Scientific Name: Cynodon dactylon
‘ಕದಿಕೆ ಪಂತಿ’ ಎಂದು ತುಳುವಿನಲ್ಲಿ ಹೇಳಿದರೆ ನಮ್ಮ ತುಳಸಿ ಕಟ್ಟೆಯಿಂದ ಪ್ರಾರಂಭಿಸಿ ಅಂಗಳದ ಸುತ್ತಲೂ ಇದೆ ಎನ್ನುತ್ತಾರೆ. ಸಂಸ್ಕøತದಲ್ಲಿ “ದೂರ್ವಾ” ಎನ್ನುತ್ತಾರೆ. ನಮ್ಮ ಚೌತಿಯ ಗಣಪತಿ ಹುಟ್ಟುವಾಗಲೇ ಗರಿಕೆಯೂ ಇತ್ತು. ಗಣಪತಿಗೆ ಎಷ್ಟು ತಿನ್ನಲು ಕೊಟ್ಟರೂ ಹೊಟ್ಟೆ ತುಂಬದಿರುವಾಗ ಪಾರ್ವತಿ ಹಾಲಿನೊಂದಿಗೆ ಗರಿಕೆ ಸೇರಿಸಿ ಕೊಟ್ಟು ತೃಪ್ತಿ ಪಡಿಸುತ್ತಿದ್ದಳು. ಚೌತಿಯಂದು “ಓಂ ಗಜಾನನಾಯ ನಮಃ ದೂರ್ವಪತ್ರಂ ಸಮರ್ಪಯಾಮಿ” ಎಂದು ಗರಿಕೆ ಸಮರ್ಪಿಸಿ ನಮಸ್ಕರಿಸುತ್ತೇವೆ.
ಅನಲಾಸುರ ಎಂಬ ರಾಕ್ಷಸನಿಗೆ ಕಣ್ಣಿನಿಂದ ಬೆಂಕಿ ಹೊರಸೂಸುವ ಶಕ್ತಿ ಇತ್ತು. ಅವನು ದೇವಲೋಕಕ್ಕೆ ಹೋಗಿ ದೇವತೆಗಳನ್ನು ಪೀಡಿಸುತ್ತಿದ್ದು ಅವನ ಎದುರು ಬರುವವರನ್ನು ತನ್ನ ಕಣ್ಣಿನಿಂದ ಬರುವ ಬೆಂಕಿಯಿಂದ ಸುಟ್ಟು ಭಸ್ಮ ಮಾಡುತ್ತಿದ್ದ. ದೇವತೆಗಳು ಗಣಪತಿಯ ಮೊರೆ ಹೋದರು. ಗಣಪತಿ ರಾಕ್ಷಸನ ಜೊತೆ ಹೋರಾಟಮಾಡಿ ಅವನನ್ನು ನುಂಗಿ ಬಿಡುತ್ತಾನೆ. ಗಣಪತಿಯ ಹೊಟ್ಟೆ ಉಬ್ಬುವುದು, ಮೈಯಲ್ಲಿ ಉರಿಉಂಟಾಗುವುದು. ಇದನ್ನು ನೋಡಿದ ಋಷಿ ಮುನಿಗಳು 21 ಗರಿಕೆ ತಂದು ಗಣಪತಿಯ ತಲೆÉ ಮೇಲೆ ಇಟ್ಟಾಗ ಉರಿಕಡಿಮೆಯಾಗುವುದು. ಅಂದಿನಿಂದ ಗಣಪತಿಗೆ ಗರಿಕೆ ಎಂದರೆ ಇಷ್ಟ ಎಂಬ ಕಥೆ ಇದೆ.
