Scientific Name: Convolvulus Pluricaulis
“ಶಂಖಪುಷ್ಪೀ ಮೇಧ್ಯಾ ವೃಷ್ಯಾ ಮಾನಸ ರೋಗಹೃತ್” ಶಂಖಪುಷ್ಪಿಯು ಮೇಧಾಶಕ್ತಿ (ನೆನಪು) ಪುರುಷತ್ವ ವರ್ಧಕ ಹಾಗೂ ಮಾನಸಿಕ ರೋಗಗಳನ್ನು ಕಡಿಮೆ ಮಾಡುವುದೆಂದು “ಭಾವ ಪ್ರಕಾಶ” ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಶಂಖಪುಷ್ಪಿಗೆ ಇನ್ನೂ ಹಲವಾರು ಔಷಧಿ ಗುಣಗಳಿದ್ದರೂ ಮೆದುಳಿನ ಶಕ್ತಿ ವರ್ಧಕವಾಗಿ ಅಥವಾ ಗ್ರಹಣಶಕ್ತಿ ಹಾಗೂ ನೆನಪು ಶಕ್ತಿ ವರ್ಧಕವಾಗಿ ಹೆಚ್ಚು ಉಪಯೋಗಿಸಲ್ಪಡುತ್ತದೆ.
ಹಿತ್ತಲ ಮೂಲೆಯಲ್ಲಿ ಬಿದ್ದುಕೊಂಡು ಅಥವಾ ಎದ್ದು ಗಿಡಗಳ ಆಶ್ರಯ ಪಡೆದು ಬೆಳೆದು ಹರಡುವ ಬಳ್ಳಿ. ಹಲವು ವರ್ಷ ಬಾಳಿ ಬದುಕಿ ಉಳಿಯುವ ವನಸ್ಪತಿ. ಎದುರು ಬದುರು ಕಂಡು ಬರುವ ಅಂಡಾಕಾರದ ಎಲೆಗಳು. ಶಂಖದಾಕಾರದ ಹೂಗಳು. ಬಿಳಿ ಮತ್ತು ನೀಲ ವರ್ಣದ ಹೂಗಳನ್ನು ನೀಡುವ ಎರಡು ಪ್ರಭೇದಗಳು. ಎರಡೂ ಔಷಧಿ ಗುಣಗಳನ್ನು ಹೊಂದಿದ್ದರೂ ಬಿಳಿ ಶಂಖಪುಷ್ಪ ಶ್ರೇಷ್ಠ. ಮುಖ್ಯ ಕಾಂಡದಿoದ ಅನೇಕ ಕವಲುಗಳು ಹುಟ್ಟಿಕೊಂಡು ದಟ್ಟವಾಗಿ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಬಳ್ಳಿ ತುಂಬಾ ಹೂಗಳು ನೋಡಲು ಆಕಷÀðಕವಾಗಿದೆ. ಮೇ ಯಿಂದ ಡಿಸೆಂಬರ್ ವರೆಗೆ ಹೂ ಹಾಗೂ ಕೋಡುಗಳು ಕಂಡುಬರುತ್ತದೆ. ಇದು ದೇವರ ಮುಡಿ ಏರುವುದಲ್ಲದೆ ಹೆಂಗಸರ ಮುಡಿ ಏರುವುದು ಕಡಿಮೆ. ನೆನಪಿನ ಶಕ್ತಿ ವರ್ಧಕ, ನರಮಂಡಲದ ಆರೋಗ್ಯ, ಉದರ ಸಂಬAಧೀ ತೊಂದರೆ, ಚರ್ಮದ ಆರೋಗ್ಯ ರಕ್ಷಣೆಗೆ ಉಪಯುಕ್ತವಾದ ದಿವ್ಯ ಔಷಧಿ ಶಂಖಪುಷ್ಪಿಯಾಗಿದೆ.
