Skip links
Kadira img

ಖದಿರ

Scientific Name: Acacia catechu

ಆಯುರ್ವೇದ ಗ್ರಂಥಗಳಲ್ಲಿ ಖದಿರ ವೃಕ್ಷ ಎಂದು ಉಲ್ಲೇಖಿಸಿದ ವನಸ್ಪತಿ ತುಳುವಿನಲ್ಲಿ “ಕಾಚಿ” ಮರ ಎಂದು ಕರೆಯುತ್ತಾರೆ. ಬಹಳ ಗಟ್ಟಿ ಮರ. ೨೫ ರಿಂದ ೪೦ ಅಡಿ ಎತ್ತರ ಬೆಳೆಯುತ್ತದೆ. ದೊರಗಾದ ತೊಗಟೆ, ಕಪ್ಪು ಅಥವಾ ಬೂದಿ ವರ್ಣದಿಂದ ಕೂಡಿದೆ. ತಿರುಳು ಕೆಂಪಾಗಿ ಕಂಡುಬರುತ್ತದೆ. ಎದುರು ಬದುರಾಗಿ ಸಣ್ಣ ಎಲೆಗಳಿಂದ ಕೂಡಿದೆ. ಪತ್ರ ಚಿಗುರುವÀಲ್ಲಿ ಮೇಲೆ ಮತ್ತು ಕೆಳಗೆ ಗ್ರಂಥಿಯ ರಚನೆ ಇದೆ. ಬಾಟ್ಲಿ ತೊಳೆಯುವ ಬ್ರಶ್‌ನಂತೆ ನೀಳಾಕಾರದ ಸಣ್ಣ ಸಣ್ಣ ಬಿಳಿ ಹೂಗಳಿಂದ ಕೂಡಿದ ಪುಷ್ಪಗುಚ್ಚ. ೨-೪ ಇಂಚು ಉದ್ದದ ಚಪ್ಪಟೆ ಆಕಾರದ ಕಪ್ಪಾದ ಕೋಡಿನ ಒಳಗೆ ೫-೮ ಸಣ್ಣ ಸಣ್ಣ ಬೀಜಗಳು ಇರುತ್ತದೆ.

ವೈದಿಕ ಹಾಗೂ ವೈದ್ಯಕೀಯ ಲೋಕದ ಉಪಯುಕ್ತ ವೃಕ್ಷ ಕಾಚು. ಕೇರಳದಲ್ಲಿ ಬಾಯಾರಿಕೆಯಾದರೆ ಕೇವಲ ನೀರು ಕೊಡುವುದಿಲ್ಲ. ಸ್ವಲ್ಪ ಜೀರಿಗೆ ಹಾಕಿದ ನಸು ಹಳದಿ ಬಣ್ಣದ ಪಾನಕ ಅಥವಾ ಕಾಚು ತಿರುಳು ಹಾಕಿ ಕುದಿಸಿ ಕೊಡುವ ಕೆಂಪಾದ “ಕರಿಂಗಾಲಿ” ನೀರು ಕೊಡುತ್ತಾರೆ.

Kadira img

ವೈದಿಕರು ಹೋಮ ಹವನಗಳಲ್ಲಿ ಇದನ್ನು ಉಪಯೊಗಿಸಿದರೆ ಆಯುರ್ವೇದ ವೈದ್ಯರು ಚರ್ಮ ರೋಗಗಳಲ್ಲಿ ಇದನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಮುಳ್ಳುಗಳಿಂದ ಕೂಡಿದ ಈ ಮರದ ತಿರುಳನ್ನು ಹಲವು ರೋಗಗಳಲ್ಲಿ ಔಷಧಿಯಾಗಿ ಉಪಯೋಗಿಸಲಾಗುತ್ತದೆ, ಪಾನ್ ಪ್ರಿಯರಿಗೆ ವೀಳ್ಯದೆಲೆಗೆ ಶುರುವಿಗೆ ಹಚ್ಚುವ ದ್ರಾವಣ ಕಾಚಿನಿಂದ ತಯಾರಿಸಲಾಗುತ್ತದೆ.

