Skip links

ಒಂದೆಲಗ (ತಿಮರೆ)

Scientific name: Centella asiatica

ಇದಕ್ಕೆ ಬ್ರಾಹ್ಮಿ, ಮಂಡೂಕ ಪರ್ನಿ ಎಂಬ ಹೆಸರೂ ಇದೆ. ಇದರ ಎಲೆ ಕಪ್ಪೆಯ ಕಾಲನ್ನು ಹೋಲುತ್ತದೆ. ಆದ ಕಾರಣ ಮಂಡೂಕ ಪರ್ನಿ ಎಂಬ ಅನ್ವರ್ಥ ನಾಮ. ಬಳ್ಳಿಯಂತೆ ನೆಲದ ಮೇಲೆ ಕವಲೊಡೆದು ಹರಡುತ್ತದೆ. ಇದರ ಬೇರು ಅತೀ ಆಳಕ್ಕೆ ಹೋಗುವುದರಿಂದ 1-2 ವರ್ಷ ಆಯುಷ್ಯ ಇರುವ ಗಿಡ ಹೂ ಕಾಯಿಯೊಂದಿಗೆ ನಾಶವಾದರೂ ಮಳೆಗಾಲದಲ್ಲಿ

ಪುನ:

ಚಿಗುರೊಡೆದು ಪ್ರತ್ಯಕ್ಷವಾಗುತ್ತದೆ. ಸಣ್ಣ ಬಳ್ಳಿ,ಕೆಂಪುಹೂಗಳು ಜೋಡಿ ಬೀಜಗಳಂತೆ ಸಣ್ಣ ಬೀಜಗಳು  ಮೇ- ನವಂಬರ್ ತಿಂಗಳಲ್ಲಿ ಕಂಡುಬರುತ್ತದೆ. ಭಾರತ, ಶ್ರೀಲಂಕಾ ದೇಶದಲ್ಲಿ ಎಲ್ಲಾ ಕಾಲದಲ್ಲಿಯೂ ನೀರಿದ್ದರೆ ಕಂಡುಬರುವ ಆಹಾರ ಹಾಗೂ ಔಷಧಿಯಾಗಿ ಉಪಯೋಗಿಸಲ್ಪಡುವ ಸಸ್ಯ.

ಎಲೆ ರುಚಿಯಲ್ಲಿ ಕಹಿಯಾದರೂ ಇದರ ಚಟ್ನಿ, ತಂಬ್ಳಿ ಬಹಳ ರುಚಿಕರ.ಆಂದ್ರದಲ್ಲಿ ಇದನ್ನು ಸಾಂಬಾರ್ಮಾ ಡುತ್ತಾರೆ. ಇದರ ಸಂಗ್ರಹವನ್ನು ಹಗಲೇ ಮಾಡಬೇಕು. ರಾತ್ರಿಕಾಲದಲ್ಲಿ ಎಲೆಗಳು ಕಾರ್ಬನ್ ಡೈ ಆಕ್ಯ್ಸಡ್ಬಿ ಡುಗಡೆ ಮಾಡುತ್ತದೆ. ಆದ ಕಾರಣ ರಾತ್ರಿ ಇದರ ಸಂಗ್ರಹ ಒಳ್ಳೆಯದಲ್ಲ. ಆದ ಕಾರಣ ಆಹಾರ ತಯಾರಿಕೆಗಳನ್ನು ರಾತ್ರಿ ಸೇವಿಸಬಾರದು ಎನ್ನುತ್ತಾರೆ.  

ಮೇದ್ಯ ರಸಾಯನ :

ಮೆದುಳಿಗೆ ಉತ್ತಮ ಟಾನಿಕ್ . ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳಿಗೆ ಇದನ್ನು ಬೆಳಗ್ಗೆ ಹಾಲಲ್ಲಿ ಅಥವಾ ಮಜ್ಜಿಗೆಯಲ್ಲಿ ಅರೆದು ಕುಡಿಸುತ್ತಾರೆ. ನೆನಪುಶಕ್ತಿ ವರ್ದಕ ಎಂದು ನಾವು ಕಂಡುಕೊಂಡಿದ್ದೇವೆ. ಆಯುರ್ವೇದ ಗ್ರಂಥಗಳು ಇದನ್ನು ಬಹಳಷ್ಟು ಉಲ್ಲೇಖಿಸಿದೆ. ಕರ್ನಾಟಕದ Trans-Disciplinary University ಇದರ ಬಗ್ಗೆ ಅದ್ಯಯನ ಮಾಡಿ ಒಂದೆಲಗ ಸೇವನೆಯಿಂದ ಒಂದು ವಿಚಾರದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ , ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ, ಪುನಃ ಅದನ್ನು ಜ್ಞಾಪಿಸಿಕೊಳ್ಳುವ ಶಕ್ತಿ ವೃದ್ಧಿಯಾಗುತ್ತದೆ,ಅಂದರೆ ಜ್ಞಾನ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಸಂಶೋದಿಸಿದ್ದಾರೆ. ಆದಕಾರಣ ಶೈಕ್ಷಣಿಕವಾಗಿ ಉನ್ನತಿ ಪಡೆಯಲು ಇದರ ಸೇವನೆ ಸಹಕಾರಿ ಆಗಬಹುದು .

