Skip links

ನೆಲ್ಲಿ ಕಾಯ

Scientific Name : Emblica officinalis

ಸಂಸ್ಕøತದಲ್ಲಿ ಆಮಲಕಿ (ತಾಳಿ ಕೊಳ್ಳುವ) ಎನ್ನುತ್ತಾರೆ. 20-25 ಫೀಟ್ ಎತ್ತರ ಬೆಳೆಯುವ ಸಣ್ಣ ಪ್ರಮಾಣದ ಮರ. ಭಾರತದ ಎಲ್ಲಾ ಕಡೆ ಕಂಡುಬರುವ ವೃಕ್ಷ. ಸಿಹಿ, ಹುಳಿ, ಲವಣ(ಉಪ್ಪು) ಕಹಿ, ಖಾರ, ಚೊಗರು ಎಂಬ 6 ರಸಗಳು ನಮಗೆ ನಾಲಗೆ ಮೂಲಕ ಅನುಭವಕ್ಕೆ ಬರುತ್ತದೆ. ಈ ಆರು ರಸಗಳಲ್ಲಿ ಲವಣ (ಉಪ್ಪು) ರಸ ಬಿಟ್ಟು ಉಳಿದ 5 ರಸಗಳ ಅನುಭವವೂ ನೆಲ್ಲಿ ಕಾಯಿಯನ್ನು ತಿನ್ನುವಾಗ ಅನುಭವಿಸುತ್ತೇವೆ. 5 ರಸಗಳೂ ಒಂದೇ ಫಲದಲ್ಲಿ ಸಿಗುವ ವಿಶೇಷ ವನಸ್ಪತಿ. ಶರೀರ ಮತ್ತು ಮೆದುಳಿಗೆ ತಾಕತ್ತು ನೀಡುವ ದಿವ್ಯೌಷಧಿ.

ಇದರ ಉಪಯೋಗಗಳನ್ನು ಪಟ್ಟಿ ಮಾಡಿದರೆ ಬಹಳಷ್ಟು ಇದೆ. ರಕ್ತ,ಯಕೃತ್, ಕಣ್ಣು, ಚರ್ಮ, ಕೂದಲು. ವಸಡು,ಆಮಾಶಯ, ಮೆದುಳಿನ ಕೆಲವು ತೊಂದರೆಗಳಲ್ಲಿ ಪರಿಣಾಮ ಕಾರಿಯಾಗಿ ಉಪಯೋಗಿಸಲ್ಪಡುತ್ತದೆ.

ಯಕೃತ್(Liver):

ಆಲ್ಕೋಹಾಲ್ ಹಾಗೂ ಕೆಲವು ಔಷಧಿಗಳು ಲಿವರ್‍ಗೆ (liver)

ತೊಂದರೆ ಕೊಡುತ್ತದೆ. ತಿಂದ ಅಲ್ಪ ವಿಷ ಪದಾರ್ಥಗಳು ಅದರಲ್ಲಿ  ಉಳಿದು ಕೊಳ್ಳುತ್ತದೆ, ಕೊಬ್ಬಿನಾಂಶ ತುಂಬಿಕೊಳ್ಳುತ್ತದೆ (Fatty liver) ನೆಲ್ಲಿಕಾಯಿಯಲ್ಲಿ ಇರುವ ಅಲ್ಪವಿಷನಿವಾರಕ (Antioxidant) ಹಾಗೂ Gallicಗಳು ಅವರಿಗೆ ಆದ ತೊಂದರೆಯನ್ನು ನಿವಾರಿಸುತ್ತದೆ ಎಂದು ಸಾಬೀತಾಗಿದೆ.

