟು ನೋನಿ ಮೇಲೆ ಜಾಹೀರಾತು ಪ್ರಭಾವ ಬೀರಿದೆ. ಜಾಹೀರಾತು ಸಾಮೂಹಿಕ ಸನ್ನಿಗೊಳಪಡಿಸುತ್ತದೆ. ಇದೇ ನೋನಿ ಎಂಬ ಟಾನಿಕ್ ನೋನಿ ಮರದಲ್ಲಿ ಆಗುವ ಹಣ್ಣಿನಿಂದ ಮಾಡುತ್ತಾರೆ. ಈ ನೋನಿ ಮರದ ಬಗ್ಗೆಯಾಗಲೀ ನೋನಿ ಹಣ್ಣಿನ ಬಗ್ಗೆಯಾಗಲೀ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಇಲ್ಲ. ಅಲ್ಲದೆ ಭಾರತದಲ್ಲಿ ಬೆಳೆಯುವ ಒಂದಲ್ಲ ಒಂದು ಗಿಡ ಔಷಧಿಯಾಗಿ ಬಳಸಲ್ಪಡುತ್ತದೆ. ಹಾಗೂ ಎಲ್ಲಾ ಗಿಡಗಳ ಉಲ್ಲೇಖವೂ ಕಂಡುಬರುತ್ತದೆ. ನೋನಿ ಭಾರತದ ಉದ್ದಗಲಕ್ಕೂ ಕಂಡು ಬರುವ ಮರ. ಏಷ್ಯಾದ ದಕ್ಷಿಣ ಪೂರ್ವ ಭಾಗಗಳಾದ ಆಸ್ಟೇಲಿಯಾ, ಇಂಡೋನೇಷಿಯಾ, ಮಲೇಶಿಯಾಗಳಲ್ಲಿ ಕಂಡುಬರುತ್ತದೆ.
ಎರಡುಸಾವಿರ ವರ್ಷಗಳಿಂದ ಉಲ್ಲೇಖ ಇದ್ದರೂ ಐದು ಸಾವಿರ ವರ್ಷಗಳ ಇತಿಹಾಸ ಇರುವ ಆಯುರ್ವೇದ ಗ್ರಂಥಗಳಲ್ಲಿ ಕಂಡುಬರುವುದಿಲ್ಲ.

೧೦-೨೦ ಅಡಿ ಸುಲಭವಾಗಿ ಬಹು ಬೇಗನೆ ಬೆಳೆದು ದೊಡ್ಡದಾಗುವ ಮರವಾಗಿದೆ. ಉದ್ದವಾದ ದೊಡ್ಡ ಎಲೆ, ಗೊಂಚಲಲ್ಲಿ ಕಂಡು ಬರುವ ಮಲ್ಲಿಗೆಯಂತಹ ಬಿಳಿ ಸಣ್ಣ ಹೂ, ಉದ್ದ ಅಥವಾ ಅಂಡಾಕಾರದಲ್ಲಿ ದೊಡ್ಡ ಬಟಾಟೆ ಆಕಾರದಲ್ಲಿ, ಹೊರ ಭಾಗ ಹಲಸಿನ ಹಣ್ಣಿನಂತೆ ಮುಳ್ಳು ಇಲ್ಲದೆ ನಯವಾದ ರಚನೆ, ಎಳತು ಇರುವಾಗ ಹಸಿರಾಗಿ ನಂತರ ನಸು ಪಚ್ಚೆ ಬಣ್ಣದಲ್ಲಿ ಕಂಡರೆ ಬೆಳೆದು ಹಣ್ಣಾದರೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ವಿಶೇಷ ವಾಸನೆಯುಕ್ತ ಕಹಿ ಹಣ್ಣು. ಇದರಲ್ಲಿ vit C, vit E ಮೊದಲಾದ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಪೋಷಕಾಂಶಗಳು ಇವೆ ಎಂದು ಸಂಶೋದಿಸಲ್ಪಟ್ಟಿದೆ. ಇದರ ಕೆಟ್ಟ ವಾಸನೆ ಹಾಗೂ ಕಹಿಯನ್ನು ನಿವಾರಿಸಲು ಸಿಹಿ ದ್ರವ್ಯಗಳನ್ನು ಮತ್ತು ಪರಿಮಳವನ್ನು ಸೇರಿಸಲೇ ಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ ಸಿಗುವ ನೋನಿ ಟಾನಿಕ್ಗಳು ಒಂದು ಸಾವಿರದಿಂದ ಒಂದೂವರೆ ಸಾವಿರ ಬೆಲೆ ಬಾಳಿದರೆ ಹೊರದೇಶದ “ತಾಹಿಟಿಯನ್” ನೋನಿ ಮೂವತ್ತೆರೆಡು ಸಾವಿರ ರುಪಾಯಿ ಬೆಲೆಬಾಳುತ್ತದೆ.
