Scientific Name: Saccharum officinarum
ಚೌತಿ ಮತ್ತು ಮಕರ ಸಂಕ್ರಮಣ ಸಮಯದಲ್ಲಿ ಕಬ್ಬು ಎಲ್ಲಾ ಕಡೆ ಕಂಡುಬರುತ್ತದೆ. ಮತ್ತೆ ನೆನಪಾಗುವುದು ಜಾಂಡೀಸ್ ಆದಾಗ. ಈಗ ಮಾಲ್‌ಗಳಲ್ಲಿ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. ಬಾಯಾರಿಕೆಯಾದಾಗ ಎಳನೀರು ಇಲ್ಲದಿದ್ದರೆ ಜನರ ಆಯ್ಕೆ ಕಬ್ಬಿನ ಜ್ಯೂಸ್. ಗಣಪತಿ ಹವನಕ್ಕೆ ತಯಾರಿಸುವ ಅಷ್ಟದ್ರವ್ಯಗಳಲ್ಲಿ ಕಬ್ಬು ಒಂದಾಗಿದೆ.
ಬ್ರಿಜಿಲ್ ಬಿಟ್ಟರೆ ಭಾರತವೇ ಅಧಿಕ ಕಬ್ಬು ಬೆಳೆಯುವ ದೇಶ. ಭಾರತದಲ್ಲಿ ಉತ್ತರ ಪ್ರದೇಶದ ನಂತರ ಕರ್ನಾಟಕವೇ ಅಧಿಕ ಬೆಳೆಯುತ್ತದೆ. ೬ ರಿಂದ ೧೨ ಅಡಿ ಎತ್ತರ ಬೆಳೆಯುವ ಗಂಟುಗಳಿಂದಕೂಡಿದ ಕಬ್ಬಿನ ಹೂಗುಚ್ಚ ದೊಡ್ಡದಾಗಿ ಅನೇಕ ಕವಲುಗಳಿಂದ ಕೂಡಿದೆ. ಈಗ ಕಬ್ಬಿನ ಬೇರೆ ಬೇರೆ ತಳಿಗಳಿದ್ದರೂ ಭಾವ ಪ್ರಕಾಶ ಗ್ರಂಥದಲ್ಲಿ ಕಬ್ಬಿನ ಹದಿಮೂರು ವಿಧಗಳನ್ನು ಉಲ್ಲೇಖಿಸಿದ್ದಾರೆ. ಕಬ್ಬು ಉಪಯೋಗಿಸಿ ತಯಾರಿಸುವ ಕೆಲವೇ ಔಷಧಿಗಳಿದ್ದರೆ ಕಬ್ಬಿನಿಂದ ತಯಾರಿಸಿದ ಬೆಲ್ಲ ಇಲ್ಲದಿದ್ದರೆ ಆಯುರ್ವೇದದಲ್ಲಿ ಉಲ್ಲೇಖಿಸಿದ ದಶಮೂಲರಿಷ್ಟವೇ ಮೊದಲಾದ ಹಲವಾರು ಆಸವ- ಅರಿಷ್ಟ ಉತ್ಪಾದಿಸಲಾಗದು. ಸಿರಪ್, ಲೇಹಗಳನ್ನು ಮಾಡಬೇಕಾದರೂ ಕಲ್ಲು ಸಕ್ಕರೆ ಇಲ್ಲವೇ ಬೆಲ್ಲ ಬೇಕೇಬೇಕು. ಆಯುರ್ವೇದ ಫಾರ್ಮಸಿಗಳು ಕಬ್ಬು ಬೆಳೆಯದಿದ್ದರೆ ಜೀವಿಸದು.
ಕಬ್ಬು ಸೇವನೆಯಿಂದ ಪಿತ್ತ ಕಡಿಮೆಮಾಡುವುದು, ಶರೀರಕ್ಕೆ ಶಕ್ತಿ ನೀಡುವುದು, ಮಲಮೂತ್ರವಿಸರ್ಜನೆಗೆ ಸಹಾಯ ಮಾಡುವುದು, ಜೀರ್ಣಕ್ರಿಯೆ, ಚರ್ಮ ರಕ್ಷಣೆ ಮಾಡುವುದು. ಇದರಲ್ಲಿರುವ ಗ್ಲೂಕೋಸ್ ಕೂಡಲೇ ಸುಕ್ರೋಸ್ ಆಗಿ ಪರಿವರ್ತನೆ ಆಗುವುದರಿಂದ ಕಬ್ಬಿನ ಜ್ಯೂಸ್ ಕುಡಿದ ಕೂಡಲೇ ಶರೀರಕ್ಕೆ ಮತ್ತು ಮನಸ್ಸಿಗೆ ಉಲ್ಲಾಸನೀಡುವುದು.
