Skip links

ಲೋಳೆಸರ

Scientific Name : Aloe vera

     ಲೋಳೆಸರವನ್ನು ಕುಮಾರಿ  ಎಂದೂ ಕರೆಯುತ್ತಾರೆ.ನಮ್ಮ ಹೂತೋಟದಲ್ಲಿ ಹುಲುಸಾಗಿ ಬೆಳೆಸಬಹುದು. ನೋಡಲು ಬಹಳ ಆಕರ್ಷಕ. 1 ರಿಂದ 2 ಫೀಟ್ಎ ತ್ತರ ಬೆಳೆಯುವ ಗಿಡ. 3/4 ಇಂಚು ದಪ್ಪ ಹಾಗೂ 1 ರಿಂದ 1 1/4 ಫೀಟ್ ಉದ್ದದ ಎಲೆಗಳು, ಎರಡೂ ಬದಿಗಳಲ್ಲಿ ಮುಳ್ಳುಗಳ ರಚನೆ. ಅದು ಚುಚ್ಚುವಷ್ಟು ಗಟ್ಟಿಯಾಗಿರುವುದಿಲ್ಲ. ಎಲೆಯನ್ನು ತುಂಡುಮಾಡಿದರೆ ದಪ್ಪ ಗಟ್ಟಿಯಾದ (Jelly) ಶುಭ್ರ ಬಿಳಿಯಾಗಿ ಕಾಣುವ ಭಾಗವಿರುತ್ತದೆ. ಹೊರಗಿನ ಹಸಿಯಾದ ಕವಚ ವನ್ನು ತೆಗೆದರೆ ಬಿಳಿಯಾದ ಅಂಶವನ್ನು ಸಂಗ್ರಹಿಸಬಹುದು. ಇದು ಕ್ರಮೇಣ ದ್ರವವಾಗುತ್ತದೆ. ಗಿಡದಿಂದ ಕೆಲವೊಮ್ಮೆ ಕೆಂಪು ಬಣ್ಣದ ಹೂ ಕಾಣಸಿಗುತ್ತದೆ. ಕಡಿಮೆ ಮಳೆ ಬೀಳುವಲ್ಲಿ ಚೆನ್ನಾಗಿ  ಬೆಳೆಯುತ್ತದೆ. ಆಫ್ರಿಕ ,ಚೀನ, ಸ್ಪೇನ್ ಹಾಗೂ ನಮ್ಮ ದೇಶದಲ್ಲಿ ಕಂಡುಬರುತ್ತದೆ.

ಜೀರ್ಣ ಕ್ರಿಯೆ:  

ಹಸಿವು ಕಡಿಮೆ ಇರುವವರು ಇದರ 5ml ರಸವನ್ನು ದಿನಕ್ಕೆ ಒಂದು ಸಲ ಅಥವಾ ಎರಡು ಸಲ ಒಂದು ತಿಂಗಳು ಅಥವಾ ಎರಡು ತಿಂಗಳು ಕುಡಿಯಬಹುದು. ಜೀರ್ಣ ಕ್ರಿಯೆಗೆ Lipase enzyme ಬೇಕು. ಸಸ್ಯಜನಿತ ಐiಠಿಚಿse ಲೋಳೆ ಸರದಲ್ಲಿ ಇರುವುದರಿಂದ ಜೀರ್ಣಕ್ಕೆ ಸಹಕಾರಿಯಾಗಿದೆ. ಯಕೃತ್‍ನ ಕಾರ್ಯಕ್ಷಮತೆಯನ್ನು ವೃಧ್ಧಿಸುತ್ತದೆ.   ಮದ್ಯಸೇವನೆಯಿಂದ ಉಂಟಾದ ಸಣ್ಣ ಪುಟ್ಟ ಯಕೃತ್ತೊಂ ದರೆಗಳಲ್ಲಿ ಇದನ್ನು ಉಪಯೋಗಿಸಬಹುದು. 1 ತಿಂಗಳು ಅಥವಾ 2 ತಿಂಗಳು ನಿರಂತರ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿ 3 ತಿಂಗಳು  ಬಿಟ್ಟು ಪುನಃ ಸೇವಿಸಬಹುದು. ಕುಮಾರ್ಯಾಸವ ಎಂಬ ತಯಾರಿಕೆಯಲ್ಲಿ ಲೋಳೆಸರವೇ ಮುಖ್ಯ ಘಟಕ ದ್ರವ್ಯ. ಇದನ್ನು   ಸೇವಿಸುವುದರಿಂದಲೂ ಜೀರ್ಣ ಕ್ರಿಯೆಯನ್ನು ವೃಧ್ಧಿüಸಿಕೊಳ್ಳಬಹುದು

