Scientific name: Piper nigrum
25ರಿಂದ 30 ವರ್ಷ ಬದುಕುವ ಹೃದಯಾಕಾರದ ಎಲೆಗಳನ್ನು ಹೊಂದಿದ ಬಳ್ಳಿ. ನೂರು ವರ್ಷ ಬದುಕುಳಿದ ಬಳ್ಳಿಯ ಉಲ್ಲೇಖವೂ ಇದೆ. ತೆಂಗಿನ ಮರ ಅಡಿಕೆ ಮರ ಅಥವಾ ಇನ್ಯಾವುದೇ ಮರಕ್ಕೆ ಏರಿ ಬೆಳೆಯುತ್ತದೆ. ಕಾಪಿ ತೋಟಗಳಲ್ಲಿ ಸಿಮೆಂಟ್ ಕಂಬಗಳಲ್ಲಿ ಬೆಳೆಯುತ್ತüದೆ. ಮೂರು ಎಸಳಿನ ಬಿಳಿ ಹೂಗಳು 5-6 ಸೆಂ. ಮೀ ಉದ್ದದ ಬಿಳಲಿನಲ್ಲಿ ಪುಷ್ಪ ಪಾತ್ರೆಯ ಒಳಗಿಂದ ಹೊರಕ್ಕೆ ಮುಖ ತೂರಿಸಿದಂತೆ ಕಂಡುಬರುತ್ತದೆ. ಹಸಿರು ವರ್ಣದ ಬೀಜ ನಂತರ ಕೆಂಪಾಗಿ ಒಣಗುವಾಗ ಕಪ್ಪಾಗುತ್ತದೆ. ಹಣ್ಣಾದ ಬೀಜದ ಕೆಂಪಾದ ಹೊರ ಸಿಪ್ಪೆಯನ್ನು ತೆಗೆದು ಒಣಗಿಸಿದರೆ ಬಿಳಿ ಕರಿಮೆಣಸಾಗುತ್ತದೆ(white pepper).
ಒಳ್ಳೆ ಮೆಣಸಿನ ವಿಶೇಷತೆ ಎಂದರೆ ಅದು ವರ್ಷಾನುಗಟ್ಟಲೆ ಹಾಳಾಗದೆ ಉಳಿಯುತ್ತದೆ. ಕೆಲವು ಆಹಾರ ಪದಾರ್ಥಗಳನ್ನು ಹಾಳಾಗಲೂ ಬಿಡದು. ಮುಡಿಪು ಪೂಜೆಮಾಡಿ ವೆಂಕಟರಮಣ ದೇವರಿಗೆ ಕಾಣಿಕೆ ಸಮರ್ಪಿಸುವಾಗ ಅದರೊಂದಿಗೆ ಸ್ವಲ್ಪ ಒಳ್ಳೆಮೆಣಸನ್ನು ಸೇರಿಸುತೇವೆ. ಮುಡಿಪಿನ ಒಳಗೆ ಇರುವ ಹಣವನ್ನು ಎಷ್ಟೋ ವರ್ಷಗಳ ನಂತರ ತಿರುಪತಿಗೆ ಸಮರ್ಪಿಸುವುದು. ಅಷ್ಠೂ ಸಮಯದವರೆಗೆ ಕ್ರಿಮಿಗಳಿಂದ ಹಣ ನಾಶವಾಗದಂತೆ ಒಳ್ಳೆ ಮೆಣಸು ತಡೆಯುತ್ತದೆ. ಇದು ಭಾರತ, ಶ್ರೀಲಂಕ, ಇಂಡೋನೇಶಿಯಾ, ಮಲೇಶಿಯಾದಂತಹ ಉಷ್ಣ ಹಾಗೂ ತಂಪು ಪ್ರದೇಶದಲ್ಲಿ ಬೆಳೆಯುತ್ತದೆ. ಉತ್ತಮ ವಾಣಿಜ್ಯ ಬೆಳೆಯಾದ ಇದನ್ನು bಟಚಿಛಿಞ goಟಜ, ಸಂಬಾರ ಪದಾರ್ಥಗಳ ರಾಜ (King of spices) ಎಂದು ಕರೆಯುತ್ತಾರೆ.
ಹೆಚ್ಚು ಸೇವನೆ ಮಾಡಿದರೆ ಶರೀರದಲ್ಲಿ ಉಷ್ಣಗುಣ (ವ್ಯತಿರಿಕ್ತ ಪರಿಣಾಮ) ಲಕ್ಷಣಗಳು ಕಂಡುಬರುತ್ತವೆ. ಆದರೆ ಯೋಗ್ಯ ಪ್ರಮಾಣದಲ್ಲಿ ಸೇವಿಸಿದರೆ ಶೀತ, ಕೆಮ್ಮು, ಗಂಟಲಿನ ತೊಂದರೆ, ಜ್ವರ, ಅಜೀರ್ಣ, ನೋವು ನಿವಾರಣೆ ಮಾಡುವುದು.
