Skip links

ನುಗ್ಗೆ

Scientific name: Moringa oleifera  

ಸಂಸ್ಕ್ರತದಲ್ಲಿ ಶಿಗ್ರು(ತೀಕ್ಷ್ಣಗುಣ) ಶೋಬಾಂಜನ (ನೋಡಲು ಚಂದ)   ತೀಕ್ಷ್ಣಗಂಧ(ವಿಶಿಷ್ಠ ಪರಿಮಳ) ಎಂಬುದಾಗಿ ಉಲ್ಲೇಖಸಲ್ಪಟ್ಟಿದೆ.

ಮದ್ಯಮವಾಗಿ ಬೆಳೆಯುವ ಮೃದು ವಾದ ವೃಕ್ಷ. ಬಿಳಿನೀಲವರ್ಣದ ಹೂಗುಚ್ಚಗಳು ಕಂಡುಬರುತ್ತದೆ. ಇದರ ಕೋಡು 1/2 ರಿಂದ 1 1/2ಫೀಟ್ ಉದ್ದ ಬೆಳೆಯುತ್ತದೆ. ತ್ರಿಕೋಣಾಕಾರದ ಬೀಜಗಳು ಕಂಡುಬರುತ್ತದೆ. ಜನವರಿಯಿಂದ ಜೂನ್ ವರೆಗೆ ಹೂ ಕೋಡುಗಳು ಕಂಡುಬರುತ್ತದೆ . ಇದರ ಹೂಗಳಿಗೆ ಅನುಸಾರ ಬಿಳಿ ಮತ್ತು ಕೆಂಪು ಪ್ರಬೇದಗಳಾಗಿ ಶಾಸ್ತ್ರಕಾರರು ಗುರುತಿಸಿದ್ದಾರೆ. ಬಿಳಿ ಬಣ್ಣದ ಹೂ ಇರುವ ಕೋಡು ಖಾರ ಇದ್ದು ಕೆಂಪು ಬಣ್ಣದ ಹೂವಿನಿಂದ ಬಂದ ಕೋಡು ಸಿಹಿ ಇರುತ್ತದೆ.

ಈಗ ಎಲ್ಲಾ ಕಾಲದಲ್ಲಿಯೂ ಫಲ ಬಿಡುವ ನುಗ್ಗೆ ಕಾಣಲು ಸಿಗುತ್ತದೆ. “ರಾಜ ನಿಘಂಟ್”ನಲ್ಲಿ ನೀಲ ಬಣ್ಣದ ನುಗ್ಗೆ ಬಗ್ಗೆ ವಿವರಿಸಿರುತ್ತಾರೆ.  

ಇದರ ಕಾಂಡದ ತೊಗಟೆಯಲ್ಲಿ Moringin ಎಂಬ  alkaloid ಇದೆ. ಇದು ನರಗಳ ಮೇಲೆ ಕೆಲಸ ಮಾಡುತ್ತದೆ. ಇದರ Calcium, Mangnesium, Potassium, Zinc, Iron, Copper, vit-A, vit-B, vit-B6, vit-C, vit-D, vit-E, Folic acidಗಳು ಕಂಡುಬರುತ್ತದೆ. ಇದು ಪ್ರಾಕೃತಿಕವಾಗಿ ಇದರಲ್ಲಿ ಲಭ್ಯವಿರುವುದರಿಂದ ಇವುಗಳು ಶರೀರಕ್ಕೆ ಬೇಗನೆ ಸೇರಿಕೊಳ್ಳುತ್ತದೆ ಹಾಗೂ ಶರೀರಕ್ಕೆ ಹಾನಿ ಮಾಡುವುದಿಲ್ಲ.  

ರಕ್ತಹೀನತೆ:

ಹಿಮೋಗ್ಲೋಬಿನ್ ಕಡಿಮೆ ಇರುವವರು ಒಂದು ಮುಷ್ಠಿ ಎಲೆಯನ್ನು ಸ್ವಲ್ಪ ಬೆಲ್ಲ , ಉಪ್ಪು ಸೇರಿಸಿ ಹಬೆಯಲ್ಲಿ ಬೇಯಿಸಿ ಅನ್ನದೊಂದಿಗೆ ಸೇರಿಸಿ ಊಟ ಮಾಡಬೇಕು. ಇದರಿಂದ ರಕ್ತವೃದ್ದಿಯಾಗುವುದು. ಕಬ್ಬಿಣಾಂಶ ರಕ್ತಕ್ಕೆಸೇರಲು vit-B6, Folic acid ಗಳು ಸಹಾಯಮಾಡುವುದೆಂದು ವೈಜ್ಞಾನಿಕವಾಗಿ ಹೇಳಿದೆ.ನುಗ್ಗೆ ಸೊಪ್ಪಿನಲ್ಲಿ ಇವು ಎಲ್ಲವೂ ಇರುವ ಕಾರಣ ಇದೊಂದು ಶ್ರೇಷ್ಠ ರಕ್ತವರ್ದಕವಾಗಿದೆ. 

