Scientific name: Asparagus racemosus
ಇದಕ್ಕೆ ಹಲವು ಮಕ್ಕಳ ತಾಯಿ, ಹಾಲು ಮಕ್ಕಳ ಗಡ್ಡೆ, ಹುಲಿ ಉಗುರು ಬಳ್ಳಿ ಎಂಬ ಅನ್ವರ್ಥ ನಾಮಗಳೂ ಇವೆ. ಹಸಿರು ಬಳ್ಳಿಯಲ್ಲಿ ಸಪುರವಾದ ಎಲೆಗಳಿರುವ ಇದನ್ನೇ ಹೋಲುವ, ಇನ್ನೊಂದು ಜಾತಿಯ ಸಸ್ಯವನ್ನು ಹೂಗಳ ಮಧ್ಯೆ ಪುಷ್ಪಾಲಂಕಾರ ಮಾಡುವಾಗ ಸೇರಿಸಿಕೊಳ್ಳುತ್ತಾರೆ. ಅದೇ ರೀತಿ ಕಾಣುವ ಶತಾವರಿ ಬಳ್ಳಿ ಹುಲಿ ಉಗುರಿನಂತೆ ಕೆಳ ಮುಖವಾಗಿ ಮುಳ್ಳುಗಳಿತ್ತದೆÀ, ಕೆಳ ಮುಖವಾಗಿ ಬಾಗಿದ ಎಲೆಗಳಿಂದ ಕೂಡಿದೆÀ, ಮಲ್ಲಿಗೆಯಂತೆ ಚಿಕ್ಕ ಚಿಕ್ಕ ಬಿಳಿ ಹೂ ಗೊಂಚಲುಗಳಿಂದ ಕಂಡುಬರುತ್ತದೆÀ ಉರುಟು ಕೆಂಪು ಹಣ್ಣಿನಿಂದ ಕಂಗೊಳಿಸುತ್ತದೆ.ಅದರೊಳಗೆ ಕಪ್ಪು ಬೂದು ಬಿಳಿ ಮಿಶ್ರಿತ ದಾರೆಗಳಿಂದ ಕೂಡಿದ 1-2 ಬೀಜಗಳನ್ನು ಹೊಂದಿರುತ್ತದೆ. ನೋಡುವಾಗ ಎಲೆಗಳಂತೆ ಕಂಡರೂ ಗಾಳಿ ಮರದ ಎಲೆಯಂತೆ ಸಪುರ ಕಡ್ಡಿಯಾಕಾರದ ಎಲೆಗಳ ಸಮೂಹ.ಮರವನ್ನು ಆದರಿಸಿ ಬೆಳೆಯುತ್ತದೆ ಅಥವಾ ನೆಲದಲ್ಲಿ ಹರಡುತ್ತದೆ. ಬುಡದಲ್ಲಿ ರಸವತ್ತಾದ ನೀಳವಾದ ದಪ್ಪ ಹಲವು ಗಡ್ಡೆಗಳ ಗೊಂಚಲಿನಿಂದ ಕೂಡಿರುತ್ತದೆ.ಇದನ್ನೇ ಔಷಧಿಗಾಗಿ ಉಪಯೋಗಿಸುತ್ತಾರೆ.
ಬಹಳಷ್ಟು ಔಷಧೀಯಗುಣಗಳಿರುವ ಸಸ್ಯ. ಸ್ತ್ರೀಯರ ಸ್ತನ್ಯ (ಹಾಲು) ವರ್ಧಕ, ರಕ್ತಪೋಷಕ, ರಕ್ತವರ್ಧಕ,ರಕ್ತಶೋಧಕ,ಗರ್ಬಾಶಯದ ಅತಿಸ್ರಾವ, ಮೂತ್ರಲ,(ಮೂತ್ರವನ್ನು ಹೊರಹಾಕುವ) ದೃಷ್ಠಿದೋಷ, ಉರಿಮೂತ್ರ, ಹೊಟ್ಟೆಉರಿ(ಚಿಛಿiಜiಣಥಿ),ಮರೆವು, ಕ್ಷೀಣ ಶರೀರದಲ್ಲಿ ದೇಹಪುಷ್ಠಿಗಾಗಿ ಇದನ್ನು ಉಪಯೋಗಿಸುತ್ತಾರೆ.
