Skip links

ತೆಂಗು

Scientific Name: Cocos nucifera

ಕೊಂಬೆಗಳಿಲ್ಲದೆ ೬೦-೭೦ ಅಡಿ ನೇರ ಎತ್ತರ ಬೆಳೆಯುವ ಮರ. ಮರದ ಮೇಲ್ಭಾಗದಲ್ಲಿ ವೃತ್ತಾಕಾರದಲ್ಲಿ ಮಡಲು ಹರಡಿರುತ್ತದೆ.ಗಾತ್ರದಲ್ಲಿ ದೊಡ್ಡದಾದ ಫಲ. ನಾರುಗಳಿಂದ ಆವೃತವಾದ ಚಿಪ್ಪಿಯ ಒಳಗೆ ಬಿಳಿಯಾದ ತಿನ್ನಲು ಯೋಗ್ಯ ವಸ್ತು ಅದರೊಳಗೆ ಸಿಹಿಯಾದ ನೀರು. ಪ್ರಕೃತಿಯ ಅದ್ಭುತ ಸೃಷ್ಟಿ. ನೀರುಣಿಸಿದರೆ ಪ್ರತಿಪಲವಾಗಿ ತಿನ್ನಲು ಯೋಗ್ಯ ತಿರುಳಿನೊಂದಿಗೆ ಕುಡಿಯಲು ಯೋಗ್ಯ ಅಮೃತ ಸಮಾನ  ನೀರನ್ನು ಕೊಡುವ ಮರ. ಈ ಮರದ ಎಲ್ಲಾ ಭಾಗಗಳೂ ಉಪಯುಕ್ತವಾಗಿರುವುದರಿಂದ “ಕಲ್ಪವೃಕ್ಷ” ಎಂದೂ ಕರೆಯುತ್ತಾರೆ.  

ಇದರ ಮಡಲು, ಕಾಂಡ, ಬೇರು, ಹೂ, ಗೆರಟೆ, ನೀರು, ಕಾಯಿ ಎಲ್ಲವೂ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ
ವರ್ಜ್ಯವಾದದ್ದು ಎನೂ ಇಲ್ಲದ ಕಾರಣ ದೇವಕರ‍್ಯಗಳಿಗೆ ಅಧಿಕ ಉಪಯೋಗಿಸುವುದರಿಂದ ತೆಂಗಿನ ಮರವನ್ನು ಪೂಜನೀಯವಾಗಿ ಕಾಣುತ್ತೇವೆ.

ಎಳನೀರು:

ಪರಿಶುದ್ಧವಾದ ಕುಡಿಯಲು ಯೋಗ್ಯ ಪಾನೀಯ. ಇದರಲ್ಲಿ ಸೋಡಿಯಂ, ಪೋಟಾಷಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಅರ‍್ನ್, ಕಾಪರ್,ಫಾಸ್ಪರಸ್, ವಿಟಮಿನ್ C & B ಮೊದಲಾದ ಮಿನರಲ್ಸ್ & ಇಲೆಕ್ಟ್ರೋಲೈಟ್ಸ್
ಇರುವುದರಿಂದ ಕುಡಿದ ಕೂಡಲೇ ಹುರುಪು ಉಂಟುಮಾಡುತ್ತದೆ. ಮಾರುಕಟ್ಟೆಯಲ್ಲಿ ಇಷ್ಟೊಂದು ಪರಿಶುದ್ಧ ದಾಹ ನಿವಾರಕ ಇನ್ನೊಂದು ಇಲ್ಲ. ಬೆಳೆದ ತೆಂಗಿನ ಕಾಯಿ ನೀರನ್ನು ಕುದಿಸಿ ಕುಳಮಾಡಿಟ್ಟುಕೊಂಡು ಗಾಯಗಳನ್ನು ಒಣಗಿಸಲು ಉಪಯೋಗಿಸುತ್ತಾರೆ. ಇದರೊಂದಿಗೆ ಇನ್ನಿತರ ಗಿಡಮೂಲಿಕೆ ಸೇರಿಸಿ ಎಳನೀರ್ ಕೊಯಂಬು ಎಂಬ ಕಣ್ಣಿನ ಡ್ರಾಪ್ಸ್ ತಯಾರಿಸುತ್ತಾರೆ. ಸಣ್ಣ ಸಣ್ಣ ಮೂತ್ರದ ಕಲ್ಲುಗಳಿರುವಾಗ ೨-೩ ಎಳನೀರನ್ನು ೨-೩ ದಿನ ಕುಡಿಯುವುದರಿಂದ ಹೊರಬರುವುದು.

