Scientific Name: Hemidesmus indicus
ತುಳುವಿನಲ್ಲಿ ಸುಗಂಧಿ ಬೇರು ಎಂದು ಕರೆದರೆ ಕನ್ನಡದಲ್ಲಿ ನನ್ನಾರಿ, ನನ್ನಾಲಿ, ನಾಮದ ಬೇರು ssssಸೊಗದ ಬೇರು ಎನ್ನುತ್ತಾರೆ. ಸಂಸ್ಕೃತದಲ್ಲಿ ಸಾರಿವ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಸಪೂರ ಉದ್ದ ಎಲೆ ಎದುರು ಬದುರಾಗಿ ಬಳ್ಳಿಯಲ್ಲಿ ಕಂಡು ಬರುತ್ತದೆ. ಎಲೆಯ ಉದ್ದಕ್ಕೂ ಬಿಳಿ ನಾಮ ಇರುವುದರಿಂದ ನಾಮದ ಬೇರು ಎನ್ನುತ್ತಾರೆ. ೫-೧೦ ಅಡಿ ಉದ್ದ ಬೆಳೆಯುವ ತೆಳುವಾದ ಬಳ್ಳಿ, ೨ ರಿಂದ ೪ ಇಂಚು ಉದ್ದ ಹಾಗೂ ೧/೪ ರಿಂದ ೧/೨ ಇಂಚು ಅಗಲದ ಎಲೆಗಳು ಕಂಡು ಬರುತ್ತದೆ. ಕೆಲವೊಮ್ಮೆ ಎಲೆಗಳು ಅಗಲ ಜಾಸ್ತಿಯಾಗಿಯೂ ಇರುತ್ತದೆ. ಬಳ್ಳಿ ಅಥವಾ ಎಲೆಯನ್ನು ತುಂಡು ಮಾಡಿದರೆ ಹಾಲಿನಂತಹ ಬಿಳಿ ದ್ರವ ತೊಟ್ಟಿಕ್ಕುತ್ತದೆ. ನಸು ಹಳದಿ ಹಸಿರು ಹೂಗಳು, ನಂತರ ಜೋಡಿ ಕೋಡುಗಳು ಕಂಡುಬರುತ್ತದೆ. ಕೋಡಿನೊಳಗೆ ಹತ್ತಿ ಸಹಿತ ಸಣ್ಣ ಬೀಜಗಳು ಇರುತ್ತದೆ. ಬೇರು ಹೊರಗಿನಿಂದ ನಸು ಕೆಂಪಾಗಿದ್ದು ಬೇರಿನ ಮಧ್ಯೆ ನಾರು ಇರುತ್ತದೆ. ಬೇರು ಸಿಹಿಯಾಗಿದ್ದು ಸ್ವಲ್ಪ ಕಹಿ ರುಚಿಯನ್ನು ಹೊಂದಿದೆ. ವಿಶೇಷವಾದ ಪರಿಮಳದಿಂದ ಕೂಡಿದ ಬೇರು ಮನಸ್ಸಿಗೆ ಖುಷಿ ನೀಡುತ್ತದೆ. ಬಿಳಿ ಮತ್ತು ಕಪ್ಪು ಎಂಬ ಎರಡು ವಿಧದ ಸಾರಿವ ಕಂಡುಬರುತ್ತದೆ. ಕಪ್ಪು ಸಾರಿವದ ಎಲೆಗಳು ಅಗಲ ಇರುತ್ತದೆ. ಬೇರು ಕಪ್ಪಾಗಿ ಇರುತ್ತದೆ. ಔಷಧಿಗೆ ಬಿಳಿ ಸಾರಿವ ಉತ್ತಮ. ಸ್ತಿçವ್ಯಾಧಿಗಳಲ್ಲಿ, ರಕ್ತ ಶುದ್ಧಿಗಾಗಿ, ಚರ್ಮ ರೋಗಗಳಲ್ಲಿ ವಿಶೇಷವಾಗಿ ಬಳಸಲ್ಪಡುತ್ತದೆ.
ಸಾರಿವ ಕಾಫಿ :
ಒಳ್ಳೆಯ ಸುಗಂಧ ಬರಿತ ಬೇರು. ಇದನ್ನು ಹುರಿದು ಪುಡಿಮಾಡಿ ಕಾಫಿಯಂತೆ ಹಾಲು ಸಕ್ಕರೆ ಸೇರಿಸಿ ಕುಡಿಯಬಹುದು. ಮೈತುರಿಕೆ, ಮಲಬದ್ಧತೆ, ಮೂತ್ರ ಉರಿ ಇತ್ಯಾದಿ ತೊಂದರೆಗಳು ಕಡಿಮೆಯಾಗುವುದು.
