Skip links

ಅಣಿಲೆ

Scientific name :Terminalia chebula

    ಸಂಸ್ಕøತದಲ್ಲಿ ಹರೀತಕೀ, ಅಭಯ, ಪಥ್ಯಾ ಎಂಬ ಬೇರೆ ಬೇರೆ ಹೆಸರುಗಳು ಅಣಿಲೆಕಾಯಿಗೆ ಇದೆ.  

ಅಳಲೆಕಾಯಿ (ಅಣಿಲೆಕಾಯಿ) ಪಂಡಿತರು ಎಂಬುದಾಗಿ ಆಯುರ್ವೇದಔಷಧಿಗಳ ಬಗ್ಗೆ ತಿಳಿದಿರುವವರಿಗೆ ಕೀಳಾಗಿ ಕರೆಯುವುದು ಇದೆ. ಆದರೆ ಅಣಿಲೆಯ ಎಲ್ಲಾ ಉಪಯೋಗ ತಿಳಿದಿದ್ದರೆ ಅವರೊಬ್ಬ ಶ್ರೇಷ್ಠ ಪಂಡಿತರೆನ್ನಬಹುದು.  

“ಯಸ್ಯ ಮಾತಾ ಗೃಹೇ ನಾಸ್ತಿ

ತಸ್ಯ ಮಾತಾ ಹರೀತಕೀ”||

ಎಂಬುದಾಗಿ ಸಂಸ್ಕøತದಲ್ಲಿ ಒಂದು ಉಲ್ಲೇಖ ಇದೆ. ಅಂದರೆ, ಯಾರ ಮನೆಯಲ್ಲಿ ತಾಯಿ ಇಲ್ಲವೋ ಅವರ ಮನೆಯಲ್ಲಿ ಅಣಿಲೆ ಇದ್ದರೆ ಅದು ತಾಯಿಗೆ ಸಮಾನ. ಅಷ್ಟೊಂದು ಉಪಯೋಗ ಅಣಿಲೆಯಿಂದ ಆಗುವುದರಿಂದ ತಾಯಿಗೆ ಸಮಾನವಾಗಿ ಗುರುತಿಸಿದ್ದಾರೆ.  

ಅಣಿಲೆ ಮರ 50 ರಿಂದ 80 ಅಡಿ ಎತ್ತರ ಬೆಳೆಯುತ್ತದೆ. ಗಾರ್ಡನಿಗೆ ಸೂಕ್ತ ಅಲ್ಲದಿದ್ದರೂ ನಮ್ಮ ಜಮೀನಿನಲ್ಲಿ ಬೆಳಸಬಹುದಾದ ಮರ. 3-8 ಇಂಚು ಉದ್ದ 2-4 ಇಂಚು ಅಗಲದ ಎದುರು ಬದುರಾದ ಎಲೆಗಳು ಕಂಡುಬರುತ್ತದೆ. ಮಾವಿನ ಹೂ ಗೊಂಚಲಿನಂತೆ ಹೂಗಳು ಕಂಡುಬಂದರೆ ಮಾವಿನ ಮಿಡಿ ಗೊಂಚಲಿನಂತೆ ಅಣಿಲೆಕಾಯಿಗಳು ಗೊಂಚಲಲ್ಲಿ ಕಂಡುಬರುತ್ತದೆ. ಪ್ರತಿ ಫಲದ ದಪ್ಪ ಸಿಪ್ಪೆಯ ಒಳಗೆ ಒಂದು ಬೀಜ ಇರುತ್ತದೆ. ಹಣ್ಣಾದ ಫಲ ಒಣಗಿಸಿದ ನಂತರ ಸಿಪ್ಪೆಯನ್ನು ಪ್ರತ್ಯೇಕಿಸಿ ಔಷಧಿಗಾಗಿ ಉಪಯೋಗಿಸಲಾಗುತ್ತದೆ. ನೆಲ್ಲಿ  ಕಾಯಿಯಂತೆ ಇದರಲ್ಲಿಯೂ ಲವಣ(ಉಪ್ಪು) ರಸ ಬಿಟ್ಟು ಉಳಿದ ಐದು ರಸ ಸಿಹಿ, ಹುಳಿ, ಕಹಿ, ಖಾರ, ಚೊಗರುಗಳ ಅನುಭವ ಆಗುತ್ತದೆ. ಆದರೆ ಚೊಗರು ರಸ ಪ್ರಧಾನವಾಗಿ ಗೋಚರವಾಗುತ್ತದೆ. ಇದರ ಉಪಯೋಗ ಹಲವು. ಅನುಭವೀ ವೈದ್ಯ ಇದನ್ನು ಉಪಯೋಗಿಸಿ ಹಲವು ರೋಗಗಳನ್ನು ಗುಣ ಪಡಿಸಬಹುದು. ಮಲಬದ್ದತೆ, ಅಜೀರ್ಣ, ಚರ್ಮವ್ಯಾಧಿ, ಬಾವು, ಕಣ್ಣಿನ ತೊಂದರೆಗಳಲ್ಲಿ, ಕೃಶ ಶರೀರ ಪುಷ್ಠಿಮಾಡಲು, ಕಫ ಕೆಮ್ಮು, ಮಧುಮೇಹ, ಮೂಲವ್ಯಾದಿ, ಕ್ರಿಮಿಬಾದೆ, ತಲೆನೋವು, ಮನೋದೌರ್ಬಲ್ಯ, ವಿಸರ್ಪ(ಬೆಸರ್ಪು), ಜಾಂಡೀಸ್, ಯಕೃತ್, ಪ್ಲೀಹಾ ವೃದ್ಧಿ, ಮೂತ್ರಉರಿ, ಮೂತ್ರದ ಕಲ್ಲು ಅಲ್ಲದೆ ಇನ್ನು ಹಲವಾರು ವ್ಯಾಧಿಗಳಲ್ಲಿ ಉಪಯೋಗಿಸಿ ಪ್ರಯೋಜನ ಪಡೆಯಬಹುದು.  