ತೆಂಗಿನ ಹೂ:

ಸ್ತ್ರೀಯರ ಅತಿಯಾದ ಮಾಸಿಕ ಸ್ರಾವದಲ್ಲಿ ಹೂವನ್ನು ಹಾಲಿನೊಂದಿಗೆ ಅರೆದು ದಿನಕ್ಕೆರಡು ಸಲ ೩ ದಿನ ಸೇವನೆಯಿಂದ ಕಡಿಮೆಯಾಗುವುದು. ಹೂವನ್ನು ಉಪಯೋಗಿಸಿ “ತೆಂಗಿನ್ ಪುಕ್ಕಳಾದಿ ಲೇಹ್ಯಂ” ತಯಾರಿಸುತ್ತಾರೆ. ಇದು ಬಾಣಂತಿಯರಿಗೆ ಶ್ರೇಷ್ಟ ಟಾನಿಕ್ ಹಾಗು ಅತಿಯಾದ ಋತು ಸ್ರಾವವನ್ನು ಕಡಿಮೆಮಾಡುವುದು.

ಬೇರು:

ಗರ್ಭಾಶಯದ ಕೆಲವು ತೊಂದರೆಗಳಲ್ಲಿ ಬೇರನ್ನು ಕಷಾಯ ಮಾಡಿ ಉಪಯೋಗಿಸಲಾಗುವುದು.

ಗೆರಟೆ:

ಗಟ್ಟಿಯಾದ ಭಾಗ. ಇದರಲ್ಲಿ ಒಂದು ವಿಧದ ತೈಲವಿದೆ. ವಿಶೇಷ ರೀತಿಯಲ್ಲಿ ಇದರ ಎಣ್ಣೆಯನ್ನು ಸಂಗ್ರಹಿಸಲಾಗುತ್ತದೆ. ಇದರ ಎಣ್ಣೆಯು ಕೆಲವು ಚರ್ಮ ವ್ಯಾಧಿಗಳಲ್ಲಿ ಉಪಯೋಗಿಸಲಾಗುತ್ತದೆ. ಫಂಗಲ್ ಇನ್‌ಫೆಕ್ಷನ್‌ನಲ್ಲಿ ಪರಿಣಾಮಕಾರಿಯಾಗಿದೆ.

ಬೊಂಡದ ಸಿಪ್ಪೆ:

ಡಯಾಬಿಟೀಸ್ ಇಲ್ಲದಿದ್ದರೂ ಕೆಲವರಿಗೆ ಅತಿ ಬಾಯಾರಿಕೆ ಆಗುವುದಿದೆ. ಅವರು ಬೊಂಡದ ಹೊರಸಿಪ್ಪೆಯನ್ನು ಕಷಾಯ ಮಾಡಿ ೩ ದಿನ ಕುಡಿದರೆ ಕಡಿಮೆಯಾಗುವುದು.

ಕಾಯಿ ತಿರುಳು:

ಕೋಸ್ಟಲ್ ಪ್ರದೇಶಗಳಲ್ಲಿ ಅತ್ಯಧಿಕವಾಗಿ ಚಟ್ನಿ, ಸಾಂಬಾರ್, ತಿಂಡಿ ತಿನಿಸುಗಳಲ್ಲಿ ಅತಿಯಾಗಿ ಉಪಯೋಗಿಸುತ್ತಾರೆ. ಸೋಸಿದ ಕಾಯಿ ಹಾಲು ನಿಶ್ಯಕ್ತಿ ನಿವಾರಣೆ ಮಾಡುವುದು. ಹೊಟ್ಟೆ ಒಳಗಿನ ಉರಿ ಕಡಿಮೆಮಾಡುವುದು, ಶಸ್ತ್ರಕ್ರಿಯನಂತರ ಅಧಿಕ ರಕ್ತ ಸ್ರಾವ ಆದವರಿಗೆ ಉತ್ತಮ ಶಕ್ತಿವರ್ಧಕ. ಇದರಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬು, ಫ್ಯಾಟೀ ಆಸಿಡ್, ಪೊಟಾಷಿಯಂ, ಸೋಡಿಯಂ ಇದೆ. ಜೀರ್ಣಕ್ರಿಯೆಯನ್ನು ಸುಗಮ ಮಾಡುವುದು. ಕಾಯಿ ಹಾಲಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಕಡಿಮೆಯಾಗುವುದು. ಒಂದು ಮುಷ್ಠಿ ಕಾಯಿತುರಿಯನ್ನು ಹರಳೆಣ್ಣೆಯಲ್ಲಿ ಮಿಶ್ರ ಮಾಡಿ ದಿನಕ್ಕೆರಡು ಸಲ ೨-೩ ದಿನ ಸೇವಿಸಿದರೆ ಶರೀರದಲ್ಲಿರುವ ಲಾಡಿ ಹುಳು ಹೊರಬರುವುದು.

ಕೊಬ್ಬರಿ :

ಒಣ ಕೆಮ್ಮು ಇರುವಾಗ ಒಣ ಕೊಬ್ಬರಿಯನ್ನು ಬೆಲ್ಲದೊಂದಿಗೆ ಜಗಿದು ನುಂಗಿದರೆ ಕಡಿಮೆಯಾಗುವುದು.

ತೆಂಗಿನೆಣ್ಣೆ:

ಪ್ರಕೃತಿಯಲ್ಲಿ ಸಿಗುವ ಆಹಾರವಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ಶರೀರಕ್ಕೆ ಯಾವುದೇ ಹಾನಿ
ಮಾಡದ ಉತ್ಕೃಷ್ಠವಾದುದು ತೆಂಗಿನೆಣ್ಣೆ. ಆರೋಗ್ಯದಾಯಕ ಆಹಾರ. ಅತೀ ಸಣ್ಣ Fat Molecule ಇರುವುದರಿಂದ ಚರ್ಮದಲ್ಲಿ ಬೇಗನೆ ಹೀರಲ್ಪಡುವುದು. ಲಿವರನ್ನೂ ಉತ್ತೇಜಿಸುವುದು. LDL (Bad cholesterol) ಕಡಿಮೆ
ಮಾಡುವುದು. HDL (Good cholesterol) ಅಧಿಕ ಮಾಡುವುದು. ಅತೀ ಸೇವಿಸಿದರೆ ಹೈ ಕ್ಯಾಲೊರಿಯಿಂದಾಗಿ ತೂಕ ಜಾಸ್ತಿ ಆಗುವುದು.

ತಾಯಿ ಹಾಲು ಮತ್ತು ತೆಂಗಿನೆಣ್ಣೆಯಲ್ಲಿ ಒಂದೇ ವಿಧದ ರಾಸಾಯನಿಕ ಇದೆ. ಅದುವೇ ಸೋಡಿಯಂ ಮೋನೋ ಲಾರಿಕ್ ಆಸಿಡ್. ಇದರಿಂದಾಗಿ ತೆಂಗಿನೆಣ್ಣೆ ಬಾಯಿಯಲ್ಲಿಯೇ ಕರಗಿ ಕೀಟೋನ್‌ಗಳಾಗಿ ಪರಿವರ್ತನೆ ಆಗುತ್ತದೆ. ಮಕ್ಕಳಲ್ಲಿ ಕೊಬ್ಬನ್ನು ಜೀರ್ಣ ಮಾಡುವ ಪ್ಯಾಂಕ್ರಿಯಾಟಿಕ್ ಜ್ಯೂಸ್ ಅಥವಾ ಲೈಪೇಸ್ ಇರುವುದಿಲ್ಲ. ತೆಂಗಿನೆಣ್ಣೆಯಲ್ಲಿರುವ ಮೋನೋಲಾರಿಕ್ ಆಸಿಡ್‌ನಿಂದಾಗಿ ಜೊಲ್ಲು ರಸದಲ್ಲಿ ಇರುವ ಲೈಪೇಸ್‌ನಿಂದಲೇ ಎಣ್ಣೆ ಜೀರ್ಣವಾಗುವುದು. ಮಕ್ಕಳಲ್ಲಿ ಉಳಿದ ಯಾವ ಎಣ್ಣೆಯೂ ಜೀರ್ಣವಾಗುವುದಿಲ್ಲ. ಬೇರೆ ಎಣ್ಣೆಗಳು ಮಕ್ಕಳಿಗೆ ಹಾನಿಕಾರವಾಗಿದೆ.