ಚರ್ಮ :

ಚರ್ಮ ಒಡೆಯುವುದು, ಬಿರಿಯುವುದು( ಹೆಚ್ಚಾಗಿ ಚಳಿಗಾಲದಲ್ಲಿ) ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಇದರಲ್ಲಿ ಇರುವ Emblicanin A & B (Hydrolysable Tannin) ಚರ್ಮದ ಒಣಗುವಿಕೆಯನ್ನು ಕಡಿಮೆಮಾಡಿ ಚರ್ಮದ ರಕ್ಷಣೆ ಮಾಡುವುದು.

ಕೂದಲು :

ಸ್ತ್ರೀಯರಿಗಾಗಲೀ , ಪುರುಷರಿಗಾಗಲೀ ಕೂದಲಿನ  ಬಗ್ಗೆ ಒಲವು ಅಧಿಕ. ತಲೆಯಲ್ಲಿ ಹೊಟ್ಟು(Dandruff) ಇದ್ದರೆ ಕೂದಲು ಉದುರುವುದು ಸಹಜ. ತಲೆಯ ಚರ್ಮ ಒಣಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಾಂಪುಗಳನ್ನು ಉಪಯೋಗಿಸಿದರೆ ಚರ್ಮ ಇನ್ನೂ ಜಡಿಥಿ  ಆಗುವುದು. ತಲೆಹೊಟ್ಟು ಇರುವಾಗ ನೆಲ್ಲಿಕಾಯಿ ಪುಡಿಯನ್ನು ನೀರಲ್ಲಿ, ಹಾಲಲ್ಲಿ ಅಥವಾ ಮಜ್ಜಿಗೆಯಲ್ಲಿ ಮಿಶ್ರಮಾಡಿ ತಲೆಗೆ ಹಾಕಿ 2-3 ಗಂಟೆ ನಂತರ ಸ್ನಾನಮಾಡಬೇಕು. ಅದರೊಂದಿಗೆ ನೆಲ್ಲಿಕಾಯಿಯ ಮಾತ್ರೆಗಳನ್ನು ಅಥವಾ ನೆಲ್ಲಿಕಾಯಿ ಸೇರಿಸಿ ಮಾಡಿದ ಔಷಧಿಗಳ ಸೇವನೆಯಿಂದ ಪ್ರಯೋಜನವಾಗುತ್ತದೆ.

ಹೊಟ್ಟೆ ತೊಂದರೆ:

  ಹೊಟ್ಟೆ ಉರಿ, ಅಜೀರ್ಣದಿಂದ ಬರುವ ಹೊಟ್ಟೆ ನೋವು ಇರುವಾಗ ನೆಲ್ಲಿಕಾಯಿ ಪುಡಿ ಸೇವನೆ ಉತ್ತಮ.ಇದರಲ್ಲಿ ನಾರಿನಾಂಶ (Fiber) ಅಧಿಕ ಇರುವುದರಿಂದ ಮಲಬದ್ದತೆಯನ್ನೂ ನಿವಾರಿಸುತ್ತದೆ. ವಿಶೇಷವೆಂದರೆ ಅಜೀರ್ಣ ಆಗಿ ಅತಿಸಾರ( loose motion) ಆಗುವಾಗಲೂ ನೆಲ್ಲಿಪುಡಿಯನ್ನು  ತಿಂದು ಗುಣಪಡಿಸಿಕೊಳ್ಳುತ್ತೇವೆ.

ವಿಟಮಿನ್-ಸಿ:

ರಕ್ತವೃಧ್ಧಿಗೆ, ಚರ್ಮದ ರಕ್ಷಣೆಗೆ, ವ್ಯಾದಿ ಕ್ಷಮತೆಗೆ ವಿಟಮಿನ್-ಸಿ ಬೇಕು. ಎಷ್ಟೋಹಣಕೊಟ್ಟು ಕೃತಕ ವಿಟಮಿನ್-ಸಿ ಕೊಂಡುಕೊಳ್ಳುತ್ತೇವೆ. ಇದರಲ್ಲಿ ಇರುವ ನೈಸರ್ಗಿಕ ವಿಟಮಿನ್-ಸಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ನೆಲ್ಲಿಯಲ್ಲಿ ಇರುವ ವಿಟಮಿನ್-ಸಿ ಬೇಯಿಸಿದರೂ ಆವಿ ಆಗಿ ಹೋಗುವುದಿಲ್ಲ.