ಇದರಲ್ಲಿ ಮಿನರಲ್ಸ್ಗಳಾದ ಫಾಸ್ಪರಸ್, ಕ್ಯಾಲ್ಸಿಯಂ, ಪೋಟಾಸಿಯಂ, ಜಿಂಕ್ ಕಬ್ಬಿಣದ ಅಂಶಗಳು ಇದೆ. ಗ್ಲುಕೊಸ್, ವಿಟಮಿನ್ B6, B12, D ಮತ್ತು ಎನ್‌ಜೈಮ್‌ಗಳು ಇದೆ. ಹುಲ್ಲಿನ ಜಾತಿಗೆ ಸೇರಿದ ಸಸ್ಯ. ಇದಕ್ಕೆ “ತೃಣರಾಜ”
ಎಂದು ಕರೆಯುತ್ತಾರೆ. ತೃಣ ಪಂಚ ಮೂಲ ಅಂದರೆ ಐದು ವಿಧ ಹುಲ್ಲುಗಳ (ಕುಶ, ಕಾಶ,ಶರ,ಕಬ್ಬು,ದರ್ಬೆ) ವಿಶೇಷ ಸಂಯೋಜನೆ ಹಲವಾರು ತೊಂದರೆಗಳನ್ನು ನಿವಾರಿಸುತ್ತದೆ.
ಬಿಳಿ ಬಣ್ಣದ ಕಬ್ಬು ಶ್ರೇಷ್ಠ. ಕಬ್ಬಿನ ರಸವನ್ನು ಮಧ್ಯಾಹ್ನದ ನಂತರ ಸೇವನೆ ಮಾಡಿದರೆ ಉತ್ತಮ ರಾತ್ರಿ ಒಳ್ಳೆಯದಲ್ಲ. ಇದು ಪಿತ್ತವನ್ನು ಕಡಿಮೆಮಾಡಿದಂತೆ ಹೆಚ್ಚು ಉಪಯೋಗ ಮಾಡಿದರೆ ಕಫವನ್ನು ಜಾಸ್ತಿ ಮಾಡುತ್ತದೆ. ರಸ್ತೆ ಬದಿಯ ಕಬ್ಬಿನ ಜ್ಯೂಸ್ ತಯಾರಿಸುವವರು ಸರಿಯಾಗಿ ಸಿಪ್ಪೆ ತೆಗೆಯದಿದ್ದರೆ, ಜ್ಯೂಸ್ ಮಾಡುವ ಯಂತ್ರ ನೊಣಗಳಿಂದ ಕೂಡಿದ್ದರೆ ಅಂತಹ ಜ್ಯೂಸ್ ತೊಂದರೆ ಉಂಟು ಮಾಡೀತು. ಕಬ್ಬನ್ನು ಮನೆಗೆ ತಂದು ಸಿಪ್ಪೆ ತೆಗೆದು ತುಂಡಿರಿಸಿ ಜಗಿದು ತಿಂದರೆ ಉತ್ತಮ. ಇದರ ನಿತ್ಯ ಸೇವನೆಯಿಂದ ಉರಿಮೂತ್ರ ಕಡಿಮೆಯಾಗುವುದು, ರಕ್ತ ವೃದ್ಧಿಸುವುದು, ನಾರಿನಾಂಶ ಅಧಿಕ ಇರುವುದರಿಂದ ಮಲಬದ್ಧತೆ ನಿವಾರಣೆಯಾಗುವುದು. ಇದರ ಬೇರಿನ ಕಷಾಯ ೫೦ಮಿಲಿ ೭ ದಿನ ಕುಡಿಯುವುದರಿಂದ ಕರುಳಿನ ಹುಳದ ಬಾಧೆ ಕಡಿಮೆಯಾಗುವುದು.
