Skip links

ಎಕ್ಕ

Scientific Name: Calotropis gigantea

   ಅರ್ಕ ಎಂದು ಆಯುರ್ವೇದ ಗ್ರಂಥಗಳಲ್ಲಿ ಕಂಡು ಬರುವ ಗಿಡಕ್ಕೆ ತುಳುವಿನಲ್ಲಿ ಎಕ್ಕ ಅಥವಾ ಎಕ್ಕಮಲೆ ಎನ್ನುತ್ತಾರೆ. ನಮ್ಮೂರಿನ ಮಾರ್ಗದ ಬದಿಗಳಲ್ಲಿ ಗುಡ್ಡೆ ಕಾಡಿನಲ್ಲಿ ಹೇರಳವಾಗಿ ಕಂಡುಬರುತ್ತದೆ. 5-10 ಅಡಿ ಎತ್ತರ ಬೆಳೆಯುತ್ತದೆ. ಕಾಂಡದ ಚರ್ಮ ನಾರಿನಿಂದ ಕೂಡಿದೆ. ಎಲೆ 4-6 ಇಂಚು ಉದ್ದ 2-3 ಇಂಚು ಅಗಲವಿದ್ದು ದಪ್ಪವಾಗಿರುತ್ತದೆ. ಎಲೆಯ ಮೇಲ್ಭಾಗ ನಯವಾಗಿದ್ದರೆ ಅಡಿಭಾಗ ಸೂಕ್ಷ್ಮ ರೋಮಗಳಿಂದ ಮುಟ್ಟುವಾಗ ಮೃದುವಾಗಿರುತ್ತದೆ.

ಎಲೆಯನ್ನು ಕೊೈದರೆ ಹಾಲು ಬರುತ್ತದೆ. ಕವಲೊಡೆದು ಬೆಳೆಯುತ್ತದೆ. ತುದಿಯಲ್ಲಿ ಗುಚ್ಚಾಕಾರದ ಹೂ ಗೊಂಚಲುಕಂಡುಬರುತ್ತದೆ. ಕೆಂಪು ನೇರಳೆ ಮಿಶ್ರಿತ ಹೂಗಳು, ದೃಢವಾದ ಹೂ ಮೊಗ್ಗುಗಳು, ಕೇವಲ ಬಿಳಿ ಬಣ್ಣದ ಹೂಗಳಿಂದ ಕಂಡುಬರುವ ಇನ್ನೊಂದು ಪ್ರಭೇದವೂ ಇದೆ. ಸಾಮಾನ್ಯವಾಗಿ ಎರಡರ ಗುಣವೂ ಒಂದೇ ಆಗಿರುತ್ತದೆ.

     ನವ ಗ್ರಹಗಳಲ್ಲಿ ಒಂದೊಂದು ಗ್ರಹಕ್ಕೂ ಒಂದು ವನಸ್ಪತಿಯ ಸಂಬಂಧವನ್ನು ಕಲ್ಪಿಸಿದ್ದಾರೆ. ಅರ್ಕ ಸೂರ್ಯನನ್ನು ಪ್ರತಿನಿಧಿಸುತ್ತದೆ. ಇದು ಸೂರ್ಯನಂತೆ ತೀಕ್ಷ್ಣವೂ ಹೌದು. ಔಷಧಿಗಾಗಿ ಕೆಂಪು ವರ್ಣದ ಹೂವಿರುವ ಎಕ್ಕವನ್ನು ಉಪಯೋಗಿಸಿದರೆ ವೈದಿಕ ಕಾರ್ಯ ಅಥವಾ ತಾಂತ್ರಿಕ್ ಪ್ರಾಕ್ಟೀಸ್‍ಗಳಲ್ಲಿ ಬಿಳಿ ಎಕ್ಕವನ್ನು ಉಪಯೋಗಿಸುತ್ತಾರೆ.  