ಯಜುರ್ವೇದದ ಕರ್ಮ ಕಾಂಡದಲ್ಲಿ “ಎಲೈ ದಾಹ ನಾಶಕ, ಶಾಂತಿ ದಾಯಕ ದೂರ್ವೆಯೇ ನೀನು ಕಠಿಣ ಸ್ಥಳದಲ್ಲಿಯೂ ಬೆಳೆಯುತ್ತಾ ಜನರ ಹಿತಕ್ಕಾಗಿ ಔಷಧಿ ರೂಪದಲ್ಲಿ ಪ್ರಪಂಚದಲ್ಲಿ ಹುಟ್ಟಿದ್ದಿಯಾ” ಎಂಬ ಉಲ್ಲೇಖವಿದೆ. ಯಜುರ್ವೇದದಲ್ಲಿಯೂ ಕಂಡುಬರುತ್ತದೆ. ಪೂಜೆಗೆ ಮಾತ್ರವಲ್ಲದೆ ಶ್ರಾದ್ಧ ಕಾರ್ಯಕ್ಕೂ ಗರಿಕೆ ಬೇಕು. ಆರೋಗ್ಯ ವ್ಯತ್ಯಯವಾದಾಗ ಮಾಂಸಹಾರಿ ನಾಯಿ ಬೆಕ್ಕುಗಳೂ ಜಗಿದು ತಿನ್ನಲು ಗರಿಕೆಯನ್ನೇ ಆಯ್ದುಕೊಳ್ಳುವುದನ್ನು ನೋಡಿದರೆ ಗರಿಕೆಯ ಮಹತ್ವ ಅರಿವಾದೀತು.
ಸ್ತ್ರೀಯರÀ ಮಾಸಿಕ ಅತಿಸ್ರಾವದಲ್ಲಿ, ಅನಿಯಮಿತ ಋತು ಸ್ರಾವದಲ್ಲಿ ಇದರ ಜ್ಯೂಸ್ ಮಾಡಿ (ರಸ ತೆಗೆದು) ಕುಡಿಯಬೇಕು. ಮೂಗಿನ ರಕ್ತ ಸ್ರಾವದಲ್ಲಿ ಗರಿಕೆ ಅರೆದು ಬಟ್ಟೆಯಲ್ಲಿ ಸೋಸಿ 3-4 ಬಿಂದು ಮೂಗಿಗೆ ಬಿಡಬೇಕು. ಪದೇ ಪದೇ ಮೂತ್ರ ವಿಸರ್ಜನೆ ಉರಿಮೂತ್ರ ವಿದ್ದರೆ ಅರ್ಧ ಗ್ಲಾಸ್ ಗರಿಕೆ ಜ್ಯೂಸಿಗೆ ಅರ್ಧ ಗ್ಲಾಸ್ ಆಕಳ ಹಾಲು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಮೂರು ಸಲ ಸೇವಿಸಬೇಕು. ಕಜ್ಜಿ, ಎಕ್ಸಿಮಾ ಇರುವಾಗ ಗರಿಕೆ ರಸ ಮತ್ತು ಅಮೃತ ಬಳ್ಳಿ ಎಲೆ ರಸ ಎಳ್ಳೆಣ್ಣೆಗೆ ಸೇರಿಸಿ ಪಾಕಮಾಡಿ ಹಚ್ಚುವುದರಿಂದ ತುರಿಕೆ ಕಡಿಮೆಯಾಗುವುದು.