ಜಾಂಡೀಸ್:
ಜಾಂಡೀಸಿನಲ್ಲಿ ಪ್ರೋಟೀನ್ ನಾಶವಾಗಿ ಬಿಲುರುಬಿನ್ ರಕ್ತದಲ್ಲಿ ಅಧಿಕ ಕಂಡುಬರುತ್ತದೆ. ಕಬ್ಬಿನ ರಸ ನಾಶವಾದ ಪ್ರೊಟೀನ್‌ನನ್ನೂ ಭರ್ತಿಮಾಡಲು ಸಹಾಯ ಮಾಡುವುದು. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣ ಲಿವರ್ ಇನ್‌ಫೆಕ್ಷನ್ ಕಡಿಮೆ ಮಾಡಿ ಜಾಂಡೀಸ್ ಗುಣವಾಗಲು ಸಹಾಯ ಮಾಡುವುದು. ಆದರೆ ಇದುವೇ ಔಷಧಿಯಲ್ಲ.
ಮೂತ್ರ ಉಂಟುಮಾಡುವುದು:
ನೀರು ಕುಡಿದರೂ ಮೂತ್ರ ಉಂಟಾಗುತ್ತದೆ. ಆದರೆ ಕಬ್ಬಿನ ರಸಕ್ಕೆ ಮೂತ್ರವನ್ನು ಅಧಿಕ ಉತ್ಪತ್ತಿ ಮಾಡುವಂತೆ ಕಿಡ್ನಿಯನ್ನು ಪ್ರೇರೇಪಿಸುವ ಗುಣ ಇದೆ.
ಜೀರ್ಣ ಕ್ರಿಯೆ:
ಇದರಲ್ಲಿ ಇರುವ ಅಧಿಕ ಪೊಟಾಸಿಯಂ ಹೊಟ್ಟೆಯ ಠಿಊ ಪ್ರಮಾಣವನ್ನು ಸರಿಮಾಡುವ ಮೂಲಕ ಜೀರ್ಣಕ್ರಿಯೆ ವೃದ್ಧಿಸುವುದು. ನಾರಿನ ಅಂಶ ಇರುವುದರಿಂದ ಜೀರ್ಣಾಂಗ ಶುದ್ಧಿ ಮಾಡುವುದ.
ಚರ್ಮದ ರಕ್ಷಣೆ:
ಇದರಲ್ಲಿ ಇರುವ ಗ್ಲೆöÊಕೋಲಿಕ್ಆ ಸಿಡ್ ಚರ್ಮಕ್ಕೆ ಸೌಂರ‍್ಯವನ್ನು ನೀಡುವುದು. ಇದರಲ್ಲಿರುವ Vit C ವ್ಯಾಧಿ ಕ್ಷಮತೆ ವೃಧ್ಧಿಸಿದರೆ ಕಬ್ಬಿಣದ ಅಂಶ ಇರುವುದರಿಂದ ಗರ್ಭಿಣಿ ಸ್ತ್ರೀಯರಿಗೂ ಉತ್ತಮ ಪಾನೀಯ. ಈ ಎಲ್ಲಾ ಪರಿಣಾಮ ೧-೨ ದಿನ ಕಬ್ಬು ತಿನ್ನುವುದರಿಂದ ಅಥವಾ ಜ್ಯೂಸ್ ಕುಡಿಯುವುದರಿಂದ ಆಗದು. ಮಿತ ಪ್ರಮಾಣದಲ್ಲಿ ದಿನಕ್ಕೆ ೨೦೦ರಿಂದ ೩೦೦ ಮಿಲಿ ನಿತ್ಯ ಸೇವಿಸಿದರೆ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಕಬ್ಬನ್ನು ಉಪಯೋಗಿಸಿ ಕರಿಂಬಿರುAಬಾದಿ ಕಷಾಯ(ಜಾಂಡೀಸ್, ರಕ್ತಹೀನತೆ) ಬಲಾಜೀರಕಾದಿ ಕಷಾಯ (ದೀರ್ಘಕಾಲದ ಕಫಕೆಮ್ಮು) ತೃಣ ಪಂಚ ಮೂಲ ಕಷಾಯ (ಕಾಲಿನಲ್ಲಿ ನೀರು) ಪರೂಷಕಾದಿಕಷಾಯ (ನಿತ್ರಾಣ) ಬಲಾತೈಲ(ವಾತರೋಗ) ಗಳನ್ನು ತಯಾರಿಸಲಾಗುತ್ತದೆ.
ಡಾ| ಹರಿಕೃಷ್ಣ ಪಾಣಾಜೆ