Skip links

ಶುಂಠಿ

Scientific Name: Zingiber officinale

      ಶುಂಠಿಯನ್ನು “ಮಹೌಷದ” (ವಿಶೇಷ ಔಷಧಿ) “ವಿಶ್ವ ಭೇಷಜ (ಅನೇಕವ್ಯಾಧಿಗಳಿಗೆ ಉಪಯುಕ್ತ) ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಉಪಯೋಗ ಮಾಡುವ ಗಡ್ಡೆ ಒಣಗಿದ್ದರೆ ಶುಂಠಿ ಎಂದೂ ಹಸಿಯಾಗಿದ್ದರೆ ಆದ್ರ್ರಕ ಎಂದು ಹೇಳುತ್ತಾರೆ.  

ಹಲವು ವರ್ಷಗಳವರೆಗೆ ನಾಶವಾಗದೇ ಬದುಕುವ ಗಿಡ. ಬುಡದಲ್ಲಿ ಸುಂದರವಾದ ವಿಶೇಷ ಆಕಾರಗಳಿಂದ ಕೂಡಿದ ಗಡ್ಡೆಯ ಗೊಂಚಲು ಇರುತ್ತದೆ. ಎಲೆಗಳಿಂದ ಆವ್ರತವಾದ ಕಾಂಡ ನೋಡಲು ಬಹಳ ಖುಷಿ. 2-4 ಫೀಟ್ ಎತ್ತರ ಬೆಳೆಯುವ ಗಿಡದಲ್ಲಿ 6-12 ಇಂಚು ಉದ್ದ ಹಾಗೂ 1  1/2 ಯಿಂದ 2 ಇಂಚು ಅಗಲದ ಎಲೆಗಳು ಕಂಡುಬರುತ್ತದೆ. ಎಲೆಯ ಅಗ್ರಭಾಗ ಸಪೂರ ಚೂಪಾಗಿದ್ದರೆ ಬುಡ ಕಾಂಡದೊಂದಿಗೆ ವಿಲೀನವಾಗಿರುತ್ತದೆ. 10-12 ಇಂಚು ಉದ್ದವಿರುವ ಹೂವಿನಲ್ಲಿ ಹಳದಿ ಎಸಳುಗಳು ಆಕರ್ಷಕÀವಾಗಿರುತ್ತದೆ.

 ಉಷ್ಣಹವೆ ಹಾಗೂ ತಂಪಾದ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ.  ದಕ್ಷಿಣ ಭಾರತ , ಉತ್ತರ ಭಾರತ, ಚೀನ,ಜಪಾನ್, ಆಫ್ರಿಕದಲ್ಲಿಯೂ ಕಂಡುಬರುತ್ತದೆ. ಹೊರ ದೇಶದ ಶುಂಠಿ ಗುಣದಲ್ಲಿ ವ್ಯತ್ಯಾಸ ಇರುತ್ತದೆ.  

ನಾವು ಚಟ್ನಿ ಮಾಡಲು, ಮಜ್ಜಿಗೆಯೊಂದಿಗೆ ಸೇರಿಸಿ , ತಂಬ್ಲಿ ಮಾಡಲು , ಕಬ್ಬಿನ ರಸದೊಂದಿಗೆ, ಚಹಾ (ಉತ್ತರಭಾರತದಲ್ಲಿ ಆದ್ರ್ರಕ ) ದೊಂದಿಗೆ ಸೇವಿಸುವ ಔಷಧೀüಯ ಗುಣವುಳ್ಳ ಆಹಾರವಾಗಿದೆ. ಔಷಧವಾಗಿ ಸಂಧಿವಾತ, ಆಮವಾತ(Rheumatoid arthritis) ದಲ್ಲಿ ನೋವು  ನಿವಾರಕವಾಗಿ , ಅಜೀರ್ಣದಲ್ಲಿ , ಕೆಮ್ಮುಕಫ, ಶೀತದಲ್ಲಿ ಅಲರ್ಜಿ, ತುರಿಕೆಯಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತದೆ. ವಿಶೇಷವೆಂದರೆ ಹಸಿ ಶುಂಠಿ (ಆದ್ರ್ರಕ) ಗೆ ಒಂದು ಗುಣವಿದ್ದರೆ ಒಣ ಶುಂಠಿಗೆ ಇನ್ನೊಂದು ಗುಣ.

ಅಜೀರ್ಣ :   

ಹೊಟ್ಟೆ ಉಬ್ಬರಿಸಿದರೆ ಒಂದು ಕಲ್ಲು ಉಪ್ಪಿನೊಂದಿಗೆ ಒಂದು ತುಂಡು ಹಸಿ ಶುಂಠಿಯನ್ನು ಜಗಿದು ನಂಗುವುದರಿಂದ ಪರಿಹಾರ ಆಗುವ ಮನೆಮದ್ದು. ಅದನ್ನೂ ಭಾವ ಪ್ರಕಾಶ ಗ್ರಂಥದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.