ಹೂ :
ಒಣಗಿದ ೫-೬ ಹೂಗಳನ್ನು ಗ್ಲಾಸಿಗೆ ಹಾಕಿ ಕುದಿಯುವ ನೀರು ಸೇರಿಸಿ ಐದು ನಿಮಿಷ ಮುಚ್ಚಿ ಇಟ್ಟು ನಂತರ ಸ್ವಲ್ಪ ಹಿಸುಕಿ ಸೋಸಿ ಸ್ವಲ್ಪ ಲಿಂಬೆ ಹುಳಿ, ಏಲಕ್ಕಿ ಸೇರಿಸಿ ಕಲಸಿ ಕುಡಿದರೆ ಶರೀರ ಉರಿ, ಬಾಯಾರಿಕೆ ಕಡಿಮೆಯಾಗುವುದು. ಇದು ಗ್ಲೆöÊಕೋಪ್ರೋಟೀನ್ ಸ್ರವಿಸುವುದರಿಂದ ಹೊಟ್ಟೆ ಹುಣ್ಣು, ಕರುಳು ಹುಣ್ಣಿನಿಂದಾಗುವ ನೋವು ಕಡಿಮೆಯಾಗುವುದು. ಸ್ತಿçÃಯರಲ್ಲಿ ಋತುಸ್ರಾವ ನಿಯಮಿತ ಮಾಡುವುದು.
ಬೇರು :
೫ ರಿಂದ ೧೦ ಗ್ರಾಂನಷ್ಟು ಬೇರನ್ನು ನೀರು ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯಗೆ ಅಗತ್ಯವಿರುವ ರಸಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುವುದು, ಜೀರ್ಣಕ್ರಿಯೆ ವೃದ್ಧಿಸುವುದು. ಇದು ಮಲಬದ್ಧತೆಯನ್ನು ನಿವಾರಿಸುವುದು ಹಾಗೂ ಸಣ್ಣ ಸಣ್ಣ ಗಂಟುಗಳಲ್ಲಿ ಇರುವ ನೋವನ್ನು ಕಡಿಮೆ ಮಾಡುವುದು.
ಚರ್ಮ :
ಕಲೆಗಳು ಚರ್ಮದ ಮೇಲೆ ಇದ್ದರೆ ಶಂಖಪುಷ್ಪಿಯ ಬೇರು ಸಹಿತ ಗಿಡವನ್ನು ತೊಳೆದು ಒಣಗಿಸಿ ಪುಡಿ ಮಾಡಿಟ್ಟು ಸ್ವಲ್ಪ ಪುಡಿಗೆ ಜೇನು ಮಿಶ್ರಮಾಡಿ ಕಲೆಗಳ ಮೇಲೆ ಹಚ್ಚುವುದರಿಂದ ಕಲೆಗಳು ಮಾಸುವುದು.
ನರಮಂಡಲ :
ಜ್ಞಾನಶಕ್ತಿ, ಗ್ರಹಣ ಶಕ್ತಿ, ಬುದ್ಧಿಶಕ್ತಿ ಎಲ್ಲವೂ ನರಮಂಡಲದ ಕರ‍್ಯಗಳು. ನರಮಂಡಲಕ್ಕೆ ತೊಂದರೆಯಾದರೆ ಖಿನ್ನತೆ, ಚಿಂತೆ, ಸಿಟ್ಟು, ಉದ್ವೇಗಗಳು ಕಂಡುಬರುವುದು. ತೊಂದರೆಯ ಅವಸ್ಥಾನುಸಾರ ಶಂಖಪುಷ್ಪಿಯನ್ನು ಉಪಯೋಗಿಸುವುದರಿಂದ ಪ್ರಯೋಜನ ಕಂಡು ಕೊಳ್ಳಬಹುದು. ಮೋಬೈಲ್, ಟಿವಿ, ಕಂಪ್ಯೂಟರ್ ಅಧಿಕ ವೀಕ್ಷಣೆ ಅಥವಾ ಒತ್ತಡದ ಕೆಲಸಗಳನ್ನು ನಿರ್ವಹಿಸುವವರಿಗೆ ನರಗಳಿಗೆ ಸಂಬoಧಿಸಿದ ತೊಂದರೆಗಳು ಕಂಡುಬರುತ್ತದೆ. ಮನಸ್ಸಿಗೆ ಖುಷಿ, ಸಮಾಧಾನ ನೀಡುವ “ಡೊಪಮಿನ್” ಮತ್ತು ಕಲಿಕೆಗೆ ಸಹಾಯ, ನೆನಪುಶಕ್ತಿ, ನಿದ್ದೆ, ಲೈಂಗಿಕ ಕ್ರಿಯೆಗೆ ಅಗತ್ಯವಿರುವ “ಸೆರೊಟೋನಿನ್” ಮೆದುಳಿನಲ್ಲಿ ಸರಿಯಾಗಿ ಸ್ರಾವ ಆದರೆ ಮಾತ್ರ ಎಲ್ಲಾ ಕ್ರಿಯೆಗಳು ನಡೆಯುವುದು. ಶಂಖಪುಷ್ಪಿಯ ಉಪಯೋಗದಿಂದ ಇವೆಲ್ಲವನ್ನೂ ನಿಯಮಿತಗೊಳಿಸುವುದು.
