Skip links

ಅರಸಿನ

Scientific Name: Curcuma longa

ಸಂಸ್ಕøತದಲ್ಲಿ ಹರಿದ್ರ ಎಂದು ಕರೆಯಲ್ಪಟ್ಟಿದೆ. ನಿಶಾ ಎಂಬಇನ್ನೊಂದು ಹೆಸರೂ ಇದೆ. ನಿಶಾ ಅಂದರೆ ರಾತ್ರಿ. ರಾತ್ರಿ ಹೊತ್ತಿನಲ್ಲಿ ಇದರಗಡ್ಡೆಯನ್ನು ಸಂಗ್ರಹಿಸಿದರೆ ಔಷಧಿಯ ಗುಣ ಅಧಿಕವಿರುತ್ತದೆ.  

        ಬಹು ವಾರ್ಷಿಕ ಗಿಡ. 3 ರಿಂದ 4 ಅಡಿ ಎತ್ತರ ಬೆಳೆಯುತ್ತದೆ.ಆಯತಾಕಾರದ ಎಲೆ. ಒಂದರಿಂದ ಒಂದೂವರೆ ಅಡಿ ಉದ್ದ ಆರು ಇಂಚುಅಗಲ ಇರುತ್ತದೆ. ವಿಶೇಷ ರಚನೆಯ ಇದರ ಹೂ ದಂಡ ಅರ್ಧಅಡಿಯಷ್ಟು ಇರುತ್ತದೆ. ಸುತ್ತಲೂ ಪತ್ರ ಪುಷ್ಪವಿದ್ದುಮೇಲ್ಭಾಗ ರಕ್ತವರ್ಣವಾಗಿದ್ದರೆ ತುದಿ ನಸುಕೆಂಪಾಗಿರುತ್ತದೆ.ಶುಂಠಿಯಂತೆ ತೋರುವ ಗಡ್ಡೆಗಳು ಹಳದಿ ಬಣ್ಣದಲ್ಲಿ ಇರುತ್ತದೆ.  

  ಅಡಿಗೆ ಮನೆಯೊಳಗಿರುವ ಸಾಂಬಾರು ಪದಾರ್ಥದ ಕರಡಿಗೆಯಲ್ಲಿಇರುವ ಅರಸಿನ ಶೀತ ಕಡಿಮೆಮಾಡುವುದಲ್ಲದೆ ಕ್ಯಾನ್ಸರ್‍ನ್ನೂಮೆಟ್ಟಿನಿಲ್ಲುವ ಶಕ್ತಿ ಇದೆ.ನಾಗರ ಪಂಚಮಿಯಂದು ಎಲ್ಲರಿಗೂನೆನಪಾಗುವುದು ಅರಸಿನದ ಎಲೆ. ಆದಿನ ಬೆಲ್ಲ ತೆಂಗಿನಕಾಯಿ ಸೇರಿಸಿಇದರ ಎಲೆಯಲ್ಲಿ ಮಡಚಿಟ್ಟು ತಯಾರಿಸುವ ಅಕ್ಕಿತಿಂಡಿಯ ಪರಿಮಳವೇವಿಶೇಷ. ಕೀಟ, ಚೇಳು ಕುಟುಕಿದಾಗ ಶುರುವಿಗೆ ನೆನಪಾಗುವುದುಆಯುರ್ವೇದ ಫಸ್ಟ್ ಏಯ್ಡ್ ಬಾಕ್ಸ್‍ನ ಅರಸಿನ. ಪ್ರಥಮಋತುಮತಿಯಾದಾಗ ಅರಸಿನವನ್ನು ಅರೆದು ಮುಖ ಹಾಗೂ ಮೈಗೆಹಚ್ಚಿ ಸ್ನಾನ ಮಾಡುವ ಕಾಲವಿತ್ತು. ಇದು ಹುಡುಗಿಯ ಚರ್ಮದಅಂದ ಹೆಚ್ಚಿಸಲು ಹಾಗೂ ಯಾವುದೇ ಇನ್‍ಫೆಕ್ಷನ್ ಆಗದಿರಲಿ ಎಂಬಯೋಚನೆಯಿಂದ ಈ ಪದ್ಧತಿ ಪ್ರಾರಂಭಿಸಿರಬಹುದು. ಕುರ್ದಿ ನೀರುಮಾಡಲೂ ಸುಣ್ಣದೊಂದಿಗೆ ಅರಸಿನ ಬೇಕು.  ಶುಭಕಾರ್ಯಕ್ರಮಗಳಲ್ಲಿ ಮುತ್ತ್ಯೆದೆಯರಿಗೆ ಕೊಡುವ ಅರಸಿನಕುಂಕುಮಕ್ಕೆ ವಿಶೇಷ ಮಹತ್ವವಿದೆ. ಮದುವೆ, ಉಪನಯನದಕೆಲವು ದಿನ ಮೊದಲು ಅರಸಿನ ಕೋಡನ್ನು ಕೆಂಪು ಪಟ್ಟೆನೂಲಿನಲ್ಲಿಪೋಣಿಸಿ ಕೈಗೆ ಕಟ್ಟುವ “ ನಾಂದಿ” ಎನ್ನುವ ಕಾರ್ಯಕ್ರಮವಿದೆ. ಇದು ಕಟ್ಟಿಕೊಂಡವರ ಆರೋಗ್ಯರಕ್ಷಣೆಯ ಕಲ್ಪನೆ ಇದರ ಹಿಂದೆ ಇದೆ.