ಸ್ತನ್ಯವರ್ಧಕ :
ಎದೆ ಹಾಲು ಕಡಿಮೆ ಇರುವಾಗ ಹಸಿ ಸಾರಿವ ಬೇರು ೧೦ ಗ್ರಾಂನಷ್ಟು ಹಾಲಿನಲ್ಲಿ ಅರೆದು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಹಸಿ ಬೇರು ಸಿಗದಿದ್ದರೆ ಒಣ ಬೇರನ್ನು ನಂiÀiವಾಗಿ ಪುಡಿಮಾಡಿ ಇಟ್ಟುಕೊಂಡು ೫ ಗ್ರಾಂನಷ್ಟು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ಕುಡಿಯಬೇಕು.
ಹಲ್ಲು ಸಿಡಿತ :
ಹಲ್ಲು ತೂತಾಗಿದ್ದರೆ ಆಗಾಗ ಹಲ್ಲು ಸಿಡಿತ ಬರುತ್ತಿರುತ್ತದೆ. ದಂತವೈದ್ಯರಲ್ಲಿಗೆ ಹೋಗಲು ಸಮಯವಿಲ್ಲದಿದ್ದರೆ ನೋವು ಕಡಿಮೆಯಾಗಲು ಸಾರಿವ ಎಲೆಯನ್ನು ಜಜ್ಜಿ ಹಲ್ಲಿನ ತೂತಾದ ಭಾಗಕ್ಕೆ ಇಟ್ಟರೆ ಸ್ವಲ್ಪ ಹೊತ್ತಿನಲ್ಲಿ ನೋವು ಕಡಿಮೆಯಾಗುವುದು.
ಬಾಯಿ ಹುಣ್ಣು :
ಅಸಿಡಿಟಿ ಜಾಸ್ತಿ ಇದ್ದವರಿಗೆ ಬಾಯಿ ಹುಣ್ಣಾಗುತ್ತದೆ. ಸಾರಿವ ಬೇರನ್ನು ಹಾಲಲ್ಲಿ ಅರೆದು ೧೦ ರಿಂದ ೧೪ ದಿನ ಕುಡಿಯುವುದರಿಂದ ಬಾಯಿ ಹುಣ್ಣಿನೊಂದಿಗೆ ಅಸಿಡಿಟಿಯೂ ಕಡಿಮೆ ಆಗುವುದು. ಅಜೀರ್ಣ ಹೊಟ್ಟೆನೋವು ಇದ್ದರೂ ಪ್ರಯೋಜನವಾಗುವುದು.
ಚರ್ಮದ ಕಲೆ :
ಬೇರನ್ನು ಆಡುಸೋಗೆ ರಸದಲ್ಲಿ ಅರೆದು ಕಲೆಗಳ ಮೇಲೆ ಹಚ್ಚುವುದರಿಂದ ನಿಧಾನವಾಗಿ ಕಲೆಗಳು ಮಾಯವಾಗುವುದು.
ಬಿಳಿಸ್ರಾವ :
ಸ್ವಚ್ಚತೆ ಕೊರತೆಯಿಂದ, ಖಾರ ಹುಳಿ ವಸ್ತುಗಳ ಅಧಿಕ ಸೇವನೆಯಿಂದ, ಹಾರ್ಮೋನು ವ್ಯತ್ಯಯದಿಂದ ಸ್ತಿçÃಯರಲ್ಲಿ ಬಿಳಿಸ್ರಾವ ಕಂಡುಬರುತ್ತದೆ. ೧೦ ಗ್ರಾಂ ಬೇರನ್ನು ಹಾಲಿನಲ್ಲಿ ಅರೆದು ಬೆಳಿಗ್ಗೆ ಆಹಾರದ ಮೊದಲು ೩ ರಿಂದ ೪ ವಾರ ಕುಡಿಯುವುದರಿಂದ ಬಿಳಿಸ್ರಾವ ಕಡಿಮೆಯಾಗುವುದು.
