Scientific Name : Ficus religiosa
ಅರಳಿಮರ, ಬೋಧಿವೃಕ್ಷ ಎಂಬ ಹೆಸರಿರುವ ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ನಾಳೆಯೂ ಸ್ಥಿರವಾಗಿರುವ ಮರ ಎಂಬುದಾಗಿ ಅರ್ಥ. ರಾಮಾಯಣ, ಮಹಾಭಾರತ, ಭಗವದ್ಗೀತೆ ಉಪನಿಷತ್‌ಗಳಲ್ಲಿ ಉಲ್ಲೇಖ ಕಂಡು ಬರುವುದು. ೨ ೧/೨ ರಿಂದ ೩ ಸಾವಿರ ವರ್ಷ ಬಾಳಿ ಬದುಕುವ ದೈವೀ ವೃಕ್ಷ. ಎಲ್ಲಾ ವೃಕ್ಷಗಳೂ ಹಗಲಿನಲ್ಲಿ ಆಕ್ಸಿಜನ್ ಬಿಡುಗಡೆ ಮಾಡಿದರೆ ಅಶ್ವತ್ಥ ದಿನದ ೨೪ ಗಂಟೆಯೂ ಬಿಡುಗಡೆ ಮಾಡುತ್ತದೆ. ಅತ್ಯಧಿಕ ಆಕ್ಸಿಜನ್ ಬಿಡುಗಡೆ ಮಾಡುವ ಕೆಲವೇ ಕೆಲವು ವೃಕ್ಷಗಳಲ್ಲಿ ಇದೂ ಒಂದು. ದಿನ ಒಂದಕ್ಕೆ ಒಂದು ಸಾವಿರ ಜನರಿಗೆ ಬೇಕಾದಷ್ಠು ಆಮ್ಲಜನಕವನ್ನು ಬಿಡುಗಡೆ ಮಾಡುವ ತಾಕತ್ತು ಈ ಮರಕ್ಕಿದೆ. ಕೊರೋನಾ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಸ್ಥಳ ಇಲ್ಲದಿರುವಾಗ ಅಶ್ವತ್ಥ ಮರದ ಕಳಗೆ ಮಲಗಿ ಬದುಕಿ ಬಂದವರೂ ಇದ್ದಾರೆಂದು ಉತ್ತರ ಭಾರತದವರು ಹೇಳುತ್ತಾರೆ. ಗೌತಮ ಬುದ್ಧನಿಗೆ ಜ್ಞಾನೋದಯವಾದದ್ದೂ ಇದೇ ವೃಕ್ಷದ ಕೆಳಗೆ. ಋಷಿಮುನಿಗಳು ಪಾಠ ಮಾಡುತ್ತಿದ್ದದ್ದೂ ಇದೇ ವೃಕ್ಷದ ಕೆಳಗೆ. ಇದು ಜೈನರಿಗೆ, ಬೌದ್ಧರಿಗೆ, ಹಿಂದೂಗಳಿಗೂ ಪವಿತ್ರ ಮರ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಮರಗಳಲ್ಲಿ ಅಶ್ವತ್ಥ ಮರ ನಾನೇ ಎನ್ನುತ್ತಾನೆ. ಅಂದರೆ ವಿಷ್ಣುವಿನ ಆವಾಸ ಸ್ಥಾನ ಹಾಗೂ ಆಯುರ್ವೇದವನ್ನು ಪ್ರಪಂಚಕ್ಕೆ ಪ್ರಚುರ ಪಡಿಸಿದ ಅಶ್ವಿನೀ ದೇವತೆಗಳೂ ಈ ಮರವನ್ನು ಆಶ್ರಯಿಸಿದ್ದಾರೆ ಎನ್ನುತ್ತಾರೆ. ಇದು ಪ್ರಪಂಚದ ಮರ, ಪವಿತ್ರ ಮರ, ಜೀವನ ಪಾವನವಾಗಿಸುವ ಮರ. ಪ್ರಾಣ ಉಳಿಸಲು ಅಗತ್ಯವಿರುವ ಆಮ್ಲಜನಕ ಉತ್ಪತ್ತಿಯಲ್ಲಿ ಮಹತ್ವ ಪಾತ್ರ ವಹಿಸುವುದರಿಂದಲೇ ಇದಕ್ಕೆ ಪೂಜನೀಯ ಸ್ಥಾನಸಿಕ್ಕಿದೆ.