ಭೂತಾರಾಧನೆ ಹಾಗೂ ನಾಗಾರಾಧನೆಯಲ್ಲಿ ಪ್ರಸಾದ ರೂಪದಲ್ಲಿಅರಸಿನ ಪುಡಿಯನ್ನು ಅಶ್ವತ್ಥ ಎಲೆ ಅಥವಾ ಬಾಳೆಎಲೆಯಲ್ಲಿಕೊಡುತ್ತಾರೆ. ಈ ಎರಡೂ ಆರಾಧನೆಗಳು ಮನಷ್ಯರಿಗೆ ಬರುವಶಾರೀರಿಕ ತೊಂದರೆ ನಿವಾರಣೆ ಅಥವಾ ಬಾರದಿರಲು ಆಚರಿಸಲ್ಪಡುತ್ತದೆ.ಇಲ್ಲಿ ಸಿಗುವ ಪ್ರಸಾದ ರೂಪದ ಔಷಧಿ ಅರಸಿನ. ಪ್ರತಿದಿನ ಸ್ವಲ್ಪ ಸ್ವಲ್ಪತಿಂದರೂ ಶರೀರದ ಕೆಲವು ತೊಂದರೆ ನಿವಾರಣೆ ಆಗುವುದು ಅಥವಾಮೈಗೆ ಹಚ್ಚಿಕೊಂಡರೂ ಒಂದಷ್ಠು ರೋಗ ನಿವಾರಣೆಆಗುವುದು.ಸ್ತ್ರೀಯರ ಮುಖದ ಸೌಂದರ್ಯವರ್ಧಕ ತಿಲಕ. ತಿಲಕವಾಗಿಉಪಯೋಗಿಸುವ ಕುಂಕುಮಕ್ಕೆ ಸುಣ್ಣ, ಕೂವೆಹುಡಿಯೊಂದಿಗೆಅರಸಿನ ಬೇಕು. ಈಗ ಸಿಗುವ ಕುಂಕುಮ ಕೆಮಿಕಲ್‍ಯುಕ್ತವಾಗಿದೆ. ಅದರ ಬಗ್ಗೆ ಜಾಗ್ರತೆವಹಿಸಬೇಕು.