ಹಲ್ಲು ವಸಡುಗಳ ರಕ್ಷಣೆ :

ಇದರ ತೊಗಟೆಯನ್ನು ಅಥವಾ ರೆಂಬೆಯ ಸಣ್ಣ ತುಂಡನ್ನು ಬ್ರಶ್‌ನಂತೆ ಮಾಡಿ ಹಲ್ಲು ತಿಕ್ಕಬಹುದು. ಇದರಿಂದ ವಸಡಿನಿಂದ ಸ್ರಾವ ಆಗುವ ರಕ್ತ, ರೆಸಿಗೆ ನಿಲ್ಲುವುದು. ಖದಿರದ ಕಾಂಡದ ಕಷಾಯ ಮಾಡಿ ಬಾಯಿ ಮುಕ್ಕುಳಿಸುವುದರಿಂದಲೂ ವಸಡಿನ ಆರೋಗ್ಯ ಕಾಪಾಡಬಹುದು.

ಬಾಯಿಹುಣ್ಣು :

ಅಸಿಡಿಟಿ ಜಾಸ್ತಿ ಆಗಿರುವಾಗ ಅಥವಾ ಶರೀರದಲ್ಲಿ ರಕ್ತ ಕಡಿಮೆ ಆಗಿರುವಾಗಲೂ ಬಾಯಿ ಹುಣ್ಣು ಕಂಡು ಬರುತ್ತದೆ.ಇದಕ್ಕೆ ಹೊರತಾಗಿ ಕಂಡುಬರುವ ಬಾಯಿ ಹುಣ್ಣುಗಳಿಗೆ ಇದರ ಕಾಂಡದ ಕಷಾಯದಿಂದ ಬಾಯಿಮುಕ್ಕಳಿಸಬಹುದು (ದಿನಕ್ಕೆ ೩-೪ ಸಲ) ಅಥವಾ ಖದಿರಾದಿ ಗುಟಿಕಾ ಎಂಬ ಮಾತ್ರೆಯನ್ನು ಬಾಯಲ್ಲಿ ಇರಿಸಿ ಚಪ್ಪರಿಸಿ ನುಂಗುವುದರಿAದಲೂ ಗುಣ ಹೊಂದಬಹುದು.

Kadira img

ಚರ್ಮರೋಗ :

ಇದರ ಮುಖ್ಯ ಉಪಯೋಗವೇ ಚರ್ಮದ ರೋಗದಲ್ಲಿ. ಅಲರ್ಜಿ, ಎಕ್ಸಿಮಾ, ಸೋರಿಯಾಸಿಸ್‌ನಂತಹ ಕಾಯಿಲೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಕೇವಲ ಖದಿರ ಮಾತ್ರ ಉಪಯೋಗಿಸದೆ ಅದರೊಂದಿಗೆ ಇತರ ಗಿಡಮೂಲಿಕೆಗಳನ್ನು ಸೇರಿಸಿ ಸೇವಿಸುವುದರಿಂದ ಅಧಿಕ ಪರಿಣಾಮ ಕಂಡುಕೋಳ್ಳಲಾಗುವುದು. ಇದರಿಂದ ತಯಾರಿಸಿದ ಖದಿರಾರಿಷ್ಠ, ಖದಿರಾದಿ ವಟಿ, ದಶಮೂಲಾರಿಷ್ಠಗಳು ಪ್ರಮುಖವಾದವುಗಳು. ಖದಿರ, ಕಹಿಬೇವು ತೊಗಟೆ, ಮರದರಸಿನ ಪ್ರತಿಯೊಂದು ೧೦ ಗ್ರಾಂ ನಷ್ಟು ಕಷಾಯ ಮಾಡಿ ಕುಡಿಯುವುದರಿಂದ ಚರ್ಮದ ಮೇಲೆ ಕಂಡುಬರುವ ಅಲರ್ಜಿ, ತುರಿಕೆಗಳು ಕಡಿಮೆಯಾಗುತ್ತದೆ.

