Skip links

ಪುನರ್ಪುಳಿ

Scientific Name: Garcinia indica  

ಸಂಸ್ಕøತದಲ್ಲಿ ವೃಕ್ಷಾಮ್ಲ ಎನ್ನುತ್ತಾರೆ. 15 ರಿಂದ 20 ಅಡಿ ನೇರ ಎತ್ತರ ಬೆಳೆಯುವ ಮರ. ಸದಾ ಕಡು ಹಸಿರಾಗಿ ಕಂಗೊಳಿಸುವ ದಟ್ಟವಾಗಿ ಹರಡಿರುವ ಎಲೆಗಳು. ಕಾಂಡದಿಂದ ಹಳದಿ ಬಣ್ಣದ ರಸ (ಮಯಣ) ಸೂಸುತ್ತದೆ. ಸ್ತ್ರೀ ಹಾಗೂ ಪುರುಷ ಹೂಗಳು ಬೇರೆ ಬೇರೆಯಾಗಿ ಮರದಲ್ಲಿ ಕಂಡು ಬರುತ್ತದೆ. ಗೋಲಾಕಾರದ ಕೆಂಪು ಹಣ್ಣುಗಳು ಮರದಲ್ಲಿ ತುಂಬಾ ತುಂಬಿಕೊಂಡಿರುತ್ತದೆ. ದೂರದಿಂದ ನೋಡುವಾಗ ಊಟಿ ಎಪ್ಲ್‍ಗಳು ಮರದಲ್ಲಿ ಇರುವಂತೆ ಕಾಣುತ್ತದೆ.

ಹಣ್ಣಿನ ಬೀಜದಿಂದ ತುಪ್ಪ(Kokum Butter) ದಂತಹ ಗಟ್ಟಿ ದ್ರವ ಸಂಗ್ರಹಿಸಬಹುದು. ಚೆನ್ನಾಗಿ ಹಣ್ಣಾಗಿದ್ದರೆ ಬೀಜದ ಸುತ್ತ ಬಿಳಿಯಾದ ದಪ್ಪ ಪದರ ಆವರಿಸಿರುತ್ತದೆ. ಇದು ತಿನ್ನಲು ಸಿಹಿಯಾಗಿದೆ. ಹಣ್ಣಿನ  ಸಿಪ್ಪೆ ಒಣಗಿದರೆ  ಅಡಿಗೆ ಮನೆಯಿಂದ ಹಿಡಿದು ಔಷಧಿ ಅಂಗಡಿಯವರೂ ಬೇಡಿಕೆ ಇಡುವ ಆಹಾರ ಹಾಗೂ ಔಷಧಿ ಗುಣುವುಳ್ಳ ವಸ್ತುವಾಗಿದೆ.

ಸುಟ್ಟಗಾಯ :

ಇದರ ಬೀಜವನ್ನು  ಜಜ್ಜಿ ಪುಡಿಮಾಡಿ ನೀರಲ್ಲಿ ಕುದಿಸಿದಾಗ ಸಿಗುವ ದಪ್ಪ ತುಪ್ಪದಂತಿರುವ ವಸ್ತು ಸುಟ್ಟಗಾಯಗಳನ್ನು ಬೇಗನೆ ಗುಣ ಮಾಡುವುದಲ್ಲದೆ ಕಲೆಗಳು ಉಳಿಯದಂತೆ ಮಾಡುವುದು. ಇದನ್ನು ಹೊಟ್ಟೆಗೂ ಸೇವಿಸಬಹುದು. ಹೊಟ್ಟೆ ಉರಿ, ಬಾಯಿಹುಣ್ಣುಗಳನ್ನೂ ಕಡಿಮೆಮಾಡುವುದು.

ಅತಿಸಾರ (Diarrhea/Loose motion):

ಇದರ ಕಾಂಡದಿಂದ ಹೊರಬರುವ ಹಳದಿ ಬಣ್ಣದ ಮಯಣದಂತಿರುವ ದ್ರವ ತೀಕ್ಷ್ಣವಾಗಿದ್ದು ಪಿತ್ತವನ್ನು ಜಾಸ್ತಿ ಮಾಡುವುದು ಆದರೆ ಅತಿಸಾರವನ್ನು ಕಡಿಮೆಮಾಡುವುದು.

