Skip links

ಬಿಲ್ವ ಪತ್ರೆ

Scientific Name: Aegle marmelos

ಅಥರ್ವವೇದದಲ್ಲಿ ಪವಿತ್ರ ಮರವೆಂದುಉಲ್ಲೇಖಿಸಲ್ಪಟ್ಟಿದೆ. “ಬಿಲ್ವ” ಎಂದು ಹೇಳಿದರೆ ಸಾಕು,ಆದರೆ ಧಾರ್ಮಿಕವಾಗಿ ಬಿಲ್ವದ ಎಲೆಗೆ ಮಹತ್ವಇರುವುದರಿಂದ  “ಬಿಲ್ವ ಪತ್ರೆ” ಮರ ಎಂದೇಕರೆಯುತ್ತಾರೆ. ಈ ಮರವನ್ನು ಉರಿಸುವುದಿಲ್ಲ,ಉರುವಲಾಗಿ ಉಪಯೋಗಿಸುವುದಿಲ್ಲ. ಮೂರುಎಲೆಗಳು ಸೇರಿ ಒಂದು ಎಲೆ (ತ್ರಿಪರ್ಣ)ಯಾಗುತ್ತದೆ.ಆದುದರಿಂದ ಇದನ್ನು ಶಿವನ ಕಣ್ಣಿಗೆಹೋಲಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರರಿಗೆಹೋಲಿಸುತ್ತಾರೆ. ಸಪ್ತ ರಜ ತಮೋಗುಣಗಳೆಂದುಬಿಂಬಿಸುತ್ತಾರೆ. ಬಿಲ್ವ ಪತ್ರಾರ್ಚನೆಯಿಂದಶಿವಲೋಕಪ್ರಾಪ್ತಿ, ಅಷ್ಟಬಿಲ್ವಾರ್ಚನೆಗೆ ವಿಶೇಷಮಹತ್ವ. ಬಿಲ್ವ ಪತ್ರೆ ತಿಂದೇ ಜೀವಿಸುವಸಾಧುಗಳಿದ್ದರು ಎಂಬ ಉಲ್ಲೇಖ. ಬಿಲ್ವ ಪತ್ರೆ ಮರದಅಡಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ನದಿಗಳಲ್ಲಿ ಸ್ನಾನಮಾಡಿದ ಪುಣ್ಯಪ್ರಾಪ್ತಿ ಇವೆಲ್ಲವೂ ಇದರ ಔಷಧದಗುಣಕ್ಕಿಂತ ಹೊರತಾದ ಮಹತ್ವವನ್ನು ತಿಳಿಸುತ್ತದೆ.23 ನೇ ತೀರ್ಥಂಕರ ಬಿಲ್ವ ಮರದಡಿಯಲ್ಲಿ ನಿರ್ವಾಣವಾದಕಾರಣ ಜೈನರಿಗೂ ಈ  ಮರ ಪವಿತ್ರ. ಬಿಲ್ವ ಚೈತ್ರನಕ್ಷತ್ರವನ್ನು ಪ್ರತಿನಿಧಿಸುತ್ತದೆ.

ಮುಳ್ಳುಗಳಿಂದ ಕೂಡಿದ ಮರವಾಗಿದೆ.ಕೊಂಬೆಗಳಲ್ಲಿ ಅಧಿಕ ಮುಳ್ಳುಗಳಿರುತ್ತದೆ.ಕಾಂಡ ಬೂದು ಬಣ್ಣವಾಗಿದ್ದರೆ ಎಲೆಗಳು ತ್ರಿಪರ್ಣ,ಸುಗಂಧ ಯುಕ್ತ ತೈಲಗ್ರಂಥಿಗಳಿಂದಕೂಡಿರುತ್ತದೆ.  ಹಸಿರು ಮಿಶ್ರಿತ ಬಿಳಿ ಗೊಂಚಲಿನಲ್ಲಿಕಂಡುಬರುವ ಹೂ ಪರಿಮಳಯುಕ್ತವಾಗಿದೆ.ಹಸಿರು ವರ್ಣದ ಫಲ ಬೆಳೆದು ಹಣ್ಣಾದಾಗಹಳದಿಯಾಗುತ್ತದೆ. ಇದರ ಚಿಪ್ಪುಗಟ್ಟಿಯಾಗಿರುತ್ತದೆ. ಆದುದರಿಂದ ಇದಕ್ಕೆ “ವುಡ್  ಆ್ಯಪಲ್” ಎನ್ನುತ್ತಾರೆ.  