  ಇದರ ಪುಡಿಯನ್ನು  ಇಂದುಪ್ಪಿನೊಂದಿಗೆ ಸೇವಿಸಿದರೆ ಕಫ ಕಡಿಮೆ ಮಾಡುವುದು. ಸಕ್ಕರೆಯೊಂದಿಗೆ ಸೇವಿಸಿದರೆ ಪಿತ್ತವನ್ನು ಕಡಿಮೆಮಾಡುವುದು. ತುಪ್ಪದೊಂದಿಗೆ ಸೇವಿಸಿದರೆ ವಾತವನ್ನು ಕಡಿಮೆಮಾಡುವುದು.

ಋತುಗಳಿಗೆ ಅನುಸಾರ ಇತರ ವನಸ್ಪತಿಯೊಂದಿಗೆ ಸೇವಿಸಿದರೆ ವ್ಯಾಧಿಕ್ಷಮತೆ ವೃದ್ಧಿಯಾಗಿ ಕಾಯಿಲೆ ಬರದಂತೆ ತಡೆಗಟ್ಟವುದು.  ವರ್ಷಾ ಋತುವಿನಲ್ಲಿ (June-July) ಇಂದುಪ್ಪಿನೊಂದಿಗೆ, ಶರತ್ ಋತುವಿನಲ್ಲಿ (Aug-Sep) ಸಕ್ಕರೆಯೊಂದಿಗೆ, ಹೇಮಂತ ಋತುವಿನಲ್ಲಿ (Oct-Nov) ಶುಂಠಿಯೊಂದಿಗೆ, ಶಿಶಿರ ಋತುವಿನಲ್ಲಿ (ಆeಛಿ-ಎಚಿಟಿ) ಪಿಪ್ಪಲಿಯೊಂದಿಗೆ, ವಸಂತ ಋತುವಿನಲ್ಲಿ (Feb-Mar) ಜೇನಿನೊಂದಿಗೆ, ಗ್ರೀಷ್ಮ ಋತುವಿನಲ್ಲಿ (April-May) ಬೆಲ್ಲದೊಂದಿಗೆ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

   ಬುದ್ಧಿ, ಬಲ, ಇಂದ್ರಿಯಗಳ ಉನ್ಮೀಲನ ಮಾಡುವುದು. ವಾತಪಿತ್ತ ಕಫಗಳ ನಿರ್ಮೂಲನ ಮಾಡುವುದು. ಮಲ ಮೂತ್ರದ ವಿಸರ್ಜನೆ ಸರಿಯಾಗಿ ಮಾಡುವುದು ಎಂಬುದಾಗಿ ಭಾವಪ್ರಕಾಶದಲ್ಲಿ ಹೇಳಿದ್ದಾರೆ. ಇದರ ಇನ್ನೊಂದು ವಿಶೇಷತೆ ಎಂದರೆ ಇದನ್ನು ಬಾಯಲ್ಲಿ ಜಗಿದು ನುಂಗಿದರೆ ಹಸಿವು ಉಂಟಾಗುವುದು. ನಯವಾಗಿ ಪುಡಿ(ಚೂರ್ಣ) ಮಾಡಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು. ಬೇಯಿಸಿ ಕಷಾಯ ಮಾಡಿ ಕುಡಿದರೆ ಮಲ ಕೆಲವೊಮ್ಮೆ ಗಟ್ಟಿ, ಕೆಲವೊಮ್ಮೆ ನೀರಾಗಿ ಹೋಗುವ “ಗ್ರಹಣಿ” ಕಾಯಿಲೆಯನ್ನು ಗುಣ ಮಾಡುವುದು. ಗುಣವಾಗದ ಹುಣ್ಣುಗಳನ್ನು ತೊಳೆಯಲು ಇದರ ಕಷಾಯ ಸೂಕ್ತ. ಬಾಯಿ ಹುಣ್ಣಾಗಿರುವಾಗ ಇದರ ಕಷಾಯದಿಂದ ಬಾಯಿಮುಕ್ಕಳಿಸಬಹುದು. ಬಾಯಿ ದುರ್ಗಂಧ ಕಡಿಮೆಯಾಗುವುದು.  

   ಮಲಬದ್ದತೆ, ಮೂಲವ್ಯಾದಿ, ಹೊಟ್ಟೆಉಬ್ಬರ ಗಳಿರುವಾಗ 2-3 ಗ್ರಾಂ ಚೂರ್ಣವನ್ನು ನೀರಲ್ಲಿ ಕಲಸಿ ದಿನಕ್ಕೆರಡು ಸಲ ಕುಡಿಯುವುದರಿಂದ ಗುಣವಾಗುವುದು. ಇದನ್ನೇ ಮುಖ್ಯವಾಗಿ ಉಪಯೋಗಿಸಿ ತಯಾರಿಸಿದ ಅಭಯಾರಿಷ್ಠ (ಮಲಬದ್ಧತೆ), ಪಥ್ಯಾದಿಖಾಡ (ತಲೆನೋವು), ಅಗಸ್ತ್ಯ ಹರೀತಕೀ ಲೇಹ (ಕೆಮ್ಮು, ಉಬ್ಬಸ), ಅಭಯಾಮಲಕೀ ರಾಸಾಯನ (ದೇಹಪುಷ್ಠಿ) ಹೀಗೆ ಹಲವು ಔಷಧಿಗಳು ಪ್ರಸಿದ್ಧವಾಗಿದೆ.  

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.