MCFA (Medium Chain Fatty Acids) ಮತ್ತು Lauric Acid ತೆಂಗಿನೆಣ್ಣೆಯಲ್ಲಿ ಅಧಿಕ ಇರುವುದರಿಂದ ಕೊಬ್ಬಿನ ಅಂಶವನ್ನು Ketones ಪರಿವರ್ತನೆಮಾಡಿ ಮೆದುಳನ್ನು ಚುರುಕಾಗಿ ಇರಿಸಲು ಸಹಾಯ ಮಾಡುವುದು. ಇದರಿಂದಾಗಿ Alzheimer’s (ನೆನಪಿನ ಶಕ್ತಿ ಕುಂದಿಸುವ) ಕಾಯಿಲೆ ಬಾರದಂತೆ ತಡೆಗಟ್ಟುವುದು. ಈ ರೋಗ ಬಂದವರಿಗೆ ಔಷಧಿಯಾಗಿಯೂ ಸಹಾಯಮಾಡುವುದು. ಪಾರ್ಕಿನ್ ಸಾನಿಸಂ ಕಾಯಿಲೆಗೂ ತೆಂಗಿನೆಣ್ಣೆಯಿAದ ತಯಾರಿಸಿದ ಔಷಧಿಗಳು ಸಹಕಾರಿಯಾಗಿದೆ. ಒಅಈಂ ಬ್ಯಾಕ್ಟೀರಿಯಾದ ಹೊರಭಾಗದ ಕೊಬ್ಬನ್ನು ಕರಗಿಸುವ ಮೂಲಕ ಬ್ಯಾಕ್ಟೀರಿಯಾಗಳನ್ನು ನಾಶಮಾಡುವುದು. ತೆಂಗಿನೆಣ್ಣೆ ಮೆದುಳನ್ನು ರಕ್ಷಿಸುವ ಔಷಧಿಯೂ ಹೌದು, ಆಹಾರವೂ
ಹೌದು. ಇದರ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ಹಲ್ಲು ಹಾಗೂ ಬಾಯಿಯ ಒಳಗಿನ ರಕ್ಷಣೆ ಮಾಡುವುದು.

ವರ್ಜಿನ್ ತೆಂಗಿನೆಣ್:

ಮನೆಯಲ್ಲಿ ತೆಂಗಿನ ಹಾಲಿನಿಂದ ಬಿಸಿ ಮಾಡದೇ ಎಣ್ಣೆ ಸಂಗ್ರಹಿಸಲಾಗುತ್ತದೆ. ಗಾಣದಿಂದ ಸಂಗ್ರಹಿಸುವ ಎಣ್ಣೆಯೂ ಇದಕ್ಕೆ ಸಮಾನವಾಗಿರುತ್ತದೆ. ಇದು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಬಿಸಿಯಾಗದ ಕಾರಣ ಇದರಲ್ಲಿ ವಿಟಮಿನ್ ಇ, ವಿಟಮಿನ್ ಅ ಅಧಿಕ ಇರುತ್ತದೆ. ಇದನ್ನು ಆರು ತಿಂಗಳಗಿಂತ ಜಾಸ್ತಿ ಸಂಗ್ರಹಿಸಲಾಗುವುದಿಲ್ಲ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.