cientific Name: ಬಿಳಿ : Bauhinia acuminata
ಕೆಂಪು: Bauhinia variegata
ರಂಗನಾಯಕಿ ಚಿತ್ರದ “ಮಂದಾರ ಪುಷ್ಪವು ನೀನು.. ಸಿಂಧೂರ ತಿಲಕವು ನೀನು… ಹಾಡು ಎಲ್ಲರೂ ಆಸ್ವಾದಿಸಿರಬಹುದು. ಆ ಹೂವಿನ ಬಗ್ಗೆ ಕುತೂಹಲ ಮೂಡಿರಬಹುದು. ಸಂಸ್ಕೃತದಲ್ಲಿ “ಕಾಂಚನಾರ” ಎಂದು
ಕರೆಯಲ್ಪಡುವ ಸಣ್ಣ ಮರ. ದೊರಗಾದ ಕಪ್ಪು ವರ್ಣದ ತೊಗm.ೆ ಎರಡು ಎಲೆಗಳು ಸೇರಿ ರಚನೆಯಾದಂತೆ
ಎಲೆಗಳು ಕಂಡುಬರುತ್ತದೆ. ಮಂದಾರ ಎರಡು ಪ್ರಭೇದಗಳಲ್ಲಿ ಗುರುತಿಸಲ್ಪಡುತ್ತದೆ. ಬಿಳಿ ಮತ್ತು ಕೆಂಪು. ಕೆಂಪು ಬಣ್ಣದ ಹೂವಿನ ಪ್ರಭೇದಕ್ಕೆ ಔಷಧಿ ಗುಣ ಅಧಿಕ. ಬೀನ್ಸ್ ಕೋಡಿನಂತೆ ಚಟ್ಟೆಯಾಕಾರದಲ್ಲಿ ಕಂಡುಬರುವ ಫಲ. ಒಂದು ಕೋಡಿನೊಳಗೆ ೧೦-೧೫ ಬೀಜಗಳಿರುತ್ತದೆ.
ಇದನ್ನು ಗಳಲೆ, ಥೈರಾಯ್ಡ್, ಮಧುಮೇಹ, ಸ್ಥೂಲ ಶರೀರ (Obesity), ಕ್ಯಾನ್ಸರ್ ಕಾಯಿಲೆ, ಸ್ತ್ರೀವ್ಯಾಧಿಗಳಲ್ಲಿ
ಉಪಯೋಗಿಸುತ್ತಾರೆ.
ಗಳಲೆ(Lymph nodes):
ತುಂಬಾ ಸಮಯದಿಂದ ಶೀತ, ಕಫ, ಜ್ವರಗಳಿದ್ದು ಇನ್ಫೆಕ್ಷನ್ ಆದರೆ ಕುತ್ತಿಗೆ ಭಾಗದಲ್ಲಿ ಗಳಲೆಗಳು ದಪ್ಪವಾಗಿ ಕೈಗೆ ಸಿಗುತ್ತದೆ. ಇದರ ನಿವಾರಣೆಗೆ ಮಂದಾರದ ತೊಗಟೆ ಕಷಾಯ ಅಥವಾ ನಯವಾದ ಚೂರ್ಣವನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಸೇವಿಸುವುದರಿಂದ ಕಡಿಮೆಯಾಗುವುದು.
ಥೈರಾಯ್ಡ್:
ಕುತ್ತಿಗೆ ಭಾಗದಲ್ಲಿ ಕಂಡುಬರುವ ಗ್ರಂಥಿ. ಅಯೋಡಿನ್ ಸೇವನೆ ಶರೀರಕ್ಕೆ ಸೂಕ್ತ ಪ್ರಮಾಣದಲ್ಲಿ ಸಿಗದಿದ್ದರೂ ಆಕಾರದಲ್ಲಿ ವೃದ್ಧಿಯಾಗುತ್ತದೆ. ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನ್ ವ್ಯತ್ಯಯ ಆದರೂ ಶರೀರದ
ಮೇಲೆ ವಿಶಿಷ್ಟ ಪರಿಣಾಮ ಕಂಡುಬರುತ್ತದೆ. Thyroxine ಹಾರ್ಮೋನ್ ಸ್ರಾವ ಕಡಿಮೆಯಾದರೆ ಮಂದಾರದ
ತೊಗಟೆಯ ಪುಡಿ, ಕಷಾಯ ಅಥವಾ ಇದನ್ನು ಇನ್ನಿತರ ಔಷಧಿಗಳೊಂದಿಗೆ ಸೇವಿಸಿದರೆ ಪ್ರಯೋಜನವಾಗುವುದು.
ಕ್ಯಾನ್ಸರ್:
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುವ ಮನುಕುಲದ ಮಾರಿ ಕ್ಯಾನ್ಸರ್. ಕೆಲವು ಗಿಡಮೂಲಿಕೆಗಳು ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡುತ್ತದೆ ಎಂದು ಆಯುರ್ವೇದ ಸಂಹಿತೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದರಲ್ಲಿ
ಮಂದಾರವೂ ಒಂದು. ಮಂಗಳೂರಿನ ಯೇನಪೋಯಾ ರಿಸರ್ಚ್ ವಿಭಾಗ ಮಂದಾರ ವೃಕ್ಷದ ತೊಗಟೆ ಹಾಗೂ
ಮಧುನಾಶಿನಿ ಎಂಬ ಇನ್ನೊಂದು ಗಿಡಮೂಲಿಕೆ ಮುಖದ ಕ್ಯಾನ್ಸರ್ನಲ್ಲಿ (Mouth cancer) ಅದ್ಭುತವಾಗಿ ಕೆಲಸಮಾಡುತ್ತದೆ ಎಂದು ಹೇಳಿದೆ.