 

ಕಿವಿನೋವು :

ಕಾಂಡದ ತೊಗಟೆಯನ್ನು ನೀರುಸೇರಿಸದೆ ಜಜ್ಜಿ ರಸ ತೆಗೆದು ಶುಚಿಯಾದ ಬಟ್ಟೆಯಲ್ಲಿ  ಸೋಸಿ 3-4 ಬಿಂದು ರಸವನ್ನು ಕಿವಿನೋವಿರುವವರಿಗೆ ಬಿಟ್ಟರೆ ನೋವು ಕಡಿಮೆಯಾಗುವುದು. ಪ್ರಥಮಚಿಕಿತ್ಸೆಯಾಗಿ ಇದನ್ನು ಅನುಸರಿಸಿ ನಂತರ ವೈದ್ಯರನ್ನು ಭೇಟಿಯಾಗಬಹುದು. ಇದರಲ್ಲಿ  Pterygospermin ಎಂಬ ಸಕ್ರಿಯ ಪ್ರತಿಜೀವಿ(antibiotic) ಇರುವುದರಿಂದ ಈ ರೀತಿಯ ಪರಿಣಾಮ ಬೀರುತ್ತಿರಬಹುದು ಇದರಲ್ಲಿ ಉಷ್ಣಗುಣ ಇರುವ ಕಾರಣ ಪಿತ್ತ ಪ್ರಕೃತಿಯವರು ಅತಿಯಾಗಿ ಸೇವಿಸಬಾರದು. ಇದರ ಬೀಜವನ್ನು, ಎಲೆಯನ್ನು ನೋವುನಿವಾರಕ ತೈಲಗಳಲ್ಲಿ ಉಪಯೋಗಿಸುತ್ತಾರೆ. ಬೀಜಕ್ಕೆ ಬೆವರಿಸುವ ಗುಣ ಇರುವ ಕಾರಣ ಬೆವರದೇ ಇರುವವರು ದಿನಕ್ಕೆ 1/2 ಚಮಚದಷ್ಠು ಪುಡಿಯನ್ನು ನೀರಲ್ಲಿ ಕಲಸಿ ಕುಡಿಯಬಹುದು. ಇದಕ್ಕೆ ಬೆವರಿಸುವ ಗುಣ ಇರುವ ಕಾರಣ ಜ್ವರದಲ್ಲಿಯೂ ಉಪಯೋಗಿಸಬಹುದು

ಇದರ ವಾಣಿಜ್ಯ ಉಪಯೋಗ ತಿಳಿದದ್ದು ಕಡಿಮೆ. ಎಲೆಯನ್ನು (ಆರ್ಗಾನಿಕ್ ಆಗಿದ್ದರೆ) ಟನ್ ಗಟ್ಟಲೆ ರಫ್ತು ಮಾಡುತ್ತಾರೆ. ಕ್ವಿಂಟಾಲ್‍ಗಟ್ಟಲೆ ಸ್ಥಳೀಯ ಆಯುರ್ವೇದ ಫ್ರಾರ್ಮಸಿಯವರು ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಮರದ ಕೊಂಬೆಗಳನ್ನು ಎಲ್ಲಾ ಕಡೆ ನೆÀಡುವುದರಿಂದ ಉತ್ತಮ ಫಸಲು ತೆಗೆಯಬಹುದು. ಹುಲುಸಾಗಿ ಎಲೆ ಬಂದಂತೆ ಕೊಂಬೆಗಳನ್ನು ತುಂಡು ಮಾಡುತ್ತಿದ್ದರೆ ಚಿಗುರುರೊಡೆದು ಪುನ: ಹುಲುಸಾಗಿ ಬೆಳೆಯುತ್ತದೆ.

                                                                           

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.