ವೇದಕಾಲದಿಂದಲೂ ಬಳಕೆಯ ಉಲ್ಲೇಖ ಇರುವ ಅರಸಿನ  ಈಗಲೂ ನಮ್ಮ ಜೀವಮಾನದ ಹಲವಾರು ಸಂದರ್ಭಗಳಲ್ಲಿ ಪ್ರಮುಖ ಪಾತ್ರ ವಹಿಸುವುದು ವಿಶೇಷವಾಗಿದೆ.ವ್ಯಾದಿ ಕ್ಷಮತೆ ವೃದ್ಧಿಸುವ ಅರಸಿನ ಈಗ ಆಹಾರದಲ್ಲಿ ಬಳಕೆಕಡಿಮೆಯಾಗಿದೆ. ಯಾಕೆಂದರೆ ಈಗಿನವರು ಹೆಚ್ಚಾಗಿ ಬಯಸುವಚೈನೀಸ್ ತಿಂಡಿಯಲ್ಲಿ ಅರಸಿನದ ಬಳಕೆ ಇಲ್ಲ. ಇದರಲ್ಲಿ ಜಿಂಜರ್ ಪೇಸ್ಟ್,ಗಾರ್ಲಿಕ್ಪೇಸ್ಟ್, ಚಿಲ್ಲೀ ಪೇಸ್ಟ್ ಇನ್ನು ಏನೇನೋ ಮಿಶ್ರಣದೊಂದಿಗೆಅಜಿನೋಮೋಟೋ ಎಂಬ ಬಿಳಿ ಪುಡಿಯನ್ನು ಸೇರಿಸುವ ಮೂಲಕನಮ್ಮ ಆರೋಗ್ಯ ಹಾಳಾಗುತ್ತದೆ. ಆದರೆ ನಮ್ಮ ದಕ್ಷಿಣ ಭಾರತದಆಹಾರಗಳಾದ ಇಡ್ಲಿ, ಸೇಮಿಗೆ, ಪುಂಡಿಗಳು ಜೀರ್ಣಕ್ಕೂ ಸುಲಭಇದನ್ನು ತಿನ್ನಲು ಸಹಕರಿಸುವ ಸಾಂಬಾರನಲ್ಲಿ ಅರಸಿನ ಇರುವುದರಿಂದಆರೋಗ್ಯಕ್ಕೂ ಒಳ್ಳೆಯದು. ನಿಧಾನವಾಗಿ ವ್ಯಾದಿಕ್ಷಮತೆ ವೃದ್ಧಿಯೂ ಆಗುವುದು.  

ಮೈತುರಿಕೆ ಅಥವಾ ಬೆಸರ್ಪು(ಚರ್ಮದ ಮೇಲೆ ದಡಿಕೆಗಳಿಂದಕೂಡಿದ ತುರಿಕೆ)ಇದ್ದರೆ2-3ಗ್ರಾಂ ಅರಸಿನ ಪುಡಿಯನ್ನು ಬಿಸಿ ನೀರಿನಲ್ಲಿಕಲಸಿ ದಿನಕ್ಕೊಮ್ಮೆ ಒಂದು ತಿಂಗಳು ಕುಡಿಯಬೇಕು. ಅಥವಾಇದರಿಂದಲೇ ತಯಾರಿಸಿದ “ ಹರಿದ್ರಾ ಖಂಡ” ಎಂಬ ಪುಡಿಯನ್ನು ಒಂದುಚಮಚದಂತೆ ದಿನಕ್ಕೆರಡು ಸಲ ಸೇವಿಸಬೇಕು.  

       ಮಧುಮೇಹದಲ್ಲಿ ಉಪಯೋಗಿಸುವ ಹಲವಾರುಔಷಧಿಗಳೊಂದಿಗೆ ಅರಸಿನವೂ ಸೇರಿರುತ್ತದೆ. ಚರಕ ಸಂಹಿತೆಯಲ್ಲಿಹೇಳಿದ “ನಿಶಾಮಲಕಿ” ಎಂಬ ಔಷಧಿಯಲ್ಲಿ ಅರಸಿನ ಮತ್ತು ನೆಲ್ಲಿಕಾಯಿಮಾತ್ರ ಇರುವುದು . ಇದನ್ನು ಸೇವಿಸಿದರೆ ಕೆಲವರಿಗೆ ಮಧುಮೇಹನಿಯಂತ್ರಣವಾಗುವುದು.

      ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಸಿನಕ್ಕೆ ಬಹಳಷ್ಟು ಮಹತ್ವವಿದೆ. ಇದರಲ್ಲಿಇರುವ Curcumin ಎಂಬ ಅಂಶವು ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.ಕೆಲವು ವಿಧದ ಕ್ಯಾನ್ಸರನ್ನು ಹರಡುವುದನ್ನೂ ತಡೆಯುತ್ತದೆ.ಅಲ್ಲದೆ ಕ್ಯಾನ್ಸರ್ ಗಡ್ಡೆಗಳನ್ನು ಸಣ್ಣದು ಮಾಡುವ ಗುಣವನ್ನೂ  ಹೊಂದಿದೆ. ಇದರAnti angiogenic ಗುಣಗಳು ಇಂತಹಕಾರ್ಯಗಳನ್ನು ಮಾಡಲು ಸಹಕರಿಸುವುದು ಎಂದು ಅಧ್ಯಯನ ತಿಳಿಸುತ್ತದೆ.  

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.