ಸ್ತನ್ಯವರ್ಧಕ:
ಪ್ರಸವ ನಂತರ ಮಗುವಿಗೆ ಎದೆ ಹಾಲು ಕಡಿಮೆಯಾಗಿರುವಾಗ ಇದರ ರಸವನ್ನು (juice)ಕಲ್ಲುಸಕ್ಕರೆ ಹಾಕಿ ಕುಡಿಯಬೇಕು. ಇದೇ ಗಡ್ಡೆಯನ್ನು ಒಣಗಿಸಿ ಪುಡಿಮಾಡಿ ಮಾರಾಟ ಮಾಡುವ ಫಾರ್ಮಸಿಗಳೂ ಇವೆ. ಹಸಿಗಡ್ಡೆಯನ್ನು ಜಜ್ಜಿ ಹಾಲು ಕಷಾಯ ಮಾಡಿಯೂ ಕುಡಿಯಬಹುದು . ದಿನಕ್ಕೆ 20ಗ್ರಾಂ ನಷ್ಟು ಹಸಿ ಗಡ್ಡೆಯನ್ನು 1 ತಿಂಗಳು ಕಾಲ ಕುಡಿಯಬೇಕು. ಇದರಂ ಟಛಿohoಟiಛಿ exಣಡಿಚಿಛಿಣ ನ್ನು ಸ್ತ್ರೀಯರಿಗೆ ಚುಚ್ಚುಮದ್ದಿನ ಮೂಲಕ ಕೊಟ್ಟರೆ ಹಾಲಿನ ಗ್ರಂಥಿಗಳು (Mammary glands) ಉಬ್ಬಿಕೊಳ್ಳುತ್ತದೆ. ಹಾಲಿನ ಉತ್ಪತ್ತಿ ಜಾಸ್ತಿಯಾಗುತ್ತದೆ ಎಂದು ಕಂಡು ಕೊಂಡಿದ್ದಾರೆ.
ಅತಿಸ್ರಾವ :
ಮುಟ್ಟಿನ ಸಮಯದಲ್ಲಿ ಅತಿಸ್ರಾವ ಅಥವಾ ಮುಟ್ಟು ನಿಲ್ಲುವ ಸಮಯದಲ್ಲಿ(Menopause) ಅತಿಸ್ರಾವ ಇರುವಾಗ 1-2 ಬೇರುಗಳನ್ನು, ತುಂಡುಮಾಡಿ ಜಜ್ಜಿ ಪುಡಿಮಾಡಿ ಕಷಾಯ ಅಥವಾ ಹಾಲು ಕಷಾಯ ಮಾಡಿ ಕುಡಿಯಬೇಕು. ಕೇವಲ ಶತಾವರಿಯಲ್ಲದೆ ಇನ್ನಿತರ ಗಿಡಮೂಲಿಕೆಗಳನ್ನೂ ಸೇರಿಸಿಕೊಂಡು ತಯಾರಿಸಿದ ಔಷಧಿಗಳು ಹೆಚ್ಚು ಪಲಪ್ರದವಾಗಿದೆ.
ಮೂತ್ರದ ತೊಂದರೆ:
ಮೂತ್ರದ ಕಲ್ಲು, ಮೂತ್ರದ ಉರಿ ಇರುವಾಗ ಇದರ ಕಷಾಯ ಅಥವಾ ಇದರೊಂದಿಗೆ ಇನ್ನೂ ಕೆಲವು ಸಮಾನ ಗುಣಗಳಿರುವ ಔಷಧಿಯನ್ನು ಸೇರಿಸಿ ಸೇವಿಸಬೆÉೀಕು.
ದೃಷ್ಠಿದೋಷ :
ಗೋಲಾಕಾರದ ಕಣ್ಣಿನ ಒಳಗೆ ದಪ್ಪದ್ರವ (Gel) ಇರುತ್ತದೆ. ಇದರಲ್ಲಿ ನಿರ್ದಿಷ್ಠ ಪ್ರಮಾಣದ ಪೋಷಕಾಂಶಗಳು ಇರುತ್ತದೆ. ಇದರ ಕೊರತೆಯಿಂದಲೂ ದೃಷ್ಠಿಯಲ್ಲಿ ವ್ಯತ್ಯಾಸ,ದೃಷ್ಠಿ ಮಸುಕಾಗುವುದು ಕಂಡುಬರುತ್ತದೆ.ಬಹಳಷ್ಟು ಪೋಷಕಾಂಶಗಳಿಂದ ಕೂಡಿದ ಶತಾವರಿಯ ಉಪಯೋಗ ಪ್ರಯೋಜನಕಾರಿಯಾಗಿದೆ.
ಹೊಟ್ಟೆಉರಿ(Hyper acidity):
ಈಗಿನ ಒತ್ತಡದ ಜೀವನ ಶೈಲಿಯಲ್ಲಿ ಅಸಿಡಿಟಿಯಂತಹ ತೊಂದರೆ ಜನರನ್ನು ತೀವ್ರ ಕಾಡುತ್ತಿದೆ. ಶತಾವರಿ ಚೂರ್ಣವನ್ನು ಹಾಲಿನಲ್ಲಿ ಸೇರಿಸಿ ದಿನಕ್ಕೆರಡು ಸಲ ಕುಡಿಯುವುದರಿಂದ ಹೊಟ್ಟೆ ತಂಪಾಗುತ್ತದೆ. ಹೊಟ್ಟೆ ಹುಣ್ಣಿನಲ್ಲಿಯೂ ಸಹಕಾರಿಯಾಗಿದೆ. ಶತಾವರಿಯ ಈ ಇಲ್ಲಾ ಉಪಯೋಗಗಳು ಜನಸಾಮಾನ್ಯರಿಗೆ ತಿಳಿದಿದೆ. ಇವೆಲ್ಲವೂ “ಭಾವ ಪ್ರಕಾಶ” ಗ್ರಂಥದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ವೈಜ್ಞಾನಿಕವಾಗಿಯೂ ಸಮರ್ಥಿಸಿದ್ದಾರೆ.
ಡಾ| ಹರಿಕೃಷ್ಣ ಪಾಣಾಜೆ