Skip links

ಔಡಲ (ಆಲುಂಬುಡ)  

Scientific Name: Ricinus communis

     ನಾವು ಹೋಗುವ ಮಾರ್ಗದ ಬದಿಗಳಲ್ಲಿ ಅಲ್ಲಲ್ಲಿ ದಟ್ಟವಾಗಿ 8-15 ಅಡಿ ಎತ್ತರ ಬೆಳೆದು ನಿಂತಿರುವ ಗಿಡವೂ ಅಲ್ಲದ ಮರವೂ ಅಲ್ಲದ ಮಧ್ಯಮವಾಗಿ ಬೆಳೆಯುವ ವನಸ್ಪತಿ. “ನಿರರ್ಥ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ” ಅಂದರೆ…. ಸಣ್ಣ ಸಣ್ಣ ಬೇರೆ ಗಿಡಗಳ ಮದ್ಯೆ ಏರಂಡ(ಆಲುಂಬುಡ)ವೇ ದೊಡ್ಡ ಮರ ಎಂಬ ಅರ್ಥ ಬರುವ ಶ್ಲೋಕವನ್ನು ಏನೂ ಜ್ಞಾನ ವಿಲ್ಲದವರ ಮದ್ಯೆ ಸ್ವಲ್ಪ ಜ್ಞಾನಿಯೂ ಪಂಡಿತನಂತೆ ಕಾಣುತ್ತಾನೆ ಎಂಬುದಾಗಿ ಹೋಲಿಸಲು ಬಳಸುತ್ತಾರೆ. ಇದರ ಬೇರನ್ನು ಉಪಯೋಗ ಮಾಡುವುದರಿಂದ ಹರಳು ಬೇರು, ತುಳುವಿನಲ್ಲಿ ಆಲುಂಬುಡ (ಬೇಲಿ ಆಲುಂಬುಡ ಅಲ್ಲ) ಎಂದು ಕರೆಯುತ್ತಾರೆ. ಸಂಸ್ಕøತದಲ್ಲಿ “ಏರಂಡ” ಎಂದೂ, ಅಂಗೈ ಅಗಲಿಸಿ ಬೆರಳನ್ನು ಬಿಡಿಸಿದಂತೆ ಕವಲು ಒಡೆದಂತೆ ಎಲೆಗಳು ಕಂಡುಬರುವುದರಿಂದ “ಪಂಚಾಂಗುಲಿ” ಎನ್ನುತ್ತಾರೆ.

ಗಂಧರ್ವರ ಕೈ ಬೆರಳಿನಂತೆ ಇರುವ ಎಲೆಗಳು ಎನ್ನುವ ಅರ್ಥದಲ್ಲಿ “ ಗಂಧರ್ವ ಹಸ್ತ” ಎಂದೂ ಕರೆಯುತ್ತಾರೆ. ಹೆಚ್ಚಾಗಿ ನೇರವಾಗಿ ಬೆಳೆಯುವುದಾದರೂ ಸ್ವಲ್ಪ ಹೆಚ್ಚು ಬೆಳೆದಂತೆ ರೆಂಬೆ ಕೊಂಬೆಗಳು ಹುಟ್ಟಿಕೊಳ್ಳತ್ತದೆ. ಒಂದರಿಂದ ಒಂದೂವರೆ ಅಡಿ ಉದ್ದದ ಹೂ ಗೊಂಚಲು ಕಂಡುಬರುತ್ತದೆ. ಇದರ ಫಲ ಮೃದು ಮುಳ್ಳುಗಳಂತಹ ರಚನೆಯಿಂದ ಆವೃತವಾಗಿ ಗೊಂಚಲಿನಲ್ಲಿ ಇರುತ್ತದೆ. ಬೀಜಗಳು ಆಯತಾಕಾರದಲ್ಲಿ ವರ್ಣಮಯವಾಗಿ ಆಕರ್ಷಿತವಾಗಿರುತ್ತದೆ. ಬೀಜದ ಹೊರಭಾಗ ಗಟ್ಟಿಯಾಗಿರುತ್ತದೆ, ನಯವಾಗಿರುತ್ತದೆ. ಇದರಲ್ಲಿ ಬಿಳಿ ಮತ್ತು ಕೆಂಪು ಎಂಬ ಎರಡು ಪ್ರಭೇದಗಳಿವೆ. ಎರಡನ್ನೂ ಔಷಧಿಗಾಗಿ ಉಪಯೋಗಿಸುತ್ತೇವೆ. ಭಾರತದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಇದರ ಎಲೆ, ಬೇರು, ಬೀಜ, ಬೀಜದ ಎಣ್ಣೆ(castor oil))ಯನ್ನು ಔಷಧಿಗಾಗಿ ಬಳಸಲಾಗುತ್ತದೆ.  

ಇದನ್ನು ವಾತರೋಗದಲ್ಲಿ, ಸೊಂಟನೋವಿನಲ್ಲಿ, ಸಂಧಿ ನೋವಿನಲ್ಲಿ, ಹೊಟ್ಟೆಯ ತೊಂದರೆಗಳಲ್ಲಿ, ಮಲಬದ್ಧತೆಯಲ್ಲಿ ಉಪಯೋಗಿಸುತ್ತಾರೆ.