ಬಿಳಿಕಾಂಡ, ನಯವಾದ ಹೃದಯಾಕರದ ಎಲೆಗಳು ಚೂಪಾದ ತುದಿ, ಸದಾ ಚಲನಶೀಲವಾಗಿರಲು ಉದ್ದವಾದ ಸ್ಪಿçಂಗ್‌ನAತಿರುವ ತೊಟ್ಟು, ಸರ‍್ಯನ ಬಿಸಿಲಿಗೆ ಹಾಗೂ ಗಾಳಿಯ ಹೊಡೆತಕ್ಕೆ ಪಳಪಳ ಹೊಳೆಯುತ್ತದೆ. ಎಂತಹ ಬಂಡೆಯನ್ನಾದರೂ ಸೀಳಿ ಬೇರನ್ನು ಇಳಿ ಬಿಡುತ್ತದೆ. ಮನೆಯ ಆಗ್ನೇಯಕ್ಕೆ ಇದನ್ನು ನೆಡುವುದು ವಾಡಿಕೆ. ವಾತಾವರಣ ಕಲುಶಿತವಾಗಿರುವಲ್ಲಿ ಇದು ವೇಗವಾಗಿ ಬೆಳೆಯುತ್ತದೆ. ಕಾರ್ಬನ್ ಡೈ ಆಕ್ಸೆöÊಡ್ ಉಪಯೋಗಿಸಿ ಆಮ್ಲಜನಕ ಅಧಿಕ ಬಿಡುಗಡೆ ಮಾಡುತ್ತದೆ. ದೆಹಲಿಯಂತಹ ಅಧಿಕ ವಾತಾವರಣ ಕಲುಷಿತವಿರುವಲ್ಲಿ ಅಶ್ವತ್ಥವನ್ನು ಇತ್ತೀಚಿನ ದಿನಗಳಲ್ಲಿ ಅಧಿಕ ನೆಡುತ್ತಿದ್ದಾರೆ.
ಎಲೆಗಳಲ್ಲಿ ಗ್ಲೂಕೋಸ್, ಮಿನರಲ್ಸ್ ಇದ್ದರೆ ತೊಗಟೆಯಲ್ಲಿ ವಿಟಮಿನ್ K (vitamin K) ವಿಟಮಿನ್ C ( vitamin C) ಅಧಿಕ ಪ್ರಮಾಣದಲ್ಲಿ ಇದೆ.
ಸೌಂದರ್ಯವರ್ದಕ: ಎಲೆಯನ್ನು ಮೊಸರಿನ ಮೇಲ್ಪದರ, ಲಿಂಬೆರಸದೊAದಿಗೆ ಅರೆದು ಮಿಶ್ರಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ವೃದ್ಧಿಯಾಗುವುದು. ಮುಖದ ನೆರಿಗೆ ನಿವಾರಣೆಗೆ ಅಗತ್ಯವಿರುವ ಕೊಲಾಜಿನ್ ಉತ್ಪತ್ತಿಗೆ ಸಹಾಯ ಮಾಡುವುದು.
ಎಲೆಗಳನ್ನು ತೆಂಗಿನೆಣ್ಣೆಯಲ್ಲಿ ಮುಳುಗಿಸಿ ಸರ‍್ಯನ ಬಿಸಿಲಲ್ಲಿ ಒಂದು ವಾರ ಇಟ್ಟು ಎಲೆಗಳನ್ನು ಪ್ರತ್ಯೇಕಿಸಿ ಗ್ಲಾಸಿನ ಬಾಟ್ಲಿಯಲ್ಲಿ ಸಂಗ್ರಹಿಸಬೇಕು. ಇದನ್ನು ಮುಖದ ಕಲೆಗಳಿಗೆ ಹಾಗೂ ಒಣಗುವಿಕೆಯನ್ನು ಕಡಿಮೆ ಮಾಡಲು ಉಪಯೋಗಿಸಬಹುದು.
ಹಲ್ಲು : ತೊಗಟೆಯ ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳು ದೃಢವಾಗುವುದು.
ಚರ್ಮದ ಹುಣ್ಣು : ಗುಣವಾಗದ ಹುಣ್ಣುಗಳಿದ್ದರೆ ತೊಗಟೆಯನ್ನು ಕಷಾಯಮಾಡಿ ತೊಳೆಯುವುದರಿಂದ ಕೀವು ಉತ್ಪತ್ತಿಯಾಗುವುದು ಕಡಿಮೆಯಾಗಿ ಹುಣ್ಣು ಬೇಗ ಗುಣವಾಗುವುದು.
ಅಲರ್ಜಿ, ತುರಿಕೆ : ಬಾಳೆ ಹಣ್ಣನ್ನು ಅರೆದು ಅದರ ರಸ ತೆಗೆದು ಅಶ್ವತ್ಥ ಚೂರ್ಣದೊಂದಿಗೆ ಸೇರಿಸಿ ತುರಿಕೆ, ಬೆಸರ್ಪು, ದಡಿಕೆಗಳು ಇರುವಲ್ಲಿಗೆ ಹಚ್ಚಿದರೆ ಕಡಿಮೆಯಾಗುವುದು.
ಬೆಂಕಿ : ಬೆಂಕಿ ತಾಗಿ ಉರಿ, ನೋವು ಇರುವಾಗ ಅಶ್ವತ್ಥ ಚಿಗುರೆಲೆಯನ್ನು ನೀರು ಸೇರಿಸದೆ ಅರೆದು ಲೇಪಿಸುವುದರಿಂದ ಕಡಿಮೆಯಾಗುವುದು.