ಮೂತ್ರ ಉರಿ :
ಮೂತ್ರ ಮಾಡುವಾಗ ನೋವು ಉರಿ ಇದ್ದರೆ ೧೦ ಗ್ರಾಂ ಸಾರಿವ ಬೇರನ್ನು ಕಷಾಯಮಾಡಿ ೨ ವಾರ ಕುಡಿಯಬೇಕು. ಮೂತ್ರ ಕೆಂಪಾಗಿ, ದಪ್ಪ ಹಾಗೂ ಕಡಿಮೆ ಸ್ರಾವ ಆಗುತ್ತಿದ್ದರೆ ಅಮೃತ ಬಳ್ಳಿಯೊಂದಿಗೆ ಸಾರಿವ ಬೇರು ಕಷಾಯಮಾಡಿ ಕುಡಿಯುವುದರಿಂದ ಕಡಿಮೆಯಾಗುವುದು.
ಮಕ್ಕಳ ನಿಶ್ಯಕ್ತಿ :
ಮಕ್ಕಳಲ್ಲಿ ರಕ್ತ ಹೀನತೆಯಿಂದ ನಿಶ್ಯಕ್ತಿ ಇದ್ದಾಗ ಸಾರಿವದೊಂದಿಗೆ ಸಮ ಪ್ರಮಾಣದಲ್ಲಿ (೩-೩ ಗ್ರಾಂ) ವಿಡÀಂಗ ಬೀಜವನ್ನು ಸೇರಿಸಿ ಕಷಾಯಮಾಡಿ ೨-೩ ವಾರ ಕುಡಿಸಬೇಕು.
ರಕ್ತ ಶೋಧಕ :
ಶರೀರದಲ್ಲಿ ತುರಿಕೆ, ಅಲ್ಲಲ್ಲಿ ಕುರಗಳು ಏಳುವುದಿದ್ದರೆ ರಕ್ತದಲ್ಲಿ ತೊಂದರೆ ಇದೆ ಎನ್ನುತ್ತೇವೆ. ಹಸಿ ಬೇರು ಅಥವಾ ಒಣ ಬೇರಿನ ಕಷಾಯ ಸೇವನೆ, ೩-೪ ವಾರ ಮಾಡುವುದರಿಂದ ಕಡಿಮೆಯಾಗುವುದು. ಸಾರಿವ ಸೇರಿಸಿ ತಯಾರಿಸುವ ಸಾರಿವಾದ್ಯಾಸವ ಎಂಬ ತಯಾರಿಕೆ ಮೆಡಿಕಲ್ಸ್ಗಳಲ್ಲಿ ಸಿಗುತ್ತದೆ. ಇದೂ ರಕ್ತಶುದ್ಧಿ ಮಾಡುಲು ಸಹಾಯ ಮಾಡುತ್ತದೆ.
ಸಾರಿವ ಪಾನಕ :
ಬೇಸಿಗೆಯಲ್ಲಿ ಉರಿ ದಾಹ ಅಧಿಕ. “ಸೋಗದ ಬೇರಿನ” ಸಿರಪ್‌ಗಳು ವಾಣಿಜ್ಯ ಮಳಿಗೆಗಳಲ್ಲಿ ಸಿಗುತ್ತದೆ. ಇದನ್ನು ನೀರಿನೊಂದಿಗೆ ಸೇರಿಸಿ ಪಾನಕಮಾಡಿ ಕುಡಿಯಬಹುದು. ಅಥವಾ ಒಂದು ಲೀಟರ್ ನೀರಿಗೆ ೫ ಗ್ರಾಂ ಸಾರಿವ ಬೇರನ್ನು ಹಾಕಿ ಕುದಿಸಿ ಸೋಸಿ ತಣಿಸಿ ಬಾಯಾರಿಕೆ ಆಗುವಾಗ ಆಗಾಗ ಕುಡಿಯುವುದರಿಂದ ದಾಹ ನಿವಾರಣೆಯಾಗುವುದು. ಪರಿಮಳಯುಕ್ತವಾಗಿರುವುದರಿಂದ ಮನಸ್ಸಿಗೂ ಮುದನೀಡುವುದು.
ಕೃಷಿ:
ಆಯುರ್ವೇದ ತಯಾರಿಕೆಗಳಲ್ಲಿ ಅಧಿಕ ಉಪಯೋಗಿಸಲ್ಪಡುತ್ತದೆ. ಕಿಲೋ ಒಂದಕ್ಕೆ ೬೦೦ ರಿಂದ ೮೦೦ ರೂಪಾಯಿಯಷ್ಟು ಬೆಲೆ ಇದೆ. ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಾರೆ. ನಮ್ಮ ಗುಡ್ಡ ಕಾಡುಗಳಲ್ಲಿ ಸಿಗುವ ಬೇರು ಹೆಚ್ಚು ಪ್ರಯೋಜನಕಾರಿ.
ಡಾ. ಹರಿಕೃಷ್ಣ ಪಾಣಾಜೆ