ಎಲೆ:

ಶರೀರದ ಯಾವುದೇ ಭಾಗದಲ್ಲಿ ನೋವು ಬಾವು ಇರುವಾಗ ಇದರ ಎಲೆಯನ್ನು ಅರೆದು ಸ್ವಲ್ಪ ಬಿಸಿ ಮಾಡಿ ಹಚ್ಚಿದರೆ ಕಡಿಮೆಯಾಗುವುದು.  

ಬೀಜ :

5-6 ಬೀಜವನ್ನು ಜಜ್ಜಿ ಒಂದು ಲೋಟ ಹಾಲಿಗೆ ಹಾಕಿ ಕೆನೆಬಾರದಂತೆ ಕುದಿಸಿ ಸೋಸಿ ಒಂದು ವಾರ ಕುಡಿದರೆ ಸೊಂಟನೋವು ಕಡಿಮೆಯಾಗುವುದು. ಬೀಜದಿಂದ ತೆಗೆಯುವ ಎಣ್ಣೆಗೆ castor oil ಎನ್ನುತ್ತಾರೆ. ಇದು ಔಷಧಿ ಅಂಗಡಿಗಳಲ್ಲಿ ಲಭ್ಯ. ಮಲ ಬದ್ಧತೆ ಇರುವವರು ಕ್ಯಾಸ್ಟರ್ಆ ಯಿಲ್ ಒಂದು ಚಮಚ ಒಂದು ಲೋಟ ಹಾಲಿಗೆ ಹಾಕಿ ರಾತ್ರಿ ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಆಮವಾತ (Rheumatoid arthritis) ನೋವಿನಿಂದ ಕೂಡಿದ್ದು ಬಹಳಷ್ಟು ಹಿಂಸೆ ಕೊಡುವ ರೋಗವಾಗಿದೆ. ಹಸಿ ಶುಂಠಿ 5-10 ಗ್ರಾಂ eಜ್ಜಿ ಒಂದು ಲೋಟ ಹಾಲಿಗೆ ಹಾಕಿ ಕುದಿಸಿ ಸೋಸಿ ಒಂದು ಚಮಚ ಕ್ಯಾಸ್ಟರ್ ಆಯಿಲ್ ಹಾಕಿ 5-6 ತಿಂಗಳು ನಿತ್ಯ ಕುಡಿಯುವುದರಿಂದ ನಿಧಾನವಾಗಿ ನೋವು ಕಡಿಮೆಯಾಗುವುದು. ದಶಮೂಲ ಕಷಾಯ ಮೆಡಿಕಲ್ಸ್‍ಗಳಲ್ಲಿ ಸಿಗುತ್ತz.É ಇದಕ್ಕೆ 1/2 ಚಮಚ ಶುಂಠಿ ಪುಡಿ ಒಂದು ಚಮಚ ಕ್ಯಾಸ್ಟರ್ ಆಯಿಲ್ ಸೇರಿಸಿ ಕುಡಿಯುವುದರಿಂದಲೂ ಸಂದು ನೋವುಗಳೂ ಕಡಿಮೆಯಾಗುತ್ತದೆ.  

ಬೇರು:

ನೋವು ನಿವಾರಣೆಗೆ ಬೇರನ್ನು ಕಷಾಯ ಮಾಡಿ ಕುಡಿಯಬಹುದು. ಒಂದು ತುಂಡು (10ಗ್ರಾಂ) ಬೇರನ್ನು ಜಜ್ಜಿ 1/2 ಚಮಚ ಜೀರಿಗೆ ಸೇರಿಸಿ ಒಂದು ಲೋಟ ಹಾಲು ಒಂದು ಲೋಟ ನೀರು ಸೇರಿಸಿ ಕುದಿಸಿ ಸೋಸಿ ಕುಡಿದರೆ ಆಗಾಗ ಬರುವ ಸಣ್ಣ ಪುಟ್ಟ ಸೊಂಟ ನೋವುಗಳು ಕಡಿಮೆ ಆಗುವುದು.  

 ಇದರ ಬೇರು, ಕ್ಯಾಸ್ಟರ್ ಆಯಿಲ್, ಅಣಿಲೆಪುಡಿ, ಗೋಮೂತ್ರ ಇವುಗಳ ಮಿಶ್ರಣದಿಂದ ತಯಾರಿಸಿದ ಔಷಧಿಗಳು ಹೊಟ್ಟೆಯಲ್ಲಿ ಕಾ¯ಲ್ಲಿ ನೀರು ಬಂದಿರುವ ಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿದೆ. ಇಂತಹ ಗಿಡ ನಮ್ಮ ಕಣ್ಣ ಮುಂದೆ ಅಲ್ಲಲ್ಲಿ ಕಂಡುಬಂದಾಗ ಅದರ ಔಷಧೀಯ ಗುಣಗಳ ಬಗ್ಗೆ ನೆನಪಾದರೆ ಸುಲಭವಾಗಿ ಕೆಲವು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.