ವಿಟಮಿನ್-ಸಿ:

ನೆಲ್ಲಿಕಾಯಿಯನ್ನು ಪ್ರತಿದಿನ ಜಗಿದು ತಿಂದರೆ ಹಲ್ಲಿನ ಮತ್ತು ವಸಡಿನ ರಕ್ಷಣೆ ಮಾಡುವುದು .

ಹೃದಯ :

ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಸ್ ರಕ್ತದಲ್ಲಿ ಅಧಿಕವಾದಾಗ ಹೃದಯ ಸಂಬಂದೀ ಕಾಯಿಲೆಗಳು ಬರುವುದು ಸಹಜ. ನೆಲ್ಲಿಯಲ್ಲಿ ಇರುವ Gallic acid, Ellagic acid ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಸ್  ಗಳನ್ನು ಕಡಿಮೆಮಡುವುದರಿಂದ ಹೃದಯ ಸಂಬಂದೀ ಕಾಯಿಲೆಗಳನ್ನು ನೆಲ್ಲಿಕಾಯಿ ಸೇವನೆಯಿಂದ ದೂರಮಾಡಬಹುದು.

ನೆಲ್ಲಿ ಹಸಿವು ಉಂಟುಮಾಡುವುದು , ಜೀರ್ಣ ಕ್ರಿಯೆ ಸರಿಮಾಡುವುದು, ಮಲವಿಸರ್ಜನೆ ಸುಗಮಮಾಡುವುದು, ಮಧುಮೇಹಿಗಳಿಗೂ ಪ್ರಯೋಜನಕಾರಿಯಾಗಿದೆ. ಆಯುರ್ವೇದದಲ್ಲಿ ಮಧುಮೇಹವನ್ನು 20 ವಿಧ ಪ್ರಮೇಹಗಳಲ್ಲಿ ವಿವರಿಸಿದ್ದಾರೆ.  ಕೆಲವು ವಿಧ ಪ್ರಮೇಹಗಳಲ್ಲಿ ನೆಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿದೆ. ಮೆದುಳಿಗೆ ಆಗುವ ಒತ್ತಡವನ್ನೂ(Stress) ಕಡಿಮೆಮಾಡುವುದು. ಎಲ್ಲಾ ತೊಂದರೆಗಳಲ್ಲಿ ಎಷ್ಟು ಪ್ರಮಾಣ ಹೇಗೆ ಉಪಯೋಗಿಸಬೇಕೆಂಬ ತಿಳುವಳಿಕೆ ಹೊಂದಿರಬೇಕು.ಉಪ್ಪಿನಕಾಯಿ, ತಂಬ್ಲಿ, ಸಾಂಬಾರುಗಳಲ್ಲಿಯೂ ಆಹಾರವಾಗಿ ನೆಲ್ಲಿಕಾಯಿಯನ್ನು ಉಪಯೋಗಿಸಬಹುದು.

 An apple a day keeps the Doctor away (ದಿನಕ್ಕೊಂದು ಏಪ್ಲ್ ಸೇವನೆ ಮಾಡಿ ವೈದ್ಯರಿಂದ  ದೂರ ಇರಿ) ಎಂಬ ಮಾತನ್ನೂ ಕೇಳಿದ್ದೇವೆ. ಆದರೆ ದಿನಕ್ಕೊಂದು ನೆಲ್ಲಿಕಾಯಿ ತಿಂದರೆ ಖಂಡಿತವಾಗಿಯೂ ವೈದ್ಯರ ಅಗತ್ಯ ಅಧಿಕವಾಗಿ ಬಾರದು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.