ಮಾನಸಿಕ ಒತ್ತಡದಿಂದ ನಿದ್ರೆ ಬಾರದಿರುವಾಗ ಗರಿಕೆ ಮತ್ತು ಎಳ್ಳು ಒಟ್ಟಿಗೆ ಗಟ್ಟಿಯಾಗಿ ಅರೆದು ಬೆಣ್ಣೆ ಮಿಶ್ರ ಮಾಡಿ ತಲೆಗೆ (ನೆತ್ತಿ ಭಾಗಕ್ಕೆ) ಹಚ್ಚಿ 3-4 ಗಂಟೆ ನಂತರ ಸ್ನಾನ ಮಾಡುವುದರಿಂದ ನಿದ್ರೆಚೆನ್ನಾಗಿ ಬರುವುದು. ರಕ್ತವರ್ಧಕವಾಗಿದೆ. ಇದರಲ್ಲಿ 65% ಕ್ಲೋರೋಫಿಲ್ಇ ರುವುದರಿಂದ ಇದೊಂದು ನೈಸರ್ಗಿಕ ರಕ್ತವರ್ಧಕ. ಹಿಮೊಗ್ಲೋಬಿನ್ ಜಾಸ್ತಿ ಮಾಡುವುದು. ನಿತ್ಯ ಸೇವನೆಯಿಂದ ಸ್ತ್ರೀಯರಲ್ಲಿ ಪ್ರೋಲೆಕ್ಟಿನ್ ಹಾರ್ಮೊನ್ ಸ್ರಾವ ಮಾಡಲು ಪ್ರೇರೇಪಿಸುವುದರಿಂದ ಸ್ತನ್ಯವರ್ಧನೆ ಮಾಡುವುದು. ಶೀತ ಕಫ ಕಡಿಮೆ ಮಾಡುವುದು. ಹುಣ್ಣುಗಳನ್ನು ಬೇಗ ಒಣಗಿಸುವುದು,ಬಾಯಿ ದುರ್ಗಂಧ ನಿವಾರಿಸುವುದು. ಒಸಡಿನ ರಕ್ತಸ್ರಾವ ಕಡಿಮೆಮಾಡುವುದು. ಬೊಜ್ಜು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಒಂದು ಮುಷ್ಟಿ ಗರಿಕೆ ಹುಲ್ಲಿಗೆ 1-2 ಲೋಟ ನೀರು ಸೇರಿಸಿ ಜ್ಯೂಸ್ ಮಾಡಿ ಬೆಳಗ್ಗೆ ಕುಡಿದು ಮಧ್ಯಾಹ್ನ & ರಾತ್ರಿ ಲಘು ಆಹಾರ ಸೇವನೆ ಮಾಡಬೇಕು. ನೋವು ಇರುವಾಗ ಗರಿಕೆಯೊಂದಿಗೆ ಒಳ್ಳೆ ಮೆಣಸು ಸ್ವಲ್ಪ ಸೇರಿಸಿ ಅರೆದು ನೋವಿರುವಲ್ಲಿಗೆ ಹಚ್ಚಿದರೆ ನೋವು ಕಡಿಮೆಯಾಗುವುದು.
ಗರಿಕೆ ಚಟ್ನಿ & ತಂಬ್ಳಿ :
ಹಸಿಮೆಣಸಿನಕಾಯಿ, ಜೀರಿಗೆ, ತೆಂಗಿನಕಾಯಿಯೊಂದಿಗೆ ಗರಿಕೆ ಸೇರಿಸಿ ಅರೆದು ಚಟ್ನಿಯಂತೆ ಸೇವನೆ ಅಥವಾ ಅದಕ್ಕೆ ಮಜ್ಜಿಗೆ ಸೇರಿಸಿ ಒಗ್ಗರಣೆ ಕೊಟ್ಟು ತಂಬ್ಳಿ ಮಾಡಿಯೂ ಊಟ ಮಾಡಬಹುದು.
ವಿಷದ ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆಯಾಗಿ ಗರಿಕೆ ಜ್ಯೂಸ್ ಪ್ರತಿ ನಿಮಿಷಕ್ಕೆ 2 ಚಮಚದಂತೆ ಕೊಡಬೇಕು. ಇದರೊಂದಿಗೆ ಆದಷ್ಟು ಬೇಗ ವಿಷ ಚಿಕಿತ್ಸೆಯನ್ನೂ ಕೊಡಿಸಬೇಕು. ಬೆಳಗ್ಗೆ ಗರಿಕೆಯಿಂದ ದೇವರಿಗೆ ಪೂಜೆಮಾಡಿ ಅದನ್ನೇ ಪ್ರಸಾದವೆಂದು ಅರೆದು ನಾವು ಕುಡಿದರೆ ಆರೋಗ್ಯವೆಂಬ ಭಾಗ್ಯ ನಮ್ಮದಾಗುತ್ತದೆ. ಗರಿಕೆಯಿಂದ ವಿಘ್ನನಿವಾರಕನ ಉರಿಕಡಿಮೆಯಾದಂತೆ ನಮ್ಮ ಶರೀರದ ತೊಂದರೆಯೂ ಕಡಿಮೆಯಾಗುವುದು.
ಡಾ| ಹರಿಕೃಷ್ಣ ಪಾಣಾಜೆ