ಅರ್ಕಚಂಪಕಪುನ್ನಾಗನಂದ್ಯಾವರ್ತಂ ಚ ಪಾಟಲೀ|

  ಬೃಹತೀ ಕರವೀರಾಣಿ ದ್ರೋಣ ಪುಷ್ಪಾಣಿ ಚಾರ್ಚಯೇತ್||

    ರುದ್ರ ಲಘುನ್ಯಾಸದಲ್ಲಿ ಶಿವನಿಗೆ ಇಷ್ಟವಾದ ಎಂಟು ಹೂಗಳನ್ನು ಹೇಳಿದ್ದಾರೆ. ಅರ್ಕ, ಸಂಪಿಗೆ, ನಾಗಪುಷ್ಪ, ನಂದಿಬಟ್ಟಲು, ಪಾಟಲ, ಚುಂಡೆ(ಬದನೆ ಪ್ರಬೇದ), ಕರವೀರ, ತುಂಬೆ. ಈ ಎಂಟು ಹೂಗಳಲ್ಲಿ ಶಿವನಿಗೆ ಇಷ್ಟವಾದ ಅರ್ಕ ಅಂದರೆ ಎಕ್ಕೆಯನ್ನು ಪ್ರಥಮವಾಗಿ ಹೇಳಿದ್ದಾರೆ. ಇದರ ಎಲೆಯನ್ನು ಗಣಪತಿಗೆ ಮತ್ತು ಹನುಮಂತನಿಗೆ ಅರ್ಪಿಸುತ್ತಾರೆ.

ಅರ್ಕಚಂಪಕಪುನ್ನಾಗನಂದ್ಯಾವರ್ತಂ ಚ ಪಾಟಲೀ|

        ಬೃಹತೀ ಕರವೀರಾಣಿ ದ್ರೋಣ ಪುಷ್ಪಾಣಿ ಚಾರ್ಚಯೇತ್||

    ರುದ್ರ ಲಘುನ್ಯಾಸದಲ್ಲಿ ಶಿವನಿಗೆ ಇಷ್ಟವಾದ ಎಂಟು ಹೂಗಳನ್ನು ಹೇಳಿದ್ದಾರೆ. ಅರ್ಕ, ಸಂಪಿಗೆ, ನಾಗಪುಷ್ಪ, ನಂದಿಬಟ್ಟಲು, ಪಾಟಲ, ಚುಂಡೆ(ಬದನೆ ಪ್ರಬೇದ), ಕರವೀರ, ತುಂಬೆ. ಈ ಎಂಟು ಹೂಗಳಲ್ಲಿ ಶಿವನಿಗೆ ಇಷ್ಟವಾದ ಅರ್ಕ ಅಂದರೆ ಎಕ್ಕೆಯನ್ನು ಪ್ರಥಮವಾಗಿ ಹೇಳಿದ್ದಾರೆ. ಇದರ ಎಲೆಯನ್ನು ಗಣಪತಿಗೆ ಮತ್ತು ಹನುಮಂತನಿಗೆ ಅರ್ಪಿಸುತ್ತಾರೆ.

ಬೇರಿನ ತೊಗಟೆಯನ್ನು ಒಣಗಿಸಿ ಪುಡಿಮಾಡಿ ಸಂಗ್ರಹಿಸಿಟ್ಟು ಶೀತ, ಕೆಮ್ಮು ಇರುವಾಗ 1/4 ಚಮಚ ಪುಡಿಯನ್ನು ಜೇನಿನೊಂದಿಗೆ ಮಿಶ್ರ ಮಾಡಿ ಸೇವಿಸಬೇಕು.