ನೂರು ಗ್ರಾಂ ಶಂಖಪುಷ್ಪಿ ಮತ್ತು ೫೦ ಗ್ರಾಂ ಮಂಡೂಕಪರ್ಣಿ(ತಿಮರೆ) ನೆರಳಲ್ಲಿ ಒಣಗಿಸಿ ನಯವಾಗಿ ಪುಡಿಮಾಡಿ ಪ್ರತಿದಿನ ೩-೫ ಗ್ರಾಂನಷ್ಟು ನೀರಿನಲ್ಲಿ ಕಲಸಿ ಸ್ವಲ್ಪ ಲಿಂಬೆರಸ ಸೇರಿಸಿ ಕುಡಿಯುವುದರಿಂದ ನೆನಪು ಶಕ್ತಿ ಹಾಗೂ ಏಕಾಗ್ರತೆ ವೃದ್ಧಿಸುವುದು. ಕೆಲವು ಕಾಯಿಲೆಗಳಲ್ಲಿ ಶಂಖಪುಷ್ಪಿಯ ಪ್ರಮಾಣ, ಉಪಯೋಗಿಸುವ ವಿಧಾನ ಎಷ್ಟು ಸಮಯ ಉಪಯೋಗಿಸಬೇಕೆಂಬ ಮಾಹಿತಿಯನ್ನು ತಜ್ಞ ವೈದ್ಯರಿಂದ ಪಡೆದು ಉಪಯೋಗಿಸುವುದು ಸೂಕ್ತ.
ಹೃದಯ :
ಶಂಖಪುಷ್ಪಿಗೆ ಆಂಟಿ ಆಕ್ಸಿಡೆಂಟ್ (ಶರೀರಕ್ಕೆ ಬೇಡವಾದವುಗಳನ್ನು ನಾಶಮಾಡುವುದು) ಗುಣಗಳು ಇದೆ. ಹೃದಯಕ್ಕೆ ಶಕ್ತಿ ನೀಡುವುದು. ರಕ್ತ ನಾಳಗಳಲ್ಲಿ ಸಂಗ್ರಹವಾಗುವ ಬೊಜ್ಜಿನ(Lipid) ಅಂಶವನ್ನು ತಡೆಗಟ್ಟುವುದು .
ಕೃಷಿ :
ಬೀಜವನ್ನು ಬಿತ್ತಿದರೆ ಮೊಳಕೆ ಒಡೆದು ಗಿಡಗಳಾಗುತ್ತದೆ. ಸಾವಯವ ಗೊಬ್ಬರ ಕೊಟ್ಟು ಬಳ್ಳಿಗೆ ಆಧಾರ ನೀಡಿದರೆ ಹುಲುಸಾಗಿ ಬೆಳೆೆಯುತ್ತದೆ.
ಡಾ. ಹರಿಕೃಷ್ಣ ಪಾಣಾಜೆ