ಮಲಬದ್ಧತೆ:

ಅಜೀರ್ಣ ಇರುವವರಿಗೆ ಹೆಚ್ಚಾಗಿ ಮಲಬದ್ಧತೆ ಇರುತ್ತದೆ. ಮಲಬದ್ಧತೆ ಇರುವವರು 10ml ರಸವನ್ನು ದಿನಕೊಮ್ಮೆ ಸೇವಿಸಬಹುದು. ಲೋಳೆಸರದಲ್ಲಿ ಇರುವ Anthraquinones ಮಲಬದ್ಧತೆ ನಿವಾರಕವಾಗಿದೆ. ಆದ ಕಾರಣ constipation ಇರುವವರಲ್ಲಿ ಸಹಾಯಮಾಡುತ್ತದೆ.  

ಸೌಂದರ್ಯವರ್ಧಕ :  

ನಾವು ಉಪಯೋಗಿಸುವ ಶಾಂಪು, ಸೋಪ್, ಮುಖಕ್ಕೆ ಹಚ್ಚುವ ಸೌಂದರ್ಯವರ್ಧಕಗಳಲ್ಲಿ ಲೋಳೆಸರದ ಚಿತ್ರವನ್ನು ಕಾಣುತ್ತೇವೆ. ಪ್ರಾಚೀನ    ಗ್ರಂಥಗಳಲ್ಲಿಯೂ ಇದನ್ನು ಸೌಂದರ್ಯವರ್ಧಕವಾಗಿ ,ಕೂದಲಿನ ಬೆಲವಣಿಗೆಗಾಗಿ ಉಲ್ಲೇಖಿಸಿದ್ದಾರೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಸೂರ್ಯನ ಕಿರಣಗಳಿಂದ  ಚರ್ಮಕ್ಕೆ ಆಗುವ ಹಾನಿಯನ್ನು ತಡೆಯುತ್ತದೆ. ಇದರ ಲೇಪನದಿಂದ Metallothionein ಚರ್ಮದಲ್ಲಿ ಉತ್ಪತ್ತಿಯಾಗುತ್ತದೆ. ಇದು ಚರ್ಮದ ಸೌಂದರ್ಯವರ್ಧನೆಗೆ ಅಗತ್ಯವಿರುವ  Glutathione  ಉತ್ಪತ್ತಿ ಕಡಿಮೆ ಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಚರ್ಮಕ್ಕೆ ಉತ್ತಮ ಬಣ್ಣ, ಚವರ್iದಲ್ಲಿ ಉಂಟಾಗುವ ಅಕಾಲಿಕ ನೆರಿಗೆಗಳು ಬಾರದಂತೆ ಮಾಡುತ್ತದೆ. ವಯಸ್ಸಾದಂತೆ ಮುಖದ ಚರ್ಮ ಜೋತು ಬೀಳುವುದು. ಯಾಕೆಂದರೆ ಚರ್ಮದಲ್ಲಿ Collagen ಕಡಿಮೆಯಾಗಿರುತ್ತದೆ. ಲೋಳೆಸರದಲ್ಲಿ Collagen ಉತ್ಪತ್ತಿಯಾಗಲು ಸಹಕಾರಿಯಾಗುವ ಅಂಶ ಇರುವುದರಿಂದ ಮುಖದ ಸೌಂದರ್ಯ ವೃಧ್ದಿಯಾಗುತ್ತದೆ ಹಾಗೂ ಕಾಪಾಡಲ್ಪಡುತ್ತದೆ.  