ಸ್ಥೌಲ್ಯ(ಔbesiಣಥಿ) :

ದೀರ್ಘ ಸಮಯದಿಂದ ಶರೀರದಲ್ಲಿ ಸಂಗ್ರಹವಾಗಿ ಶರೀರಕ್ಕೆ ತೊಂದರೆ ಕೊಡುವ ಮೇದಸ್ಸಿನ(ಈಚಿಣ) ಅಂಶ ಬೊಜ್ಜು . ಈ ಸ್ಥೌಲ್ಯ ಶರೀರಿÀಗಳಿಗೆ ರಕ್ತದ ಒತ್ತಡ, ಮಧುಮೇಹ ಹೆಚ್ಚಾಗಿ ಕಂಡುಬರುತ್ತದೆ. ಖದಿರ ಕಾಂಡದ ಚೂರ್ಣ ೩-೪ ಗ್ರಾಂ ನೀರಿನಲ್ಲಿ ಕಲಸಿ ೩-೪ ತಿಂಗಳು ಸೇವಿಸುವುದರಿಂದ ಶರೀರದ ಭಾರ ಕಡಿಮೆಯಾಗುವುದು ಅಥವಾ ೧೦ ಗ್ರಾಂ ನಷ್ಟು ಖದಿರ ಕಾಂಡವನ್ನು ಕಷಾಯ ಮಾಡಿ ದಿನಕ್ಕೆರಡು ಸಲ ಕುಡಿಯಬೇಕು.

Kadira img

ಮಧುಮೇಹ :

ಇದು ಆಧುನಿಕ ಜೀವನ ಶೈಲಿಯ ಕಾಯಿಲೆ. ಇದನ್ನು ಗುಣ ಪಡಿಸುವುದಕ್ಕಿಂತ ನಿಯಂತ್ರಿಸುವುದೂ ಒಂದು ಸವಾಲು. ಖದಿರ ಕಾಂಡ ಮತ್ತು ಅಡಿಕೆ ೫-೫ ಗ್ರಾಂ ಪುಡಿಮಾಡಿ ಕಷಾಯ ಮಾಡಿ ಕುಡಿಯುವುದರಿಂದ ಮಧುಮೇಹ ನಿಯಂತ್ರಿಸುವುದು ಸಾಧ್ಯ.

ಕೆಮ್ಮುಕಫ :

ಖದಿರದಿಂದ ತಯಾರಿಸಿ ಖದಿರಾದಿÀ ವಟಿಯನ್ನು ಬಾಯಲ್ಲಿ ಇರಿಸಿ ಚಪ್ಪರಿಸಿ ನುಂಗುವುದರಿAದ ಸಣ್ಣ ಪ್ರಮಾಣದ ಕೆಮ್ಮು ಕಡಿಮೆಯಾಗುತ್ತದೆ. ಕಫದಿಂದ ಸ್ವರ ಬಿದ್ದ ಸಮಯದಲ್ಲಿಯೂ ಇದನ್ನು ಉಪಯೋಗಿಸುವುದರಿಂದ ಸ್ವರ ಸರಿಯಾಗುವುದು. ಸಂಗೀತಗಾರರ ಸ್ವರಕ್ಕೆ ಕಫದ ತೊಂದರೆಯಾದಾಗ ಇದನ್ನು ಉಪಯೋಗಿಸಬಹುದು.

Kadira img

ಕೃಷಿ:

ಇದೊಂದು ಕಾಡು ಮರ. ಬೀಜದಿಂದ ಗಿಡ ಹುಟ್ಟಿ ಕೊಳ್ಳುವುದು. ಮುಳ್ಳುಗಳಿಂದ ಕೂಡಿದ ಮರ. ವಿಸ್ತೀರ್ಣವಾದ ಜಮೀನು ಇದ್ದರೆ ನೆಟ್ಟು ಬೆಳೆಸಬಹುದು. ಮರದ ತಿರುಳಿಗೆ ಆಯುರ್ವೇದ ಫಾರ್ಮಸಿಗಳಿಂದ ಅಧಿಕ ಬೇಡಿಕೆ ಇದೆ.

ಡಾ. ಹರಿಕೃಷ್ಣ ಪಾಣಾಜೆ

Leave a comment

  1. ಸಾರ್ ನಿಮ್ಮ ಮಾಹಿತಿ excellent 👌👌👌👌👌👌

This website uses cookies to improve your web experience.