ಪುನರ್ಪುಳಿ ಸಿಪ್ಪೆ:

ಯಕೃತನ್ನು ಉತ್ತೇಜಿಸಿ ಹಸಿವಾಗಲು, ಜೀರ್ಣ ಕ್ರಿಯೆ ಉತ್ತಮವಾಗಲು, ಉರಿ,ದಾಹ ಕಡಿಮೆ ಮಾಡಲು, ಶರೀರವನ್ನು ಚುರುಕುಗೊಳಿಸಲು ಸಿಪ್ಪೆ ಜ್ಯೂಸ್ ಸಹಕಾರಿಯಾಗಿದೆ. ಒಣ ಸಿಪ್ಪೆಯನ್ನು ಚೆನ್ನಾಗಿ ಕುದಿಸಿ ಸೋಸಿ ಬೆಲ್ಲ ಸೇರಿಸಿ  ಕುಡಿದರೂ ಪ್ರಯೊಜನವಾಗುವುದು.  

ಪಿತ್ತಶಾಮಕ (ಪಿತ್ತ ಕಡಿಮೆಮಾಡುವುದು):

ಪುನರ್ಪುಳಿ ಸಿಪ್ಪೆ ಒಂದು ತುಂಡು (3-5 ಗ್ರಾಂ) ಒಂದು ಗ್ಲಾಸ್ ನೀರಿನಲ್ಲಿ ಕುದಿಸಿ ಸೋಸಿ ಅರ್ಧ ಚಮಚ ಕೊತ್ತಂಬರಿ ಪುಡಿ ಸೇರಿಸಿ ಕುಡಿದರೆ ತಲೆ ತಿರುಗುವುದು, ಹೊಟ್ಟೆ ಉರಿ ಕಡಿಮೆಯಾಗುವುದು.

ಬೊಜ್ಜು (Obesity):

ಶರೀರದ ಬೊಜ್ಜು ಕರಗಲು ಅಥವಾ ಶರೀರದ ತೂಕ ಕಡಿಮೆಯಾಗಲು Hydroxycitric acid ಎಂಬ ರಾಸಾಯನಿಕ ವಸ್ತು ಬೇಕು ಎಂದು ವಿಜ್ಞಾನ ಹೇಳುತ್ತದೆ. ಇದೇ ವಸ್ತು ಪುನರ್ಪುಳಿಯ ಸಿಪ್ಪೆಯಲ್ಲಿ ಇರುವ ಕಾರಣ ಇದರ ಸೇವನೆಯಿಂದ ಶರೀರದ ಅತಿಭಾರವನ್ನು ಇಳಿಸಬಹುದು . ಬೊಜ್ಜು ನಿವಾರಣೆಯಾಗುವ ಮೂಲಕ ಹೃದ್ರೋಗ ಸಂಬಂದಿಸಿದ ಕಾಯಿಲೆಗಳು, ಮಧುಮೇಹ, ಲಿವರ್ ಗೆ ಆಗುವ ತೊಂದರೆಯನ್ನು ನಿವಾರಿಸುವುದು.

 ತಿನ್ನುವ ಆಹಾರ ಪದಾರ್ಥಗಳಲ್ಲಿ ಶರೀರಕ್ಕೆ ಹಾನಿಮಾಡುವ ವಸ್ತುಗಳು(Oxidants) ಇರುತ್ತದೆ. ಇದು ಶರೀರದಲ್ಲಿ ಇರುವ ಡಿ.ಎನ್.ಎ, ಪ್ರೋಟೀನ್ಗಳನ್ನುಹಾಳುಮಾಡುತ್ತದೆ. ಇದರಿಂದ ಕ್ಯಾನ್ಸ್‍ರ್, ಹೃದ್ರೋಗಗಳು ಉಂಟಾಗುತ್ತದೆ. ಸಿಪ್ಪೆಯಲ್ಲಿ ಇರುವ ಪ್ರತಿವಿಷಕಾರಕ ಗುಣ (Antioxidants) ಇಂತಹ ತೊಂದರೆಗಳನ್ನು  ನಿವಾರಿಸುತ್ತದೆ.

ಡಾ| ಹರಿಕೃಷ್ಣ ಪಾಣಾಜೆ

                                                                   

Leave a comment

This website uses cookies to improve your web experience.