ತೊಗಟೆಯ ಪುಡಿ ಅಥವಾ ತೊಗಟೆಯನ್ನು ಕಷಾಯ ಮಾಡಿ ನಿರ್ಧಿಷ್ಟ ಪ್ರಮಾಣದಲ್ಲಿ ಸೇವಿಸುವುದರಿಂದ ಪ್ರಯೋಜನ ಕಂಡುಬರುತ್ತದೆ.
ಸ್ಥೌಲ್ಯ(Obesity):
ಈಗ ನಾವು ತಿನ್ನುವ ಆಹಾರದ ಪ್ರಮಾಣ ಅಧಿಕ. ಹಾಗೆಯೇ ಬೊಜ್ಜು ಬೆಳೆಯುವುದೂ ಅಧಿಕ.
ಬೊಜ್ಜು ಕರಗಿಸಲು ಇದರ ತೊಗಟೆ ಕಷಾಯ ಅಥವಾ ಪುಡಿಯನ್ನು ಉಪಯೋಗಿಸಲಾಗುತ್ತದೆ. ಇದರ
ತೊಗಟೆಯನ್ನು ಇತರ ಔಷಧಿಗಳೊಂದಿಗೆ ಸೇರಿಸಿ ಅಧಿಕ ಪರಿಣಾಮ ಪಡೆಯಬಹುದು.
ಬಂಜೆತನ :
ಸ್ತ್ರೀಯರ ಅಂಡಾಶಯದಲ್ಲಿ ಸಿಸ್ಟ್ಗಳು ಕಂಡುಬರುವುದಕ್ಕೆ “ಪಾಲಿಸಿಸ್ಟಿಕ್ ಓವರಿ” ಎನ್ನುತ್ತಾರೆ. ಇದು ಕಂಡುಬಂದರೆ ಹೆಚ್ಚಾಗಿ ಅಂಡಾಣು ಉತ್ಪತ್ತಿಯಾಗುವುದಿಲ್ಲ. ಅಂಡಾಣು ಉತ್ಪತ್ತಿ ಆಗದಿದ್ದಲ್ಲಿ ಬಂಜೆತನಕ್ಕೆ
ಕಾರಣವಾಗುತ್ತದೆ. ಇಂತಹ ಸಿಸ್ಟ್ಗಳನ್ನು ಕಡಿಮೆ ಮಾಡಲು ಮಂದಾರದ ತೊಗಟೆ ಸಹಾಯ ಮಾಡುವುದು.
ಅನಿಯಮಿತ ಋತುಸ್ರಾವ ಅಥವಾ ಅತಿಸ್ರಾವದಲ್ಲಿಯೂ ಉಪಯೋಗಿಸಲಾಗುತ್ತದೆ.
ಮಧುಮೇಹ:
ಪ್ಯಾಂಕ್ರಿಯಾಸ್ ಗ್ರಂಥಿಯ ತೊಂದರೆಯಿಂದ ಇನ್ಸುಲಿನ್ ಉತ್ಪತ್ತಿಯ ಕೊರತೆ ಉಂಟಾಗುತ್ತದೆ. ಆಗ ಮಧುಮೇಹ ಕಂಡುಬರುತ್ತದೆ. ಈ ಗ್ರಂಥಿಯ ಊತದಿಂದ ಪ್ಯಾಂಕ್ರಿಯಾಸ್ನಲ್ಲಿ ವ್ಯತ್ಯಯ ಆಗಿದ್ದರೆ ಮಂದಾರವನ್ನು ಉಪಯೋಗಿಸುವುದರಿಂದ ಗ್ರಂಥಿ ಊತ ಕಡಿಮೆಯಾಗಿ ಸ್ವಲ್ಪ ಮಟ್ಟಿಗೆ ಮಧುಮೇಹವನ್ನು ನಿಯಂತ್ರಿಸಬಹುದು. ತುಂಬಾ ಕಾಯಿಲೆಗಳಿಗೆ ಒಂದು ಗಿಡಮೂಲಿಕೆ ಸಾಕು. ಬೇರೇನೂ ಇನ್ನು ಬೇಡ ಎಂದು ಅನಿಸಬಹುದು. ಆದರೆ ಗಿಡಮೂಲಿಕೆಗಳಿಗೆ ತುಂಬಾ ಕಾಯಿಲೆಗಳನ್ನು ನಿಯಂತ್ರಿಸುವ ಗುಣವಿದ್ದರೂ ಆಯುರ್ವೇದದಲ್ಲಿ ರೋಗಿಯ ಪ್ರಕೃತಿ, ತ್ರಿದೋಷಗಳನ್ನು ಕೂಲಂಕುಶ ಪರಿಶೀಲಿಸಿ ಯೋಗ್ಯ ಪ್ರಮಾಣದಲ್ಲಿ ಯೋಗ್ಯ ಸಮಯದಲ್ಲಿ ಪ್ರಯೋಗಿಸಿದರೆ ಮಾತ್ರ ಪ್ರಯೋಜನ ಕಂಡುಕೊಳ್ಳಬಹುದು.
ಡಾ| ಹರಿಕೃಷ್ಣ ಪಾಣಾಜೆ