ವಾಂತಿ : ೨-೩ ಎಲೆಗಳನ್ನು ಸಣ್ಣ ಪಾತ್ರೆಗೆ ಹಾಕಿ ಕುದಿಯುವ ನೀರು ಹಾಕಿ ಮುಚ್ಚಿಡಬೇಕು. ತಣಿದ ನಂತರ ಎಲೆಯನ್ನು ಪ್ರತ್ಯೇಕಿಸಿ ಸ್ವಲ್ಪ ಸ್ವಲ್ಪವೇ ಕುಡಿಯುವುದರಿಂದ ವಾಂತಿ ನಿವಾರಣೆಯಾಗುವುದು.
ಉಗ್ಗು : ಮಕ್ಕಳು ಮಾತಾಡುವಾಗ ತೊದಲುತ್ತಿದ್ದರೆ ೨-೩ ಎಲೆಗಳನ್ನು ತೊಳೆದು ಜಗಿದು ನುಂಗಬೇಕು. ಹೀಗೆ ೨-೩ ವಾರ ಮಾಡುವುದರಿಂದ ಪ್ರಯೋಜನವಾಗುವುದು.
ಒಣ ಕೆಮ್ಮು : ಕಫ ಇಲ್ಲದೆ ಕುಟ್ಟಿ ಕುಟ್ಟಿ ಬರುವ ಕೆಮ್ಮಿಗೆ ತೊಗಟೆ ಕಷಾಯ ಮಾಡಿ ಜೇನು ಮಿಶ್ರಮಾಡಿ ದಿನಕ್ಕೆ ೨-೩ ಸಲ ಕುಡಿಯಬೇಕು.
ಲೈಂಗಿಕ ನಿಶ್ಶಕ್ತಿ : ಅಶ್ವತ್ಥದ ಹಣ್ಣು, ಬೇರಿನ ತೊಗಟೆ, ಚಿಗುರು ಎಲೆಯನ್ನು ಹಾಲಿನಲ್ಲಿ ಅರೆದು ಜೇನು ಮತ್ತು ಕಲ್ಲು ಸಕ್ಕರೆ ಸೇರಿಸಿ ಬೆಳಿಗ್ಗೆ ಎರಡುವಾರ ಸೇವಿಸಬೇಕು. ಇದನ್ನು ಎರಡು ತಿಂಗಳಿಗೊಮ್ಮೆ ಆವರ್ತಿಸಬಹುದು.
ನೋವು : ಗಂಟುಗಳಲ್ಲಿ ನೋವುಗಳಿದ್ದರೆ ತೊಗಟೆ ಕಷಾಯ ಮಾಡಿ ಒಂದು ಚಮಚ ಜೇನು ಸೇರಿಸಿ ಒಂದು ವಾರ ಕುಡಿಯಬೇಕು.
ಗರ್ಭಾಶಯ : ಸ್ತ್ರೀಯರ ಮಾಸಿಕ ಅತಿಸ್ರಾವ , ಬಿಳಿಸ್ರಾವ, ನಿವಾರಿಸಿ ಗರ್ಭಾಶಯದ ರಕ್ಷಣೆಮಾಡುವುದು. ೧೦ ಗ್ರಾಂ ನಷ್ಠು ತೊಗಟೆ ಕಷಾಯ ಮಾಡಿ ೧೪ ದಿನ ಕುಡಿಯಬೇಕು.
ಕೃಷಿ : ಬೀಜದಿಂದ ಗಿಡಗಳು ಹುಟ್ಟುತ್ತದೆ. ಪರಿಸರಕ್ಕೆ ಅಗತ್ಯವಾಗಿರುವುದರಿಂದ ಸರಕಾರವೂ ಎಚ್ಚೆತ್ತುಕೊಂಡು ಗಿಡ ಮಾಡಿ ಜನರಿಗೆ ಕೊಡುತ್ತಿದ್ದಾರೆ. ಎಲ್ಲವನ್ನು ಸ್ವಂತಕ್ಕೆ ಮಾಡುವ ಈ ಕಾಲದಲ್ಲಿಯೂ ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರೊಫೆಸರ್ ಡಾ| ಶ್ರೀಶ ಕುಮಾರ್ ಒಂದು ಎಕರೆ ಜಾಗ ಖರೀದಿಸಿ ಕೇವಲ ಅಶ್ವತ್ಥ ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ಪರಿಸರಕ್ಕೆ ಅಶ್ವತ್ಥ ಮರದಿಂದ ಉಪಯೋಗವಾಗಲಿ ಎಂಬ ಅವರ ಕಾಳಜಿ ಊರಿನ ಕೆಲವು ಜನರಿಗೆ ಬಂದು ಒಬ್ಬರು ಒಂದು ಮರ ನೆಟ್ಟು ಬೆಳೆಸಿದರೂ ನಮ್ಮ ವಾತಾವರಣ ಶುದ್ಧಿಯಾಗುವ ಮೂಲಕ ರೋಗ ಮುಕ್ತ ಸಮಾಜ ನಿರ್ಮಾಣ ಆಗಬಹುದು.