ಹಣ್ಣಾದ ನೋನಿ ಹಣ್ಣನ್ನು ಸಂಗ್ರಹಿಸಿ ಹೊರಗಿನ ಸಿಪ್ಪೆ, ಬೀಜ ಬೇರ್ಪಡಿಸಿ ರಸ ಸಂಗ್ರಹಿಸಿ ಸ್ವಲ ಬೆಲ್ಲ ಧಾತಕಿ ಹೂ ಹಾಕಿ ಮಿಶ್ರ ಮಾಡಿ ೪೦-೫೦ ದಿನ ನಂತರ ಸೋಸಿ ಸಂಗ್ರಹಿಸಿದರೆ ಉತ್ತಮ ನೋನಿ ಆಸವ ಆಗಿರುತ್ತದೆ. ಇದನ್ನು ಅಜೀರ್ಣ, ಮೈ ಕೈ ನೋವು, ಗಂಟುನೋವು ಅತಿಮೂತ್ರ ಕಡಿಮೆ ಮಾಡುವುದು. ಜೀರ್ಣ ಕ್ರಿಯೆ ಉತ್ತಮಗೊಳಿಸುವುದು. ಸಿಹಿ ರೋಗ (ಮಧುಮೇಹ) ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದು.

ಇದರಲ್ಲಿ ವಿಟಮಿನ್ಗಳು ಅಲ್ಲದೆ ಕಬ್ಬಿಣದ ಅಂಶ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಇದೆ. ಪೊಟ್ಯಾಸಿಯಂ ಸ್ವಲ್ಪ ಅಧಿಕ ಪ್ರಮಾಣದಲ್ಲಿದೆ. ಒಂದು ಲೆಕ್ಕಾಚಾರದದಂತೆ ಪ್ರಪಂಚದಾದ್ಯಂತ ೧೬೦ ಮಿಲಿಯ ಲೀಟರ್ ನೋನಿ ಸಿರಪ್ ೮೦ ದೇಶಗಳಲ್ಲಿ ದಿನವೊಂದಕ್ಕೆ ವಿಕ್ರಯವಾಗುತ್ತದೆ. ಕೆಲವು ಕಾಯಿಲೆಗಳಿಗೆ ಔಷಧಿಯಾಗಿ ಪರಿಣಾಮ ಬೀರಿದರೆ ಬೆಳೆದರೆ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಬಹುದು.
ನಿರ್ದಿಷ್ಟ ಕಾಯಿಲೆಗಾಗಿ ಇದನ್ನು ಉಪಯೋಗಿಸುವುದಿಲ್ಲ. ವ್ಯಾಧಿಕ್ಷಮತೆ ವೃದ್ಧಿಗಾಗಿ ಉಪಯೋಗ. ಇದನ್ನು ಆಸವ- ಅರಿಷ್ಟಗಳಂತೆ ತಯಾರಿಸಿ ೧೫-೨೦ml ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆ ಮಾಡುವುದು. ಜೀರ್ಣಕ್ರಿಯೆ ವೃದ್ಧಿ ಮಾಡುವುದು.
ಕೃಷಿ: ಬೀಜ ಬಿದ್ದಲ್ಲಿ ಮೊಳಕೆ ಒಡೆದು ಮರವಾಗುತ್ತದೆ. ಕೊಂಬೆಯನ್ನು ತುಂಡು ಮಾಡಿ ನೆಟ್ಟರೂ ಗಿಡವಾಗಿ ಮರವಾಗುತ್ತದೆ. ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಹಣ್ಣುಗಳನ್ನು ನೀಡುತ್ತದೆ. ಕೆಲವು ಪಕ್ಷಿಗಳು ಇದನ್ನು ಆಹಾರವಾಗಿ ಸೇವನೆ ಮಾಡುತ್ತದೆ. ಹಣ್ಣುಗಳನ್ನು ಆಯುರ್ವೇದ ಫಾರ್ಮಸಿಯವರು ಖರೀದಿಸುತ್ತಾರೆ.