ಜ್ವರ:
ಶೀತ ಸಹಿತ ಬರುವ ಜ್ವರ (viಡಿಚಿಟ ಜಿeveಡಿ)ದಲ್ಲಿ ಒಳ್ಳೆಮೆಣಸು ಕಷಾಯ ಮಾಡಿ ಸ್ವಲ್ಪ ಬೆಲ್ಲ ಸೇರಿಸಿ 1-2 ಸಲ ಕುಡಿದರೆ ಕಡಿಮೆಯಾಗುವುದು.
ಕೆಮ್ಮು:
ಒಳ್ಳೆಮೆಣಸು ಪುಡಿಯನ್ನು ತುಪ್ಪ, ಜೇನು, ಕಲ್ಲುಸಕ್ಕರೆಯೊಂದಿಗೆ ದಿನಕ್ಕೆ ಮೂರು ಸಲ ಸೇವಿಸಿದರೆ ಎಲ್ಲಾ ವಿಧದ ಕೆಮ್ಮುಗಳು ಕಡಿಮೆಯಾಗುವುದು.
ನೋವು:
ಸಂದುಗಳಲ್ಲಿ, ಮಾಂಸಖಂಡಗಳಲ್ಲಿ ಬರುವ ನೋವಿಗೆ ಇದರ ಪುಡಿಯನ್ನು ಲೋಳೆಸರ ರಸದಲ್ಲಿ ಮಿಶ್ರಮಾಡಿ ಲೇಪಿಸಿದರೆ ಕಡಿಮೆಯಾಗುವುದು.
ಮಕ್ಕಳ ನಿಶ್ಯಕ್ತಿ:
ಮಕ್ಕಳು ಆಹಾರ ಸೇವಿಸದೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದರೆ ಅಂತಹ ಮಕ್ಕಳಿಗೆ ಹಸಿವು ಇರುವುದಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಬಿಸಿ ಹಾಲಿಗೆ ಒಂದು ಚಿಟಿಕೆ ಒಳ್ಳೆಮೆಣಸು ಪುಡಿ ಹಾಕಿ 30ರಿಂದ40 ದಿನ ಕುಡಿಸುವುದರಿಂದ ಜೀರ್ಣಕ್ರಿಯೆ ವೃದ್ದಿಯಾಗುವುದು, ನಿಶ್ಯಕ್ತಿ ಕಡಿಮೆಯಾಗುವುದು. ಸ್ಥೂಲಶರೀರ ಇರುವವರು ಸಣ್ಣ ಪ್ರಮಾಣದಲ್ಲಿ ನಿತ್ಯ ಸೇವಿಸಿದರೆ ಶರೀರದಲ್ಲಿರುವ ವಿಷಕಾರಕ ವಸ್ತುಗಳನ್ನು (Detoxification) ಹೊರ ಹಾಕುವುದು. ಸ್ವಲ್ಪ ಮಟ್ಟಿಗೆ ಬೊಜ್ಜು ಕರಗುವುದು ಸಿಗರೇಟು ಛಟ ಬಿಡಲು ಒಳ್ಳೆಮೆಣಸಿನಲ್ಲಿರುವ ತೈಲದ (Essential oil) ಒಂದು ಗಂಟೆಯಷ್ಠು ಕಾಲ ಸೇವಿಸಿದರೆ ಸಿಗರೇಟ್ ಸೇವನೆಯನ್ನು ನಿಲ್ಲಿಸುತ್ತಾರೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿಸಿದೆ.
ಅಜೀರ್ಣ ಹೊಟ್ಟೆ ವಿಕಾರ ಇರುವಾಗ ಮಜ್ಜಿಗೆಗೆ ಕಾಲು ಚಮಚ ಒಳ್ಳೆಮೆಣಸು ಪುಡಿ ಉಪ್ಪು ಸೇರಿಸಿ ಒಂದು ವಾರ ಕುಡಿಯಬೇಕು. ಕೆಮ್ಮು ದಮ್ಮುಗಳಿಗೆ ಆಯುರ್ವೇದದ ಹಲವಾರು ತಯಾರಿಕೆಗಳಲ್ಲಿ ಪ್ರಮುಖ ದ್ರವ್ಯವಾಗಿ ಇದನ್ನು ಉಪಯೋಗಿಸುತ್ತಾರೆ. ಇದರ ಸೇವನಾ ಪ್ರಮಾಣ ಅಧಿಕವಾದರೆ ಬಾಯಿ ಹುಣ್ಣು, ಹೊಟ್ಟೆ ಉರಿಯ ಅನುಭವವಾಗುವುದು. ಆದ ಕಾರಣ ಆಯಾ ಶರೀರ ಪ್ರಕೃತಿಗಳಿಗೆ ಅನುಸಾರ ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು.
ಡಾ| ಹರಿಕೃಷ್ಣ ಪಾಣಾಜೆ