ಬೋಜನಾಗ್ರೇ ಸದಾ ಪಥ್ಯಂ ಲವಣಾದ್ರ್ರಕಭಕ್ಷಣಂ||

ಅಗ್ನಿ ಸಂದೀಪನಂ ರೂಚ್ಯಂ ಜಿಹ್ವಾಕಂಠವಿಶೋದನಂ||

ಊಟದ ನಂತರ ಹಸಿ ಶುಂಠಿ ಮತ್ತು ಉಪ್ಪು ಸೇರಿಸಿ ತಿನ್ನಬೇಕು, ಇದರಿಂದ ನಾಲಗೆ ಮತ್ತು ಕಂಠಶೋದÀನ ಮಾಡಿ ಹಸಿವು ಉಂಟು ಮಾಡಿ ನಾಲಗೆಗೆ ರುಚಿಯ ಅನುಭವ ಉಂಟುಮಾಡುವುದು.

ಸೊಂಟನೋವು :

ವಯಸ್ಸಾದಂತೆ ಸೊಂಟನೋವು,ಗಂಟುನೋವು ಸ್ವಾಭಾವಿಕ. 40 ವರ್ಷದ ನಂತರದವರು ಕ್ಯಾಲ್ಸಿಯಂ ಮಾತ್ರೆ ನುಂಗುವುದು ಎಲ್ಲರಿಗೂ ತಿಳಿದಿದೆ. ಶುಂಠಿಯಲ್ಲಿ ಸ್ವಾಭಾವಿಕ ಕ್ಯಾಲ್ಸಿಯಂ ಇದೆ. ಶುಂಠಿಯನ್ನು ನೆಗ್ಗಿನ ಮುಳ್ಳಿನೊಂದಿಗೆ ಕಷಾಯ ಮಾಡಿ ಕುಡಿದರೆ ಸೊಂಟನೋವು ಬೆನ್ನು ನೋವು ಕಡಿಮೆಯಾಗುತ್ತದೆ.

ಆಮವಾತ :

ಶರೀರದ ದೊಡ್ಡ ಹಾಗೂ ಸಣ್ಣ ಸಂದುಗಳು ಊದಿಕೊಂಡು ತುಂಬಾ ನೋವನ್ನು ಉಂಟುಮಾಡುವ ಒಂದು ವಿಧದ ಕಷ್ಠಕರವಾತ. ಇದನ್ನು ನಿವಾರಿಸುವ ಹಲವು ಔಷಧಿಗಳೊಂದಿಗೆ ಹಸಿ ಶುಂಠಿಯನ್ನು ಜಜ್ಜಿ ಕಷಾಯ ಮಾಡಿ ಒಂದು ಚಮಚ ಶುದ್ಧ ಹರಳೆಣ್ಣೆ (Castor oil) ಸೇರಿಸಿ ನಿತ್ಯ ದೀರ್ಘ ಸಮಯ ಸೇವಿಸಿದರೆ ವ್ಯಾದಿಯ ನಿಯಂತ್ರಣಕ್ಕೆ ಸಹಾಯ ಮಾಡುವುದು.  

ಹೊಟ್ಟೆ ನೋವು :   

ಆಗಾಗ ಹೊಟ್ಟೆನೋವು, ಬೇದಿ ಇರುವಾಗ ಮಜ್ಜಿಗೆಗೆ ಶುಂಠಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.

ತುರಿಕೆ:

ಚರ್ಮದಲ್ಲಿ ಅಲರ್ಜಿ ತುರಿಕೆ ಇತ್ತೀಚಿನ ದಿನಗಳಲ್ಲಿ ಕಂಡುಬರುವ ವಿಶೇಷ ತೊಂದರೆ. ಹಸಿ ಶುಂಠಿರಸ 1 ಚಮಚಕ್ಕೆ ಹಳೆಬೆಲ್ಲ ಸ್ವಲ್ಪ ಸೇರಿಸಿ 24 ದಿನದಿಂದ 30 ದಿನ ಸೇವಿಸಿದರೆ ಪರಿಹಾರವಾಗುವುದು. 

ಕೆಮ್ಮುಕಫ:  

 ಶುಂಠಿ ಪುಡಿಮಾಡಿ ಕಷಾಯ ಮಾಡಿ ಜೇನು ಸೇರಿಸಿ ಕುಡಿದರೆ ಕೆಮ್ಮು ಕಡಿಮೆಯಾಗುವುದು. ಅಜೀರ್ಣ ಇರುವವರಿಗೆ ಕಫದ ತೊಂದರೆ ಜಾಸ್ತಿ. ಶುಂಠಿ ಜೀರ್ಣಕ್ರಿಯೆ ಉತ್ತಮ ಮಾಡುವುದರಿಂದ ಕಫವನ್ನು ಕಡಿಮೆಮಾಡುವುದು.

ಅಲರ್ಜಿ ಶೀತ:

ಹಸಿ ಶುಂಠಿ ರಸಕ್ಕೆ ಕಲ್ಲು ಸಕ್ಕರೆ ಹಾಕಿ ಪ್ರತಿದಿನ ಬೆಳಗ್ಗೆ 2 ರಿಂದ 3 ವಾರ ಸೇವಿಸಿದರೆ ಬೆಳಗ್ಗಿನ ಹೊತ್ತು ಸೀನುವುದು, ಶೀತವಾಗುವುದು ಕಡಿಮೆಯಾಗುತ್ತದೆ.

ಡಾ| ಹರಿಕೃಷ್ಣ ಪಾಣಾಜೆ

 

Leave a comment

This website uses cookies to improve your web experience.