ನೋವು ಬಾವು:

ಎಲೆಯನ್ನು ಬಿಸಿಮಾಡಿ ನೋವು ಅಥವಾ ನೋವಿನಿಂದ ಬಾತು ಕೊಂಡಿರುವ ಭಾಗಕ್ಕೆ ಶೇಖಕೊಟ್ಟರೆ ಕಡಿಮೆಯಾಗುವುದು. ವಿಶೇಷವಾಗಿ “ಟೆನ್ನಿಸ್ ಎಲ್ಬೊ” ಎನ್ನುವ ಕೈ ನೋವಿನಲ್ಲಿ ಹಾಗು ಹಿಮ್ಮಡಿ ನೋವಿನಲ್ಲಿ ಇದರ ಎಲೆಯನ್ನು ಚೆನ್ನಾಗಿ ಬಿಸಿಮಾಡಿ ನೋವು ಕಂಡುಬರುವ ನಿರ್ದಿಷ್ಟ ಜಾಗಕ್ಕೆ ನಿರಂತರ 5-10 ನಿಮಿಷ ಶೇಖ ಕೊಡುವುದರಿಂದ ನೋವಿನ ತೀವ್ರತೆಯನ್ನು ಕಡಿಮೆಮಾಡಬಹುದು. ಇದರೊಂದಿಗೆ ನಿರ್ದಿಷ್ಟ ಔಷಧಿಗಳನ್ನು ಸೇವಿಸುವ ಮೂಲಕ ಸಂಪೂರ್ಣ ಗುಣ ಮುಖರಾಗಬಹುದು. ಇದರ ತೈಲ ಪಾಕಮಾಡಿ ಹಚ್ಚುವುದರಿಂದ ಹಲವು ವಿಧದ ನೋವುಗಳು ಕಡಿಮೆಯಾಗುವುದು. 200ಮಿಲಿ ಸಾಸಿವೆ ಎಣ್ಣೆಗೆ 400ಮಿಲಿ ಎಕ್ಕಮಲೆ ರಸ, 50ಗ್ರಾಂ ಎಕ್ಕ ಎಲೆ ಅರೆದು ಸೇರಿಸಿ ತೈಲ ಪಾಕ ಮಾಡಿ ನೋವಿರುವಲ್ಲಿಗೆ ಹಚ್ಚಬೇಕು. ದೀರ್ಘ ಸಮಯ ಉಪಯೋಗಿಸುವುದರಿಂದ ಕೆಲವೊಮ್ಮೆ ಹಚ್ಚಿದ ಭಾಗದಲ್ಲಿ ತುರಿಕೆ ಉಂಟಾದರೆ ಹಚ್ಚುವುದನ್ನು ನಿಲ್ಲಿಸಿದರೆ ತುರಿಕೆ ಕಡಿಮೆಯಾಗುವುದು.

ಎಕ್ಕದ ಹಾಲನ್ನು ಗ್ರಂಥಿಗಳ ಊತಗಳಲ್ಲಿ ಉಪಯೋಗಿಸುತ್ತಾರೆ. ಎಕ್ಕದ ಹಾಲು ತೀಕ್ಷ್ಣವಾಗಿರುವುದರಿಂದ ನುರಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಉಪಯೋಗಿಸಬೇಕು. ಭಗಂದರ ಚಿಕಿತ್ಸೆಯಲ್ಲಿ ಇದರ ಹಾಲನ್ನು ಉಪಯೋಗಿಸಿ ತಯಾರಿಸಿದ ಸೂತ್ರ (ನೂಲು)ಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ಎಕ್ಕದ ಎಲೆ ಮೇಲೆ ಉಪ್ಪು ಪದರ ಪದರವಾಗಿ ಮಣ್ಣಿನ ಪಾತ್ರೆಯಲ್ಲಿ ಹಾಕಿ ಭಸ್ಮ ಮಾಡಿ ಅದನ್ನು ಕೆಮ್ಮು, ದಮ್ಮು ಗಳಿಗೆ ಉಪಯೋಗಿಸಲಾಗುತ್ತದೆ. ಇದರ ತಯಾರಿಕೆಗೆ ನುರಿತ ವೈದ್ಯರ ಸಹಾಯ ಬೇಕು.

ಅನಾಯಾಸವಾಗಿ ಬೆಳೆದು ಕಳೆದು ಹೋಗುವ ಎಕ್ಕಗಿಡದ ಮಹತ್ವ ಸೂರ್ಯನಷ್ಟೇ ಪ್ರಖರ ಹಾಗೂ ನಿಖರ.  

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.