        ದೇವರು ಬಿಲ್ವಪತ್ರೆಯನ್ನು ಇಷ್ಟಪಟ್ಟಂತೆಮಾನವ ಶರೀರವೂ ಇಷ್ಟಪಡುತ್ತದೆ. ಇದನ್ನುಅತಿಸಾರ, ಆಯಾಸ, ಅಜೀರ್ಣ, ತಲೆನೋವು, ಕಿವಿನೋವು,ಹೊಟ್ಟೆನೋವಿನಂತಹ ತೊಂದರೆಗಳಲ್ಲಿ ಇದರ ಹೂ,ಎಲೆ, ಕಾಯಿ, ಹಣ್ಣು, ಬೇರುಗಳನ್ನುಉಪಯೋಗಿಸಲಾಗುತ್ತದೆ.

ಹೂ:

ನಿತ್ರಾಣ, ಬಾಯಾರಿಕೆಯಾದಾಗ ಹೂವನ್ನುಹಾಲಿನೊಂದಿಗೆ ಸೇರಿಸಿ ಮಿಲ್ಕ್‍ಶೇಕ್ ಮಾಡಿ ಕುಡಿಯಬಹುದು.ಯಕೃತ್‍ನ ಕಾರ್ಯಗಳನ್ನು ಉತ್ತಮಗೊಳಿಸಲುಸಹಾಯ ಮಾಡುವುದು.ಎಲೆ: ಇದನ್ನು ಅರೆದು ಹಿಂಡಿ ರಸ ತೆಗೆದುಸೇವಿಸುವುದರಿಂದ ನಿಧಾನಗತಿಯಲ್ಲಿ ಬರುವ ಜ್ವರಕಡಿಮೆಯಾಗುವುದು. ಶರೀರದಲ್ಲಿ ನೋವಿನಿಂದಊತವಿದ್ದ ಭಾಗಕ್ಕೆ ಎಲೆಯನ್ನು ಬಿಸಿ ಮಾಡಿ ಶೇಖಕೊಡುವುದರಿಂದ ಕಡಿಮೆಯಾಗುವುದು. ಸಣ್ಣ

ಪ್ಮಾಣದ ಮಧುಮೇಹದಲ್ಲಿ 10-15 ಎಂ ಎಲ್ ನಷ್ಟುರಸವನ್ನು ಕುಡಿಯುವುದರಿಂದನಿಯಂತ್ರಿಸಬಹುದು. ಮಲಬದ್ಧತೆಯಲ್ಲಿಯೂಉಪಯೋಗಿಸಬಹುದು. ಕೆಮ್ಮು ಕಫವಿರುವಾಗಕಷಾಯ ಮಾಡಿ ಕುಡಿಯಬೇಕು.  ಹಣ್ಣಾದ

ಫಲ:

ಉರುಟಾದ ಹಣ್ಣಾದ ಹಳದಿ ಹಣ್ಣಿನಒಳಗಿನ ಮೃದುವಾದ ಭಾಗವನ್ನುಮಲಬದ್ಧತೆಯಲ್ಲಿ, ಅಜೀರ್ಣ ಇರುವವರಿಗೆ ಸೇವಿಸಲುಕೊಡಬಹುದು. ಇದರ ಪ್ರತಿ ನಿತ್ಯ ಸೇವನೆಯಿಂದಉತ್ತಮ ಮೈ ಬಣ್ಣ ಬರುತ್ತದೆ. ಅಲ್ಲದೆದೀರ್ಘಾಯುಷ್ಯ ಹೊಂದುತ್ತಾರೆಂದು ಕೂರ್ಮಪುರಾಣದಲ್ಲಿ ಉಲ್ಲೇಖಿಸಿದ್ದಾರೆ

ಹಣ್ಣಾಗದ ಪಕ್ವಫಲ:

ಸಿಪ್ಪೆ ತೆಗೆದು ಒಣಗಿಸಿಪುಡಿಮಾಡಿ ಸಂಗ್ರಹಿಸಬಹುದು. ಕೂವೆಹುಡಿಯೊಂದಿಗೆಸ್ವಲ್ಪ ಪುಡಿಯನ್ನು ಸೇರಿಸಿ ಮಣ್ಣಿಮಾಡಿ ಅತಿಸಾರದಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಹುದು.ಕೆಲವರಿಗೆ ಕೆಲವೊಮ್ಮೆ ಗಟ್ಟಿಯಾಗಿ ಕೆಲವೊಮ್ಮೆನೀರಾಗಿ ಹಾಗೂ ಆಗಾಗ ಬೇದಿಬಂದಂತೆ ಆಗುವ ಐಬಿಎಸ್(ಇರಿಟೇಬಲ್ ಬವಲ್ ಸಿಂಡ್ರೋಮ್) ನಲ್ಲಿ ಪುಡಿಯನ್ನುಮಜ್ಜಿಗೆಗೆ ಸೇರಿಸಿ ಸ್ವಲ್ಪ ಬೆಲ್ಲ ಹಾಗೂ ಶುಂಠಿ ಪುಡಿ ಸೇರಿಸಿ ದಿನಕ್ಕೆರಡು ಸಲ ಒಂದುವಾರ ಅಥವಾ ಎರಡುವಾರ ಕುಡಿಯಬೇಕು.

ರಕ್ತಬೇಧಿಯಾಗುವಾಗ ಪುಡಿಯನ್ನು ಯರಟಿಮಧುರ ಪುಡಿ, ಸಕ್ಕರೆ ಹಾಗೂ ಜೇನಿನೊಂದಿಗೆ ಸೇರಿಸಿ ಸೇವಿಸಬೇಕು. ಕರುಳಿನಲ್ಲಿ ಹುಣ್ಣಾಗಿರುವಾಗ ಹೊಟ್ಟೆನೋವು, ರಕ್ತ ಮಿಶ್ರಿತ ಬೇಧಿಯಾಗುತ್ತಿದ್ದರೆ ಪುಡಿಯನ್ನು ನೀರಿನಲ್ಲಿ ಕಲಸಿ ದಿನಕ್ಕೆರಡು ಸಲ ಒಂದು ತಿಂಗಳು ಸೇವಿಸಬೇಕು.ಇದರೊಂದಿಗೆ ಮುಸ್ತಕಾರಿಷ್ಟ ಸೇವನೆ ಉತ್ತಮ ಪರಿಣಾಮಬೀರುವುದು.

ಬೇರು:

ಬೇರಿನ ತೊಗಟೆ ಕಷಾಯ ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಬೇರಿನ ಕಷಾಯ ಮಾಡಿ ಕುಡಿಯುವುದರಿಂದ ಔದಾಸೀನ್ಯ ಕಡಿಮೆಯಾಗಿ ಮೆದುಳು ಚುರುಕಾಗುವುದು. ಅತಿಯಾಗಿ ಕಾಡುವ ನಿದ್ದೆಯನ್ನು ಕಡಿಮೆಮಾಡುವುದು. ದಶಮೂಲಗಳಿಗೆ ವಿಶೇಷ ಮಹತ್ವವಿದೆ.

ದಶಮೂಲಗಳಲ್ಲಿ ಬಿಲ್ವ ಮೂಲವೂ ಒಂದು. ಇದರ ಬೇರು ಸೇರಿಸಿ ತಯಾರಿಸಿದ ಅಸನಬಿಲ್ವಾದಿ ತೈಲ ತಲೆನೋವು ಶೀತ ಬಾಧೆಗಳಲ್ಲಿ ತಲೆಗೆ ಹಾಕಿ ಸ್ನಾನ ಮಾಡಬೇಕು. ದಶಮೂಲಾರಿಷ್ಟ ಎಲ್ಲರಿಗೂ ತಿಳಿದಿದೆ. ಇದರಲ್ಲಿಯೂ ಬಿಲ್ವದ ಬೇರನ್ನು ಉಪಯೋಗಿಸುತ್ತಾರೆ. ಬಿಲ್ವಫಲದ ತಿರುಳನ್ನು ಗೋಮೂತ್ರದಲ್ಲಿ ಇಟ್ಟು ಆಡಿನ ಹಾಲು ಎಳ್ಳೆಣ್ಣೆಯಲ್ಲಿ ತೈಲ ಪಾಕಮಾಡಿ ತಯಾರಿಸಿ ಸಂಗ್ರಹಿಸಿದರೆ ಅದನ್ನು ಕಿವಿನೋವಿನಲ್ಲಿ ಉಪಯೋಗಿಸಬಹುದು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.