ನೋವುನಿವಾರಕ :

ಬೆಂಕಿತಾಗಿ ಗುಳ್ಳೆ  ಬಂದಿರುವಾಗ ಇದರ ರಸವನ್ನು ದಾರೆ ಎರೆಯಬಹುದು. ಇದರಿಂದ ಉರಿಕಡಿಮೆಯಾಗುತ್ತದೆ. ಬಿದ್ದು ತಾಗಿ ಜಜ್ಜಿ ಹೋಗಿರುವ ಭಾಗಕ್ಕೆ ನೋವು ಕಡಿಮೆಯಾಗಲು ಇದರ ರಸವನ್ನು ಬಿಸಿಮಾಡಿ ಸ್ವಲ್ಪ ದಪ್ಪಮಾಡಿ ಹಚ್ಚಬೇಕು. ರಕ್ತ ಹೆಪ್ಪುಗಟ್ಟಿ ನೋವಿದ್ದರೆ ಅದನ್ನು ನಿವಾರಿಸುತ್ತದೆ. ಅಂಗಡಿಗಳಲ್ಲಿ ಸಿಗುವ ರಕ್ತವಾಳ (ರಕ್ತಬೋಳ) ಇದರ ರಸವನ್ನೆ ಇಂಗಿಸಿ ತಯಾರಿಸುತ್ತಾರೆ. ಇದನ್ನು ನೀರಲ್ಲಿ ಅರೆದು ಲೇಪಿಸುವುದರಿಂದ ನೋವು , ಬಾವು ಕಡಿಮೆಯಾಗುತ್ತದೆ. ಮೊಟ್ಟೆಯ ಬಿಳಿಬಾಗದೊಂದಿಗೆ(egg yolk) ಅರೆದು ಹಚ್ಚುವುದರಿಂದ ಪರಿಣಾಮ ಅಧಿಕ. ರಕ್ತವಾಳವನ್ನೆ ಮುಖ್ಯವಾಗಿರಿಸಿ ತಯಾರಿಸಿದ ಮರ್ಮಾನಿ ಮಾತ್ರೆಯನ್ನು ಅರೆದು ಲೇಪಿಸಿದರೂ ನೋವು ,ಬಾವು ಕಡಿಮೆಯಾಗುತ್ತದೆ. C – Glucosyl chromoneಎಂಬ ಬಾವು (inflammation)ನಿವಾರಕ ಮೂಲವಸ್ತುವನ್ನೂ ಲೋಳೆಸರದಿಂದ ಪ್ರತ್ಯೇಕಿಸಿದ್ದಾರೆ.ಇದು ನೋವು ನಿವಾರಕ ಎನ್ನುವುದಕ್ಕೆ ಸಾಕ್ಷಿ.  

ಸ್ರೀರೋಗ :  

 ಮುಟ್ಟಾಗುವಾಗ ಹೊಟ್ಟೆನೋವು , ಕಡಿಮೆಸ್ರಾವ ,ಮುಟ್ಟುತಡವಾಗುವ ಸಂದರ್ಭದಲ್ಲಿ ಇದರ ರಸವನ್ನು ಅಥವಾ ಇದನ್ನು ಉಪಯೋಗಿಸಿ ತಯಾರಿಸಿದ ಔಷಧಿಯನ್ನು ಸೇವಿಸಿದರೆ ಗುಣಮುಖರಾಗುತ್ತಾರೆ. ಕಾಲಕಾಲಕ್ಕೆ ಮುಟ್ಟಾಗದಿರುವ ತೊಂದರೆ (PCOD) ಯಿಂದ ಬಳಲುವವರೂ ಇದನ್ನು ಉಪಯೋಗಿಸಬಹುದು. ಇದು ಅಂಡಾಣು ಉತ್ಪತ್ತಿಯಾಗಲೂ ಸಹಕಾರಿಯಾಗಿದೆ. ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ರೂಡಿ ಭಾಷೆಯಲ್ಲಿ ಹೇಳುವಂತೆ ಉಷ್ಣ ಆಗುವುದು. ಅಂದರೆ ರಕ್ತಬೇದಿ, ಅಧಿಕ ರಕ್ತ ಸ್ರಾವ ಆಗಬಹುದು. ಗರ್ಭಿಣಿ ಸ್ತ್ರಿಯರು ಸೇವಿಸುವುದು ಒಳ್ಳಯದಲ್ಲ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.