ಡೊಪಮಿನ್ ಎಂಬ ರಾಸಾಯನಿಕ ನಮ್ಮನ್ನು ನಿತ್ಯ ಉಲ್ಲಸಿತಗೊಳಿಸಲು ಮೆದುಳಿನಲ್ಲಿ ಸ್ರಾವವಾಗುತ್ತದೆ. ಇದನ್ನು ಸ್ರಾವಮಾಡುವ ನರಗಳು ಕ್ಷಯಹೊಂದಿದರೆ (Degeneration of Dopaminergic Neurons) ಸ್ರಾವ ಕಡಿಮೆಯಾಗಿ ನೆನಪು ಶಕ್ತಿ ಕಡಿಮೆಯಾಗುವುದು. ನಿಶ್ಯಕ್ತಿ, ಮನೋವ್ಯಾಕಲತೆ ಉಂಟಾಗುತ್ತದೆ. ಒಂದೆಲಗದ ಸತ್ವ (Extract) ನೆನಪು ಶಕ್ತಿ ವರ್ದಕವಾಗಿ (Nootropic) ಕೆಲಸ ಮಾಡುತ್ತದೆ ಎಂದು Ph.ಆ ಅದ್ಯಯನ ಹೇಳಿದೆ.

ಅಜೀರ್ಣ: 

ಇದು ಜೀರ್ಣ ಕ್ರಿಯೆ ಉಂಟುಮಾಡುವುದರಿಂದ ಆಗಾಗ ಇದರ ಚಟ್ನಿ,ತಂಬ್ಳಿ ಮಾಡಿ ಸೇವಿಸಬೇಕು.

ಚರ್ಮರೋಗ :

ಸಣ್ಣ ಸಣ್ಣ ತುರಿಕೆ,ಕಜ್ಜಿಗಳು ಚರ್ಮದ ಮೇಲೆ ಇರುವಾಗ ಇದನ್ನು ಒಂದು ವಾರ ಅರೆದು ಚರ್ಮದ ಮೇಲೆ ಹಚ್ಚಬೇಕು. ಚರ್ಮದ ರಕ್ತ ಸಂಚಾರ (Peripheral circulation) ಹೆಚ್ಚಿಸುವುದರಿಂದ ಇದನ್ನು ಗಾಯವನ್ನು ಬಿಟ್ಟು ಉಳಿದ ಭಾಗಕ್ಕೆ ಹಚ್ಚುವುದು ಹಾಗೂ ಸೇವಿಸುವುದರಿಂದ ಪ್ರಯೋಜನವಾಗುವುದು.

ಅತಿನಿದ್ರೆ:  

ಜಡತೆ , ಅತಿಯಾದ ನಿದ್ರೆ ಇರುವವರು ಇದರ 4-5 ಗಿಡವನ್ನು ಮಜ್ಜಿಗೆಯಲ್ಲಿ ಅರೆದು 1/2 ಚಮಚ ಜೀರಿಗೆ ಅಥವಾ ಶುಂಠಿ ಪುಡಿ ಸೇರಿಸಿ 2-3 ವಾರ ಸೇವಿಸಬೇಕು.  

ಕಾಲು ಮರಕಟ್ಟುವುದು:

ಹಲವಾರು ಕಾರಣಗಳಿಂದ ಕಾಲು ಇರುವೆ ಹರಿದಂತೆ, ಮರಕಟ್ಟಿದಂತೆ ಅನುಭವ ಆಗುತ್ತದೆ. ಒಂದು ಮುಷ್ಠಿ ಒಂದೆಲಗವನ್ನು ಎಳ್ಳು ಅಥವಾ ಮಂಜಿಷ್ಠ ಪುಡಿಯೊಂದಿಗೆ ಅರೆದು 2-3 ವಾರ ಹಚ್ಚುವುದರಿಂದ ಗುಣವಾಗುವುದು.

ಅತಿಸೇವನೆ :  

ಇದು ಒಳ್ಳೆಯದೆಂದು ಪ್ರತಿದಿನ ಅತಿಯಾಗಿ ಸೇವಿಸಿದರೆ ಆಗಾಗ ಶೀತ, ತಲೆನೋವು ಉಂಟಾಗುವ ಸಾಧ್ಯತೆ ಇದೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.